ಆಸ್ಟ್ರಾಜೆನೆಕಾ ಲಸಿಕೆ ಪ್ರಯೋಗಕ್ಕೆ ನೇಮಕಾತಿ ರದ್ದುಪಡಿಸುವಂತೆ ಡಿಸಿಜಿಐ ಆದೇಶ
ನವದೆಹಲಿ, ಸೆಪ್ಟೆಂಬರ್ 12: ಆಸ್ಟ್ರಾನೆಜೆಕಾ ಲಸಿಕೆ ಪ್ರಯೋಗಕ್ಕೆ ನೇಮಕಾತಿಯನ್ನು ರದ್ದುಪಡಿಸುವಂತೆ ಸೆರಂ ಇನ್‌ಸ್ಟಿಟ್ಯೂಟ್‌ಗೆ ಡಿಸಿಜಿಐ ಆದೇಶಿಸಿದೆ.
ಆದೇಶದ ಪ್ರತಿ ಪಿಟಿಐ ಸುದ್ದಿಸಂಸ್ಥೆಗೆ ಲಭ್ಯವಾಗಿದ್ದು, ಅದರಲ್ಲಿ ಡಿಸಿಜಿಐನ ಡಾ ವಿ ಜಿ ಸೊಮನಿ ಸೇರಂ ಇನ್ಸ್ ಟಿಟ್ಯೂಟ್ ಗೆ ಆದೇಶ ನೀಡಿ ಪ್ರಯೋಗದ ಭಾಗವಾಗಿ ಈಗಾಗಲೇ ಪ್ರಯೋಗ ನಡೆಸಿರುವ ಲಸಿಕೆಯ ಸುರಕ್ಷತೆ ಬಗ್ಗೆ ನಿಗಾವಹಿಸುವಂತೆ, ಮತ್ತು ಕಂಪೆನಿ ಏನೇನು ಯೋಜನೆ ಹಾಕಿಕೊಂಡಿದೆ ಎಂಬುದನ್ನು ತಿಳಿಸುವಂತೆ ವರದಿ ಸಲ್ಲಿಸಬೇಕೆಂದು ಹೇಳಿದೆ.
ಆಸ್ಟ್ರಾಜೆನೆಕಾ ಫಾರ್ಮಾ ಕಂಪೆನಿ ಕೊವಿಡ್-19 ಲಸಿಕೆಯ ಪ್ರಯೋಗವನ್ನು ಬೇರೆ ದೇಶಗಳಲ್ಲಿ ನಿಲ್ಲಿಸಿರುವುದರಿಂದ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಜೊತೆ ಕೊವಿಡ್-19ನ ಎರಡು ಮತ್ತು ಮೂರನೇ ಹಂತದ ಪ್ರಯೋಗಕ್ಕೆ ನೇಮಕಾತಿಯನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಬ್ರಿಟನ್-ಸ್ವೀಡನ್ ಮೂಲದ ಬಯೊ ಫಾರ್ಮಾಸುಟಿಕಲ್ ಕಂಪೆನಿ ಅಸ್ಟ್ರಾಝೆನಕಾ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಜೊತೆ ಸೇರಿಕೊಂಡು ಲಸಿಕೆ ಅಭಿವೃದ್ಧಿಪಡಿಸುತ್ತಿತ್ತು. ಅವುಗಳ ಜೊತೆ ಪುಣೆ ಮೂಲದ ಸೆರಂ ಇನ್ಸ್ ಟಿಟ್ಯೂಟ್ ಸಹಭಾಗಿತ್ವ ಹೊಂದಿದೆ. ಶೋಕಾಸ್ ನೊಟೀಸ್ ಬಂದ ನಂತರ ಲಸಿಕೆ ಪ್ರಯೋಗವನ್ನು ಸ್ಥಗಿತಗೊಳಿಸುವುದಾಗಿ ಕಂಪೆನಿ ತಿಳಿಸಿದೆ.
ಪ್ರಯೋಗದಲ್ಲಿ ಮುಂದಿನ ದಿನಗಳಲ್ಲಿ ಮಾಡಿಕೊಳ್ಳುವ ನೇಮಕಾತಿಗೆ ಮುನ್ನ ಡಿಸಿಜಿಐಯಿಂದ ಅನುಮತಿ ಪಡೆಯಲು ಮತ್ತು ಇಂಗ್ಲೆಂಡಿನ ದತ್ತಾಂಶ ಮತ್ತು ಸುರಕ್ಷತೆ ನಿರ್ವಹಣೆ ಮಂಡಳಿಯಿಂದ ಅನುಮೋದನೆ ಪಡೆದಿರುವ ಬಗ್ಗೆ ಅನುಮತಿ ಸಲ್ಲಿಸುವಂತೆ ಕೂಡ ಸೊಮನಿ ಆದೇಶ ನೀಡಿದ್ದಾರೆ.












Click it and Unblock the Notifications