Delhi AQI: ರಾಷ್ಟ್ರ ರಾಜಧಾನಿಗೆ ಹೊಗೆ ಕಂಟಕ, ಮಳೆ ಬರದೇ ಇದ್ದರೆ ಪರಿಸ್ಥಿತಿ ಮತ್ತಷ್ಟು ಭೀಕರ
ದೆಹಲಿ ಪರಿಸ್ಥಿತಿ ಮತ್ತಷ್ಟು ಭೀಕರವಾಗಿದೆ, ಚಳಿಗಾಲ ಬಂತು ಅಂದರೆ ಸಾಕು ದೆಹಲಿಯ ಜನ ಚಿಂತೆ ಮಾಡುವಂತೆ ಆಗುತ್ತದೆ. ಉಸಿರಾಡಲು ಕೂಡ ಪರದಾಡುವ ಪರಿಸ್ಥಿತಿ ದೆಹಲಿ ನಿವಾಸಿಗಳಿಗೆ ಪ್ರತಿವರ್ಷ ಎದುರಾಗುತ್ತದೆ. ಈ ವರ್ಷ ಕೂಡ ಅದೇ ರೀತಿಯಾಗಿ ದೆಹಲಿಯ ವಾತಾವರಣ ಹಾಳಾಗಿ ಹೋಗಿದ್ದು, ಜನರು ಒದ್ದಾಡುತ್ತಿದ್ದಾರೆ. ಇಂದು ಬೆಳಗ್ಗೆಯಿಂದಲೇ ದೆಹಲಿ ಸುತ್ತಮುತ್ತ ಭಾರಿ ದಟ್ಟ ಹೊಗೆ ಪದರ ಆವರಿಸಿತ್ತು, ವಾಯು ಗುಣಮಟ್ಟ ಸೂಚ್ಯಂಕವು ಸಂಪೂರ್ಣ ಆತಂಕ ಮೂಡಿಸುವ ಹಂತಕ್ಕೆ ಎಂದರೆ 370ರ ಆಸುಪಾಸಿಗೆ ಬಂದು ತಲುಪಿತ್ತು. ಇನ್ನೂ ಕೆಲ ಪ್ರದೇಶಗಳಲ್ಲಿ ಇದು 400ರ ಗಡಿ ದಾಟಿದ್ದು ಜನರಿಗೆ ಉಸಿರಾಡಲು ಕೂಡ ತೊಂದರೆ ಮಾಡುತ್ತಿದೆ.
ದೆಹಲಿ ಸರ್ಕಾರ ಕ್ರಮ ಕೈಗೊಂಡಿದ್ದರೂ ವಾತಾವರಣ ನಿಭಾಯಿಸಲು ಆಗುತ್ತಿಲ್ಲ. ದೆಹಲಿ ಸರ್ಕಾರದ ಜೊತೆ ಸ್ಥಳೀಯ ಪಾಲಿಕೆಗಳು ಕೂಡ ಅಗತ್ಯ ಇರುವ ಕ್ರಮಗಳನ್ನು ಜಾರಿಗೆ ತರುತ್ತಿದ್ದು, ಈಗಿನ ಪರಿಸ್ಥಿತಿ ನೋಡಿದರೆ ಇದ್ಯಾವುದೂ ವಾತಾವರಣ ತಿಳಿಗೊಳಿಸುವ ಲಕ್ಷಣ ಕಾಣುತ್ತಿಲ್ಲ. ಜನ ಮನೆಯಿಂದ ಹೊರಗೆ ಬರಲು ನೂರು ಬಾರಿ ಯೋಚನೆ ಮಾಡುವ ಪರಿಸ್ಥಿತಿ ಇದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ಪ್ರಕಾರ ಪಾಂಡವ್ ನಗರದ ವಾಯು ಗುಣಮಟ್ಟ ಸೂಚ್ಯಂಕ 445ಕ್ಕೆ ಕುಸಿತ ಕಂಡಿದ್ದರೆ, ಇದೇ ರೀತಿ ಇತರ ಹಲವು ಪ್ರದೇಶಗಳಲ್ಲಿ ಎಕ್ಯೂಐ 400ರ ಗಡಿಯನ್ನು ದಾಟಿದ್ದು ಪರಿಸ್ಥಿತಿ ಗಂಭೀರ ಹಂತ ತಲುಪುವಂತೆ ಮಾಡಿತ್ತು.

ವಾತಾವರಣ ತಿಳಿಗೊಳಿಸಲು ತಕ್ಷಣ ಕ್ರಮ ಅಗತ್ಯ
ರಾಷ್ಟ್ರ ರಾಜಧಾನಿ ಜನರು ಈಗ ನೆಮ್ಮದಿಯಾಗಿ ಉಸಿರಾಡಬೇಕು ಎಂದರೆ ಮೊದಲಿಗೆ ಮಾಲಿನ್ಯಕಾರಕ ವಾಹನಗಳನ್ನ ನಿರ್ಬಂಧಿಸುವ ನಿರ್ಧಾರ ಕೈಗೊಳ್ಳಬೇಕಿದೆ. ಇದರ ಜೊತೆ ಕಟ್ಟಡ ನಿರ್ಮಾಣ ಸೇರಿದಂತೆ ಇತರ ಎಲ್ಲಾ ಕಾಮಗಾರಿಗಳಿಗೆ ಬ್ರೇಕ್ ಹಾಕಬೇಕಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇದರ ಜೊತೆ ಬಯಲಲ್ಲಿ ಇಂಧನ ಹಾಗೂ ಇತರ ವಸ್ತುಗಳ ದಹನಕ್ಕೆ ಕೂಡ ನಿರ್ಬಂಧ ಹೇರಬೇಕಾದ ಪರಿಸ್ಥಿತಿ ಇದೆ. ಅಕಸ್ಮಾತ್ ತಕ್ಷಣ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಪರಿಸ್ಥಿತಿ ಹೀಗೆ ಮುಂದುವರಿಯಲು ಬಿಟ್ಟರೆ, ಕೆಲವೇ ದಿನಗಳಲ್ಲಿ ವಾತಾವರಣ ಇನ್ನಷ್ಟು ವಿಷಕಾರಿ ಆಗುವ ಸಂಭವವು ಹೆಚ್ಚಾಗಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಮಕ್ಕಳು ಹಾಗೂ ವೃದ್ಧರಿಗೆ ಭಾರಿ ಸಮಸ್ಯೆ
ದೆಹಲಿ ವಾತಾವರಣ ಬದಲಾವಣೆ ಪರಿಣಾಮ ಅತಿಹೆಚ್ಚು ಸಮಸ್ಯೆ ಕಾಡುತ್ತಿರುವುದು ಮಕ್ಕಳು ಹಾಗೂ ವೃದ್ಧರಿಗೆ. ಈ ವಾತಾವರಣ ಎದುರಿಸುವ ಶಕ್ತಿ ಇಬ್ಬರಲ್ಲೂ ಕಡಿಮೆ ಇರುವ ಕಾರಣಕ್ಕೆ, ಮಾಲಿನ್ಯದ ಪರಿಣಾಮವನ್ನು ಇವರೇ ಮೊದಲು ಎದುರಿಸುವಂತೆ ಆಗಿದೆ. ಉಸಿರಾಡಲು ಪರದಾಟ ಮತ್ತು ಹೊರಗೆ ಬಂದರೆ ಕಣ್ಣು ಹಾಗೂ ಚರ್ಮ ಉರಿ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ವೈದ್ಯರು ಕೂಡ ಅನಗತ್ಯವಾಗಿ ಹೊರಗೆ ಓಡಾಡದಂತೆ ಸಲಹೆ ನೀಡುತ್ತಿದ್ದಾರೆ. ಇನ್ನೂ ಕೆಲ ತಿಂಗಳು ದೆಹಲಿ ವಾತಾವರಣ ಇದೇ ಇರುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಸಾಕಷ್ಟು ಜನ ಇದೇ ಮಾಲಿನ್ಯದ ಕಾರಣಕ್ಕೆ, ದೆಹಲಿ ಬಿಟ್ಟು ಬೇರೆ ಬೇರೆ ಊರುಗಳಿಗೆ ಸ್ಥಳಾಂತರಗೊಂಡ ಉದಾಹರಣೆಗಳೂ ಇವೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications