ಸೈಬರ್ ಕ್ರೈಂ ಪಟ್ಟಿಯಲ್ಲಿ ಕರ್ನಾಟಕ ಟಾಪ್ 3

ನವದೆಹಲಿ, ಜು.1: ದೇಶದಲ್ಲಿ ಇತ್ತೀಚೆಗೆ ಸೈಬರ್ ಅಪರಾಧಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಅವಿಭಜಿತ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳು ಮೊದಲ ಮೂರು ಸ್ಥಾನಗಳಲ್ಲಿವೆ. ಕುತೂಹಲದ ಸಂಗತಿ ಎಂದರೆ, ಸೈಬರ್ ಅಪರಾಧ ಶೇ.51ರಷ್ಟು ಏರಿಕೆಯಾಗಿದ್ದರೂ ಐಟಿ ಹಾಗೂ ಐಟಿ ಸಂಬಂಧಿತ ಉದ್ಯಮದಲ್ಲಿ ಈ ಮೂರು ರಾಜ್ಯಗಳು ನೀಡುತ್ತಿರುವ ಕೊಡುಗೆ ಶೇ.70ರಷ್ಟು ಬೊಕ್ಕಸಕ್ಕೆ ಆದಾಯ ತಂದುಕೊಡುತ್ತಿವೆ.

ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೊ(ಎನ್‌ಸಿಆರ್‌ಬಿ) ನೀಡಿರುವ ಇತ್ತೀಚಿನ ವರದಿಯ ಪ್ರಕಾರ, 2013ರಲ್ಲಿ ಮಹಾರಾಷ್ಟ್ರದಲ್ಲಿ 681 ಸೈಬರ್ ಕ್ರೈಮ್‌ಗಳು ದಾಖಲಾಗಿದ್ದು, 2012ಕ್ಕೆ ಹೋಲಿಸಿದರೆ 2013ರಲ್ಲಿ ಶೇ.48ರಷ್ಟು ಹೆಚ್ಚಿದೆ. ಕರ್ನಾಟಕದಲ್ಲಿ 513 ಪ್ರಕರಣಗಳು ರಿಜಿಸ್ಟರ್ ಆಗಿದ್ದು, 2012ಕ್ಕೆ ಹೋಲಿಸಿದರೆ ಶೇ.45ರಷ್ಟು ಏರಿಕೆಯಾಗಿದೆ.

2013ರಲ್ಲಿ ಉತ್ತರ ಪ್ರದೇಶದಲ್ಲಿ 372 ಪ್ರಕರಣ ದಾಖಲಾಗಿ 4ನೇ ಸ್ಥಾನದಲ್ಲಿದೆ. ಕೇರಳದಲ್ಲಿ 349 ಅಪರಾಧಗಳು ನಡೆದು 5ನೇ ಸ್ಥಾನದಲ್ಲಿದೆ. ಗುಜರಾತ್ ಹಾಗೂ ಒಡಿಶಾಗಳಲ್ಲಿ ಕ್ರಮವಾಗಿ 61 ಮತ್ತು 63 ಪ್ರಕರಣ ದಾಖಲಾಗಿವೆ.

Cyber crimes up by 51 per cent in India, Maharashtra, AP, Karnataka top list

ಆದರೆ ಈಶಾನ್ಯ ರಾಜ್ಯಗಳಾದ ಮೀಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂಗಳಲ್ಲಿ 2013ರಲ್ಲಿ ಒಂದೇ ಒಂದು ಅಪರಾಧವೂ ದಾಖಲಾಗದೆ ಧನಾತ್ಮಕ ಬೆಳವಣಿಗೆ ಕಂಡುಬಂದಿದೆ.

ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿ ಟಾಪ್, ಕೇಂದ್ರಾಡಳಿತ ಪ್ರದೇಶಗಳ ಪೈಕಿ ರಾಜಧಾನಿ ದೆಹಲಿ ಟಾಪ್ ಲಿಸ್ಟ್‌ನಲ್ಲಿದೆ. 2012ಕ್ಕಿಂತ ಶೇ.72.4ರಷ್ಟು ದಾಖಲಾಗಿದೆ. ಲಕ್ಷ ದ್ವೀಪ, ದಾದ್ರಾನಗರ್ ಹವೇಲಿಗಳಲ್ಲಿ ಒಂದೂ ದಾಖಲಾಗಿಲ್ಲ. ಒಟ್ಟಾರೆ ದೇಶಾದ್ಯಂತ 2013ರಲ್ಲಿ 4356 ಅಪರಾಧ ಪ್ರಕರಣಗಳು ದಾಖಲಾಗಿವೆ. 2012ಕ್ಕಿಂತ ಶೇ.51.5ರಷ್ಟು ಏರಿಕೆಯಾಗಿದೆ.

ನಗರಗಳಲ್ಲಿ ಬೆಂಗಳೂರು ಟಾಪ್: ದೇಶದ ಮಹಾನಗರಗಳ ಪೈಕಿ ರಾಜ್ಯದ ರಾಜಧಾನಿ ಬೆಂಗಳೂರು ಅತ್ಯಂತ ಅಗ್ರಸ್ಥಾನ ಪಡೆದಿದೆ. ಬೆಂಗಳೂರಿನಲ್ಲಿ 2013ರಲ್ಲಿ 533 ಸೈಬರ್ ಕ್ರೈಂ ಪ್ರಕರಣ ದಾಖಲಾಗಿದ್ದು, ಆಂಧ್ರದ ವಿಶಾಖಪಟ್ನಂನಲ್ಲಿ 173 ಪ್ರಕರಣ ದಾಖಲಾಗಿವೆ. ಹೈದ್ರಾಬಾದ್‌ನಲ್ಲಿ 159 ಹಾಗೂ ಜೈಪುರದಲ್ಲಿ 110 ಪ್ರಕರಣ ದಾಖಲಾಗಿವೆ.

ಅಚ್ಚರಿಯೆಂದರೆ ಮುಂಬೈ ನಗರದಲ್ಲಿ ಕೇವಲ 40 ದಾಖಲಾಗಿದ್ದರೆ, ನೆರೆಯ ಪುಣೆಯಲ್ಲಿ 97 ಹಾಗೂ ಕೋಲ್ಕತ್ತಾದಲ್ಲಿ 84 ದಾಖಲಾಗಿದ್ದು, ಚೆನ್ನೈನಲ್ಲಿ ಕೇವಲ 5 ಪ್ರಕರಣಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+