'ಡ್ಯಾನ್ಸಿಂಗ್ ಅಂಕಲ್' ಈಗ ಸರಕಾರದ ಬ್ರ್ಯಾಂಡ್ ಅಂಬಾಸಿಡರ್
ಭೋಪಾಲ್, ಜೂನ್ 3: ತಮ್ಮ ವಿಶಿಷ್ಟ ನೃತ್ಯದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ ಮಧ್ಯ ಪ್ರದೇಶದ ಪ್ರೊಫೆಸರ್ ಸಂಜೀವ್ ಶ್ರೀವಾಸ್ತವ ಅವರೀಗ ಮಹಾನಗರ ಪಾಲಿಕೆಯೊಂದರ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ.
46 ವರ್ಷದ ಎಲೆಕ್ಟ್ರಾನಿಕ್ಸ್ ಪ್ರೊಫೆಸರ್ ಅವರನ್ನು ತಮ್ಮ ಬ್ರ್ಯಾಂಡ್ ಅಂಬಾಸಿಡರ್ ಆಗಿ ವಿದಿಶಾ ಮಹಾನಗರ ಪಾಲಿಕೆ ನೇಮಕ ಮಾಡಿದೆ.
ಮದುವೆ ಸಮಾರಂಭವೊಂದರಲ್ಲಿ ಸಂಜೀವ್ ಶ್ರೀವಾಸ್ತವ ಅವರು ಮಾಡಿದ ಡ್ಯಾನ್ಸ್ ಭಾರೀ ಜನ ಮೆಚ್ಚುಗೆ ಗಳಸಿತ್ತು. ಬಾಲಿವುಡ್ ನಟ ಗೋವಿಂದ ಅವರ 'ಆಪ್ ಕೆ ಆ ಜಾನೇ ಸೇ' ಹಾಡಿಗೆ ಸಂಜೀವ್ ಮಾಡಿದ ಡ್ಯಾನ್ಸ್ ಗೆ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಮೆಚ್ಚುಗೆಗೂ ಪಾತ್ರವಾಗಿತ್ತು.

ಹೀಗೆ ರಾತೋರಾತ್ರಿ ದೇಶದಾದ್ಯಂತ ಜನಮೆಚ್ಚುಗೆ ಗಳಿಸಿದ ಸಂಜೀವ್ ಶ್ರೀವಾಸ್ತವ ಅವರ ಅಪಾರ ಜನಪ್ರಿಯತೆಗೆ ಮನಗಂಡಿರುವ ವಿದಿಶಾ ಪಾಲಿಕೆ ಅವರನ್ನೇ ತನ್ನ ರಾಯಭಾರಿಯನ್ನಾಗಿಸಿದೆ.












Click it and Unblock the Notifications