ಅಮೆರಿಕಾದಿಂದ ಬಂದ ಮರುದಿನವೇ ಕೆಲಸಕ್ಕೆ ಮರಳಿದ ಪರಿಕ್ಕರ್
ಪಣಜಿ, ಜೂನ್ 15: ದೀರ್ಘ ಕಾಲದ ಚಿಕಿತ್ಸೆಯ ನಂತರ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗುರುವಾರ ಗೋವಾಕ್ಕೆ ವಾಪಸಾಗಿದ್ದರು. ಅಮೆರಿಕಾದಲ್ಲಿ ಪಾನ್ ಕ್ರಿಯಾಟಿಕ್ ಅಲ್ಮೆಂಟ್ ಖಾಯಿಲೆಗೆ ಅವರು ಚಿಕಿತ್ಸೆ ಪಡೆದುಕೊಂಡಿದ್ದರು.
ಕಳೆದ ಮಾರ್ಚ್ 7ರಿಂದ 62 ವರ್ಷದ ಪರಿಕ್ಕರ್ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗೋವಾದ ರಾಜಧಾನಿ ಪಣಜಿಗೆ ಗುರುವಾರ ಮರಳಿದ ಅವರು ಇಂದು (ಶುಕ್ರವಾರ) ಕೆಲಸಕ್ಕೆ ಹಾಜರಾಗಿದ್ದಾರೆ.
ಇಂದು ಮೊದಲಿಗೆ ಅವರು ಕುಟಂಬ ಸದಸ್ಯರೊಂದಿಗೆ ಪಣಜಿಯಿಂದ ಹೊರಗೆ ಖಂಡೋಲಾದಲ್ಲಿರುವ ದೇವಕಿ ಕೃಷ್ಣ ದೇವಸ್ಥಾನವೊಂದಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ವಾಪಸ್ ಬಂದು ಪಣಜಿಯಲ್ಲಿ ಮಹಾಲಕ್ಷ್ಮೀ ದೇವಾಲಯದಲ್ಲೂ ಪೂಜೆ ಸಲ್ಲಿಸಿದರು.

ನಂತರ ಅವರು ತಮ್ಮ ಕಚೇರಿಗೆ ಬಂದು ಹಿರಿಯ ಅಧಿಕಾರಿಗಳು ಮತ್ತು ಪೊಲೀಸರ ಸಭೆ ನಡೆಸಿದರು. ಗೋವಾದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಅಧಿಕಾರಿಗಳ ಜೊತೆಗೆ ಅವರು ಚರ್ಚೆ
ನಡೆಸಿದರು.












Click it and Unblock the Notifications