ಮುಂಬೈನಲ್ಲೂ ದಾವಣಗೆರೆ ಬೆಣ್ಣೆ ದೋಸೆ ಕಂಪು: ಉದ್ಯೋಗ ಬಿಟ್ಟು ತಿಂಗಳಿಗೆ 1 ಕೋಟಿ ರೂ. ಗಳಿಸುತ್ತಿರುವ ದಂಪತಿ
ಕೈ ತುಂಬ ಸಂಬಳ ಬರುತ್ತಿದ್ದ ಕೆಲಸವನ್ನಾ ಬಿಟ್ಟು, ತಮ್ಮ ನೆಚ್ಚಿನ ದಾವಣಗೆರೆ ಬೆಣ್ಣೆ ದೋಸೆಯ ರುಚಿಯನ್ನ ಮುಂಬೈನಲ್ಲಿರುವ ಜನರಿಗೆ ಉಣಬಡಿಸಲು ಮುಂದಾಗಿರುವ ದಂಪತಿಗಳ ಯಶೋಗಾಥೆ ಇದು ನೋಡಿ.
ಕುಳಿತುಕೊಳ್ಳಲು ಇರುವುದು ಕೇವಲ 12 ಆಸನ, ಈ ಸಣ್ಣ ಕೆಫೆಯೊಂದಿಗೆ ಶುರುವಾದ ಇವರ ವ್ಯಾಪಾರ ಇಂದು ಇವರು ಪ್ರತಿದಿನ 800ಕ್ಕೂ ಹೆಚ್ಚು ದೋಸೆಗಳನ್ನ ಮಾರಾಟ ಮಾಡುವ ಮಟ್ಟಕ್ಕೆ ಬೆಳೆಸಿದ್ದಾರೆ. ಈ ದಂಪತಿಗಳಿಗೆ ಇದು ಕೇವಲ ದೋಸೆಯಲ್ಲ, ಬದಲಿಗೆ ತಾಯ್ನಾಡಿನ ರುಚಿಯನ್ನ ನೆನಪಿಸುವ ಸ್ಫೂರ್ತಿದಾಯಕ ಪಯಣ.

ಮುಂಬೈನಲ್ಲಿ ದಾವಣಗೆರೆ ಬೆಣ್ಣೆ ದೋಸೆ ಹುಡುಕಾಟ
ಬೆಂಗಳೂರಿನಿಂದ ಮುಂಬೈಗೆ ತೆರಳಿದ್ದ ಈ ನವ ದಂಪತಿಗಳಾದ ಅಖಿಲ್ ಅಯ್ಯರ್ ಮತ್ತು ಶ್ರಿಯಾ ನಾರಾಯಣ್ ಅವರಿಗೆ ಮುಂಬೈನಲ್ಲಿ ದಾವಣಗೆರೆ ಬೆಣ್ಣೆ ದೋಸೆಯ ಸಿಗದೇ ಇರುವುದು ಬೇಸರ ಉಂಟು ಮಾಡಿತ್ತು. ಕಚೇರಿ ಕೆಲಸದ ನಡುವೆಯೂ, ಬಿಸಿ ಬಿಸಿಯಾದ, ದಾವಣಗೆರೆ ಶೈಲಿಯ ಬೆಣ್ಣೆ ಕರಗುವ ದೋಸೆಗಾಗಿ ಮುಂಬೈನ ಮೂಲೆ ಮೂಲೆಯಲ್ಲೂ ಹುಡುಕಾಡಿದ್ದರು. ಆದರೆ ಅವರಿಗೆ ಎಲ್ಲಿಯೂ ಊರಿನ ಸಿಗುವ ದೋಸೆ ರೀತಿಯ ಸಾಂಪ್ರದಾಯಿಕ ರುಚಿ ಸಿಗಲೇ ಇಲ್ಲ. ತೀವ್ರ ನಿರಾಸೆಯಾದರೂ ಛಲ ಬಿಡದ ಈ ದಂಪತಿ, ತಾವೇ ಸ್ವತಃ ದೋಸೆ ಹೋಟೆಲ್ ಆರಂಭಿಸಬೇಕು ಎನ್ನುವ ದೃಢ ನಿರ್ಧಾರ ಒಂದನ್ನಾ ತಗೆದುಕೊಂಡರು. ಇದಕ್ಕಾಗಿ ಕೈತುಂಬಾ ಸಂಬಳ ತರುತ್ತಿದ್ದ ಕೆಲಸಕ್ಕೆ ಇಬ್ಬರು ರಾಜೀನಾಮೆ ನೀಡಿದರು.
ಹೊಟೇಲ್ ಉದ್ಯಮದ ಯಾವುದೇ ಪೂರ್ವ ಹಿನ್ನೆಲೆ ಇಲ್ಲದಿದ್ದರೂ, ಸ್ವಲ್ಪ ಬಂಡವಾಳ ಹಾಕಿ ಮುಂಬೈನ ಪ್ರಮುಖ ಪ್ರದೇಶವಾದ ಬಾಂದ್ರಾದಲ್ಲಿ ಕುಳಿತುಕೊಳ್ಳಲು ಕೇವಲ 12 ಸೀಟುಗಳಿರುವ 'ಬೆಣ್ಣೆ' ಎಂಬ ಸಣ್ಣ ಕೆಫೆಯನ್ನ ಆರಂಭಿಸಿದರು. ತಾವು ಬಾಲ್ಯದಲ್ಲಿ ಸವಿದಿದ್ದ, ಅಪ್ಪಟ ದಾವಣಗೆರೆ ದೋಸೆಯ ರುಚಿಯನ್ನೇ ಗ್ರಾಹಕರಿಗೆ ನೀಡಬೇಕು ಎಂಬುದು ಅವರ ಗುರಿಯಾಗಿತ್ತು. ಆದರೆ ಈ ಹಾದಿ ಖಂಡಿತ ಅಷ್ಟು ಸುಲಭವಾಗಿರಲಿಲ್ಲ.
ಮೊದ ಮೊದಲು ಈ ದೋಸೆ ಹಿಟ್ಟನ್ನ ಸರಿಯಾಗಿ ಹದಗೊಳಿಸಲು ಹಗಲಿರುಳು ಶ್ರಮಿಸಿದರು. ಇಂದು ಈ ಮಟ್ಟಿಗೆ ಬಂದಿದೆ ಎಂದರೆ ಅದರ ಹಿಂದೆ ಹಲವು ತಿಂಗಳುಗಳ ಕಾಲದ ಕಠಿಣ ಪರಿಶ್ರಮವಿದೆ. ಚಟ್ನಿ ಪಾಕವಿಧಾನಗಳನ್ನ ಪರೀಕ್ಷಿಸುವಾಗ ಹಲವು ಬಾರಿ ಸೋತಿದ್ದರು ಎದುರಿಸಿದರು. ಆದರೂ ಹೆದರದೆ, ದಾವಣಗೆರೆ ಬೆಣ್ಣೆ ದೋಸೆಯ ರುಚಿಗಾಗಿ ಕರ್ನಾಟಕದಿಂದಲೇ ವಿಶೇಷವಾಗಿ ಎರಕಹೊಯ್ದ ಕಬ್ಬಿಣದ ಕಾವಲಿಗಳನ್ನ ಮುಂಬೈಗೆ ತರಿಸಿಕೊಂಡರು. ಇದರ ಜೊತೆಗೆ ತಾವು ಈ ಕೆಫೆಗೆ ಹಾಕುತ್ತಿರುವ ಪ್ರತಿಯೊಂದು ರೂಪಾಯಿಯನ್ನೂ ಎಚ್ಚರಿಕೆಯಿಂದ ಬಳಸಿದರು ಹಾಗೂ ಎದುರಿಸಿದ ಪ್ರತಿಯೊಂದು ತಪ್ಪುಗಳಿಂದಲೂ ಹೊಸ ಪಾಠ ಕಲಿತರು.
Meet Akhil & Shriya, a couple who quit their jobs to chase a craving — the perfect Davangere-style dosa! 🍽️😋
— The Better India (@thebetterindia) July 25, 2026
From a tiny 12-seater café in Bandra to serving 800+ dosas daily, their journey is pure passion and nostalgia. 💛
It’s not just food, it’s home on a plate.… pic.twitter.com/WNxr7gPxfL
ಯಾವುದೇ ಫ್ಯೂಷನ್ ಇಲ್ಲದ ಅಪ್ಪಟ ರುಚಿ
'ಬೆಣ್ಣೆ' ಕೆಫೆಯಲ್ಲಿ ಯಾವುದೇ ರೀತಿಯ ಆಧುನಿಕ ಫ್ಯೂಷನ್ ಪ್ರಯೋಗವಿಲ್ಲ, ಕೇವಲ ಹಳೆಯ ನೆನಪುಗಳನ್ನ ಮರುಕಳಿಸುವ ಅಪ್ಪಟ ಸಾಂಪ್ರದಾಯಿಕ ರುಚಿ ಮಾತ್ರ ಇಲ್ಲಿದೆ. ಚಿನ್ನದ ಬಣ್ಣದ ಗರಿಗರಿಯಾದ ದೋಸೆಯನ್ನ ಕರಗಿದ ತುಪ್ಪದೊಂದಿಗೆ ಬಡಿಸಲಾಗುತ್ತದೆ. ಈ ರುಚಿಯ ಬಗ್ಗೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಜೊತೆಗೆ ಕೆಫೆಯತ್ತ ಜನಸಾಗರವೇ ಹರಿದುಬರತೊಡಗಿತು. ಇಂದು ಈ ಕೆಫೆಯಲ್ಲಿ ಪ್ರತಿದಿನ 800ಕ್ಕೂ ಹೆಚ್ಚು ದೋಸೆಗಳು ಮಾರಾಟವಾಗುತ್ತಿದ್ದು, ಈ ಯುವ ದಂಪತಿ ಕೇವಲ ದೋಸೆ ಮಾರಿ ತಿಂಗಳಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಆದಾಯ ಗಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಭೇಟಿ
ಈ ಕೆಫೆಯ ಜನಪ್ರಿಯತೆ ಎಷ್ಟರಮಟ್ಟಿಗೆ ಬೆಳೆಯಿತೆಂದರೆ, ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ದಿಢೀರ್ ಭೇಟಿ ನೀಡಿ ದಂಪತಿಗೆ ಅಚ್ಚರಿ ಹಾಗೂ ಸಂತಸ ಮೂಡಿಸಿದ್ದರು. ದೋಸೆ ಸವಿದ ಅನುಷ್ಕಾ ಶರ್ಮಾ ಅವರು, "ಇದು ನನ್ನ ಬಾಲ್ಯದ ನೆನಪುಗಳನ್ನ ಮರುಕಳಿಸುವಂತೆ ಮಾಡಿತು" ಎಂದು ತಮ್ಮ ಸಂತಸ ಹಂಚಿಕೊಂಡಿದ್ದರಂತೆ.


Click it and Unblock the Notifications
