Lok sabha election 2024: ಮತ್ತೆ ಮೋದಿಗೆ ಕಮಾಲ್ ಎಂದ ಸಮೀಕ್ಷೆ; ಇಂಡಿಯಾ ಮೈತ್ರಿ ಕೂಟಕ್ಕೆ ಎಷ್ಟು ಸ್ಥಾನ?
ಇನ್ನೇನು ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಹಲವು ಚುನಾವಣೆ ಪೂರ್ವ ಸಮೀಕ್ಷೆಗಳ ವರದಿಗಳು ಬಹಿರಂಗಗೊಂಡಿವೆ. ಇನ್ನು ಡೈಲಿಹಂಟ್ ಸಹ ತನ್ನ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಿದೆ. ಈ ಸಮೀಕ್ಷೆಯ ಪ್ರಕಾರ ಕೇಂದ್ರದಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧನೆ ಮಾಡಲಿದೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಈ ಸಮೀಕ್ಷೆಗೆ ಡೈಲಿಹಂಟ್ 11 ರಾಜ್ಯಗಳಲ್ಲಿ ಸುಮಾರು 77 ಲಕ್ಷ ಜನರೊಂದಿಗೆ ಚರ್ಚೆ ನಡೆಸಿದೆ. ಈ ಸಮೀಕ್ಷೆ ವೇಳೆ ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಲಾಗಿದ್ದು, ಅದರ ಆಧಾರದ ಮೇಲೆ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಲಾಗಿದೆ. ಸಮೀಕ್ಷೆಗೆ ಒಳಗಾದ ಶೇಕಡಾ 64 ಜನರು ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ರಚನೆ ಅಗಲಿದೆ ಎಂದು ತಿಳಿಸಿದ್ದಾರೆ. ಈ ವರ್ಷದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಬಹುಮತ ಪಡೆಯಲಿದೆ ಎಂದು 63 ಪ್ರತಿಶತ ಜನರು ನಂಬಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಿದೆ.

ಕರ್ನಾಟಕದಲ್ಲಿನ ಸಮೀಕ್ಷೆ ಯಾವ ಕಥೆ ಹೇಳುತ್ತದೆ
ಕರ್ನಾಟಕದಲ್ಲಿನ ಜನತೆ ಸಹ ಮೋದಿ ಸರ್ಕಾರಕ್ಕೆ ಜೈ ಎಂದಿದ್ದಾರೆ. ರಾಜ್ಯದಲ್ಲಿ ಡೈಲಿಹಂಟ್ ಸಮೀಕ್ಷೆಗೆ ಒಳಗಾದ ಶೇಕಡಾ 72 ರಷ್ಟು ಜನ ಮೋದಿ ಅವರು ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವುದಾಗಿ ತಿಳಿಸಿದ್ದಾರೆ. ಇನ್ನು ಕೇವಲ 20 ಪ್ರತಿಷತದಷ್ಟು ಜನರು ಮಾತ್ರ INDIA ಮೈತ್ರಿ ಕೂಟ ಗದ್ದುಗೆ ಏರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಕೇರಳದಲ್ಲಿ ಜಿದ್ದಾಜಿದ್ದಿನ ಫೈಟ್
ದಕ್ಷಿಣದ ರಾಜ್ಯಗಳಾದ ತಮಿಳುನಾಡಿನಲ್ಲಿ ರಾಹುಲ್ ಗಾಂಧಿಗೆ ಶೇ.44.1ರಷ್ಟು ಬೆಂಬಲ ವ್ಯಕ್ತವಾಗಿದ್ದರೆ, ನರೇಂದ್ರ ಮೋದಿಗೆ ಶೇ.43.2ರಷ್ಟು ಬೆಂಬಲ ವ್ಯಕ್ತವಾಗಿದೆ. ಕೇರಳದಲ್ಲಿ ಮೋದಿ ಮತ್ತು ರಾಹುಲ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದು, ಈ ರಾಜ್ಯದಲ್ಲಿ ಸಮೀಕ್ಷೆ ನಡೆಸಿದಾಗ ಪ್ರಧಾನಿ ಮೋದಿ 40.8% ಬೆಂಬಲಕ್ಕೆ ನಿಂತರೆ, ರಾಹುಲ್ ಗಾಂಧಿ ಪ್ರತಿಷತ 40.5 ಜನ ತಮ್ಮ ಸಪೋರ್ಟ್ ನೀಡಿದ್ದಾರೆ. ತೆಲಂಗಾಣದಲ್ಲಿ ಸಮೀಕ್ಷೆಗೆ ಒಳಗಾದ ಶೇಕಡಾ 60.1 ಜನರು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಕಾಂಗ್ರೆಸ್‌ಗೆ ಸಮೀಕ್ಷೆಯಲ್ಲಿ ಶೇಕಡಾ 26.5 ರಷ್ಟು ಜನರ ಬೆಂಬಲ ಮಾತ್ರ ಸಿಕ್ಕಿದೆ. ರಾಜ್ಯದವರೇ ಆದ ಎನ್ ಚಂದ್ರಬಾಬು ನಾಯ್ದು ಅವರ ಬೆಂಬಲಕ್ಕೆ ಶೇ.6.6ರಷ್ಟು ಸಮೀಕ್ಷೆಗೆ ಒಳಪಟ್ಟವರು ಬೆಂಬಲಿಸಿದ್ದಾರೆ. ಆಂಧ್ರಪ್ರದೇಶದಲ್ಲೂ ಇದೇ ಕಥೆ ಮುಂದುವರೆದಿದೆ. ಮೋದಿ 71.8%, ರಾಹುಲ್ ಗಾಂಧಿ 17.9%, ಚಂದ್ರಬಾಬು ನಾಯ್ಡು 7.4% ರಷ್ಟು ಸಮೀಕ್ಷೆಗೆ ಒಳಪಟ್ಟವರ ಚಿತ್ತ ಕದಿಯುವಲ್ಲಿ ಸಫಲರಾಗಿದ್ದಾರೆ.

ಮೋದಿ ಹ್ಯಾಟ್ರಿಕ್ ಕನಸಿಗೆ ಸಮೀಕ್ಷೆ ಪುಷ್ಠಿ
ಈ ಸಮೀಕ್ಷೆಯಲ್ಲೂ INDIA ಮೈತ್ರಿ ಕೂಟ ವಿರೋಧ ಪಕ್ಷದಲ್ಲಿ ಕೂಳಿತು ಕೊಳ್ಳಲಿದೆ ಎಂದು ತಿಳಿಸಿದೆ. ಇನ್ನು ಎನ್‌ಡಿಎ ಮೈತ್ರಿ ಕೂಟ ಅಧಿಕಾರಕ್ಕೆ ಬೇಕಾಗಿರುವ ಮ್ಯಾಜಿಕ್ ನಂಬರ್‌ನ್ನು ಸುಲಭವಾಗಿ ಕ್ರಾಸ್ ಮಾಡಿ ಅಧಿಕಾರದ ಗದ್ದುಗೆಯನ್ನು ಯಶಸ್ವಿಯಾಗಿ ಮೂರನೇ ಬಾರಿಗೆ ಏರಲಿದೆ ಎಂದು ಸಮೀಕ್ಷಾ ವರದಿ ಬಹಿರಂಗ ಪಡಿಸಿದೆ. ಕರ್ನಾಟಕದಲ್ಲಿ ಅತಿ ಹೆಚ್ಚಿನ ಸೀಟುಗಳನ್ನು ಗೆಲ್ಲುವ ಕಾಂಗ್ರೆಸ್ ಕನಸಿಗೆ ಸಮೀಕ್ಷೆ ಪೆಟ್ಟು ನೀಡಿದೆ. ಆದರೆ ಎಷ್ಟು ಸ್ಥಾನಗಳಲ್ಲಿ ಜಯ ಸಾಧಿಸಬಹುದು ಎಂದು ಬಹಿರಂಗವಾಗಿಲ್ಲ. ಮತ್ತೊಮ್ಮೆ ಕರ್ನಾಟಕದಲ್ಲಿ ಬಿಜೆಪಿ ಅಧಿಕ ಸ್ಥಾನವನ್ನು ಗೆಲ್ಲುವ ನೆಚ್ಚಿನ ಪಕ್ಷವಾಗಿ ಹೊರ ಹೊಮ್ಮಿದೆ.












Click it and Unblock the Notifications