• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೈದ್ಯೆ ಮೇಲೆ ಅತ್ಯಾಚಾರ ಪ್ರಕರಣ: ಡಿಸೆಂಬರ್ 10ರಂದು ಭಾರತ ಬಂದ್?

|

ಬೆಂಗಳೂರು, ಡಿಸೆಂಬರ್ 4: ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ, ಹತ್ಯೆಗೆ ಸಂಬಂಧಿಸಿದಂತೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಈ ನಿಟ್ಟಿನಲ್ಲಿ ಡಿಸೆಂಬರ್ 10ರಂದು ಭಾರತ ಬಂದ್ ಮಾಡಿ ಎನ್ನುವ ಒತ್ತಾಯ ಕೂಡ ಕೇಳಿಬಂದಿದೆ. ಅತ್ಯಾಚಾರಿಗಳಿಗೆ ಶಿಕ್ಷೆಯಾಗಲೇಬೇಕು, ಅವರನ್ನು ಗಲ್ಲಿಗೇರಿಸಿ ಎನ್ನುವ ಆಕ್ರೋಶಭರಿತ ಮಾತು ಕೇಳಿಬರುತ್ತಿದೆ.

ಪಂಕ್ಚರ್ ಆಯಿತೆಂದು ಗಾಡಿ ನಿಲ್ಲಿಸಿದ ಪಶುವೈದ್ಯೆ, ಸಿಕ್ಕಿದ್ದು ಸುಟ್ಟ ಶವವಾಗಿಪಂಕ್ಚರ್ ಆಯಿತೆಂದು ಗಾಡಿ ನಿಲ್ಲಿಸಿದ ಪಶುವೈದ್ಯೆ, ಸಿಕ್ಕಿದ್ದು ಸುಟ್ಟ ಶವವಾಗಿ

ನಿರ್ಭಯಾ ಪ್ರಕರಣ ನಡೆದ ಏಳು ವರ್ಷಗಳು ಕಳೆದರೂ ದೇಶದ ಸ್ಥಿತಿ ಇನ್ನೂ ಬದಲಾದಂತೆ ಕಾಣುತ್ತಿಲ್ಲ. ಕ್ರೂರ ಮನಸ್ಥಿತಿಯುಳ್ಳವರು ಮುಂದೆಂದೂ ಈ ರೀತಿ ಕೃತ್ಯಗಳನ್ನು ಮಾಡುವ ಮನಸ್ಸು ಮಾಡಬಾರದು ಅಂತಹ ಶಿಕ್ಷೆ ಆರೋಪಿಗಳಿಗೆ ವಿಧಿಸಬೇಕು ಎನ್ನುವ ಧ್ವನಿಯೂ ಇದ್ದಿದೆ. ಇದೀಗ 'ಹ್ಯಾಷ್‌ಟ್ಯಾಗ್ ಡಿಸೆಂಬರ್ 10 ಭಾರತ್ ಬಂದ್' ಎನ್ನುವುದು ಟ್ವಿಟ್ಟರ್‌ನಲ್ಲಿ ಟ್ರೆಂಟ್ ಆಗುತ್ತಿದೆ.

ಡಿಸೆಂಬರ್ 10ರಂದು ಸ್ವಯಂ ಪ್ರೇರಿತ ಭಾರತ ಬಂದ್ ಆಗುವ ಎಲ್ಲಾ ಲಕ್ಷಣಗಳು ಗೋಚರಿಸಿದೆ.ಇತ್ತೀಚೆಗೆ ಹೈದರಾಬಾದ್‌ನಲ್ಲಿ ಪಶು ವೈದ್ಯೆ ಮೇಲೆ ಲಾರಿ ಚಾಲಕ ಹಾಗೂ ಕ್ಲೀನರ್ ಒಟ್ಟು ನಾಲ್ಕು ಮಂದಿ ಸೇರಿ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದರು.

ಪಶುವೈದ್ಯೆ ಮೇಲೆ ಅತ್ಯಾಚಾರ; ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?ಪಶುವೈದ್ಯೆ ಮೇಲೆ ಅತ್ಯಾಚಾರ; ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?

ಘಟನೆ ನಡೆದು ಸುಮಾರು 10 ತಾಸುಗಳ ಬಳಿಕ ಸುಟ್ಟ ರೀತಿಯಲ್ಲಿ ಶವ ಪತ್ತೆಯಾಗಿತ್ತು. ಪೊಲೀಸರಿಗೆ ಪೆಟ್ರೋಲ್ ಬಂಕ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

English summary
Indians called Bharath Bandh On December 10 Against Hyderabad Doctor Rape and murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X