Cyclone Michoung: ಚಂಡಮಾರುತ ಬಗ್ಗೆ ಐಎಂಡಿ ಮುಖ್ಯಸ್ಥರಿಂದ ಮಹತ್ವದ ಮಾಹಿತಿ

ಚೆನ್ನೈ, ಡಿಸೆಂಬರ್ 04: ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಭಾರೀ ಮಳೆಯ ನಿರೀಕ್ಷೆ ಇದೆ. ಸೃಷ್ಟಿಯಾಗಿರುವ 'ಮೈಚಾಂಗ್' ಚಂಡಮಾರುತವು (Michaung cyclone) ಮುಂದಿನ 24 ಗಂಟೆಗಳಲ್ಲಿ ಭೂಮಿಗೆ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುಖ್ಯಸ್ಥರು ತಿಳಿಸಿದ್ದಾರೆ.

ಭಾರೀ ಮಳೆಯ ಮುನ್ಸೂಚನೆ ಸಂಬಂಧ ಚೆನ್ನೈನಲ್ಲಿ ಈಗಾಗಲೇ ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ವಿಮಾನಗಳನ್ನು ಸ್ಥಗಿತಗೊಳಿಸಿದೆ ಮತ್ತು ಕರಾವಳಿ ಪ್ರದೇಶಗಳನ್ನು ಸ್ಥಳಾಂತರಿಸಿದೆ. ಚೆನ್ನೈನ ಹಲವಾರು ತಗ್ಗು ಪ್ರದೇಶಗಳಲ್ಲಿ ಜಲಾವೃತವಾಗಿವೆ ಎಂದು ವರದಿ ಆಗಿದೆ.

Cyclone Michaung Update: Cyclone Landfall in Next 24 Hours, Heavy Rain for Coastal Areas

ಚಂಡಮಾರುತವು ಆಂಧ್ರ ಕರಾವಳಿಯತ್ತ ಸಾಗುತ್ತಿದೆ ಮತ್ತು ಮಂಗಳವಾರ ಭೂಮಿಗೆ ಅಪ್ಪಳಿಸುವ ಮುನ್ಸೂಚನೆ ಐಎಂಡಿ ನೀಡಿದೆ. ತಮಿಳುನಾಡಿಗೆ ಮಳೆಯ ತೀವ್ರತೆ ಹೆಚ್ಚಾದರೆ ಆಂಧ್ರಪ್ರದೇಶದಲ್ಲಿ ವೇಗವಾಗಿ ಗಾಳಿ ಬೀಸುವ ಸಾಧ್ಯತೆಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ ಮುಖ್ಯಸ್ಥರು ಮುನ್ಸೂಚನೆ ನೀಡಿದ್ದಾರೆ.

ತಮಿಳುನಾಡಿನಲ್ಲಿ ಮಳೆಯಿಂದಾಗಿ ಹಾನಿ ಹೆಚ್ಚಾಗುವ ಸಾಧ್ಯತೆ ಇದೆ. ಕಾರಣ ಇಲ್ಲಿ ಗಾಳಿಯ ವೇಗ ಗಂಟೆಗೆ 60-70 ಕಿಮೀ ಗಳು ಮಾತ್ರ ಇದೆ ಎಂದು IMD ಮಹಾನಿರ್ದೇಶಕ ಡಾ.ಎಂ.ಮಹಾಪಾತ್ರ ತಿಳಿಸಿದ್ದಾರೆ.

ಡಿಸೆಂಬರ್ 6ರ ತನಕ ಸೈಕ್ಲೋನ್ ತೀವ್ರತೆ

ಡಿಸೆಂಬರ್ 6 ರವರೆಗೆ ಚಂಡಮಾರುತವು ತೀವ್ರವಾಗಿರಲಿದೆ. ಮುನ್ಸೂಚನೆ ನೀಡಲಾದ ರಾಜ್ಯಗಳಲ್ಲಿ ಕರಾವಳಿ ಪ್ರದೇಶಗಳಲ್ಲಿ ಹೊರ ಹೋಗದಂತೆ ಎಚ್ಚರಿಕೆ ಕೊಡಲಾಗಿದೆ. ಸದ್ಯ ಮೈಚಾಂಗ್ ಚಂಡಮಾರುತ ಪ್ರಸ್ತುತ ಬಂಗಾಳ ಕೊಲ್ಲಿಯಲ್ಲಿದೆ. ಚೆನ್ನೈನಿಂದ ಈಶಾನ್ಯಕ್ಕೆ 90 ಕಿಮೀ ದೂರದಲ್ಲಿ ಕೇಂದ್ರೀಕೃತಗೊಂಡಿರುವ ಚಂಡಮಾರುತ ಗಾಳಿಯ ವೇಗ ಪ್ರತಿ ಗಂಟೆಗೆ 80-85 ಕಿಮೀ ನಷ್ಟಿದೆ ಎಂದು ವಿವರಿಸಿದರು.

Cyclone Michaung Update: Cyclone Landfall in Next 24 Hours, Heavy Rain for Coastal Areas

ಚಂಡಮಾರುತದ ಗಾಳಿ ವೇಗ ನೆಲ್ಲೂರಿನಿಂದ ಆರಂಭವಾಗಿ ಕೃಷ್ಣಾ ಜಿಲ್ಲೆಯವರೆಗೆ ತಲುಪುವಷ್ಟರ ವೇಳೆ ಗಾಳಿಯ ವೇಗ ಕ್ರಮೇಣ ಹೆಚ್ಚಾಗಲಿದೆ. ಇಂದು ಸಂಜೆಯಿಂದ ನಾಳೆ ಮಧ್ಯಾಹ್ನದವರೆಗೆ ಗಾಳಿಯ ವೇಗ ಗರಿಷ್ಠ ದಲ್ಲಿರಲಿದೆ. ನಂತರ ಆಂಧ್ರಪ್ರದೇಶದ ಕರಾವಳಿ ತೀರಕ್ಕೆ ನೆಲ್ಲೂರು ಮತ್ತು ಮಚಲಿಪಟ್ಟಣ ಮಧ್ಯೆ ಹಾಗೂ ಈ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿ.5 ರಂದು 90 ರಿಂದ 100 ರ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಮಹಾಪಾತ್ರ ತಿಳಿಸಿದರು.

ಅಗತ್ಯ ಸೌಲಭ್ಯಗಳು ಮಾತ್ರ ಸಿಗಲಿವೆ

ಚಂಡಮಾರುತ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಸೋಮವಾರ ಸಾರ್ವಜನಿಕ ರಜೆ ಘೋಷಿಸಿದೆ. ಚೆನ್ನೈ, ತಿರುವಳ್ಳೂರ್, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ತನ್ನ ಉದ್ಯೋಗಿಗಳಿಗೆ 'ಮನೆಯಿಂದ ಕೆಲಸ' ಆಯ್ಕೆಯನ್ನು ಪ್ರೋತ್ಸಾಹಿಸುವಂತೆ ಖಾಸಗಿ ಕಂಪನಿಗಳನ್ನು ಸೂಚಿಸಿದೆ. ಹಾಲು ಪೂರೈಕೆ ಮತ್ತು ಆರೋಗ್ಯ ಸೌಲಭ್ಯಗಳ ಸೇವೆಗಳು ಲಭ್ಯವಿರಲಿವೆ.

ತಮಿಳುನಾಡಿಗೆ ಹೋಗುವ ಮತ್ತು ಹೊರಡುವ ಒಟ್ಟು 118 ರೈಲುಗಳನ್ನು ರೈಲ್ವೆ ರದ್ದುಗೊಂಡಿವೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಸಹ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+