CUET PG Results: ವಿದ್ಯಾರ್ಥಿಗಳು ಫಲಿತಾಂಶ ಪರಿಶೀಲಿಸುವುದು ಹೇಗೆ?
ನವದೆಹಲಿ, ಸೆಪ್ಟೆಂಬರ್ 27: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ(CUET PG)ಯ ಸ್ನಾತಕೋತ್ತರ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದುಕೊಳ್ಳುವುದಕ್ಕಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಸಿಯುಇಟಿಯ ಅಧಿಕೃತ ವೆಬ್‌ಸೈಟ್ cuet.nta.nic.in ನಲ್ಲಿ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.
ಕಳೆದ ಸೆಪ್ಟೆಂಬರ್ 23, 2022ರಂದು ನೀಡಲಾದ ಅಂತಿಮ ಆನ್ಸರ್ ಕೀ(ಉತ್ತರಗಳ ಸುಳಿವು)ಯನ್ನು ಆಧರಿಸಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಇದರ ಮಧ್ಯೆ ತಾತ್ಕಾಲಿಕ ಉತ್ತರ ಕೀಯನ್ನು ಸೆಪ್ಟೆಂಬರ್ 16, 2022ರಂದು ಬಿಡುಗಡೆ ಮಾಡಲಾಗಿದ್ದು, ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 18, 2022 ಕೊನೆಯ ದಿನಾಂಕವಾಗಿತ್ತು.
ಸಿಯುಇಟಿ ಅಂಕಗಳ ಮೇಲೆ ಪ್ರವೇಶ:
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ CUET PG 2022 ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳು 2022-23 ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಈ ಅಭ್ಯರ್ಥಿಗಳ ದಾಖಲೆಗಳು ಮತ್ತು ಇತರ ಡೇಟಾವನ್ನು ಅವರು ಅರ್ಜಿ ಸಲ್ಲಿಸಿದ ವಿಶ್ವವಿದ್ಯಾಲಯದೊಂದಿಗೆ ಹಂಚಿಕೊಳ್ಳಲಾಗುತ್ತದೆ.

ಯಾವ ವೆಬ್‌ಸೈಟ್‌ನಲ್ಲಿ CUET PG ಫಲಿತಾಂಶಗಳು ಲಭ್ಯ?:
Cuet.nta.nic.in
ntaresults.nic.in
CUET PG 2022 ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನ:
ಅಧಿಕೃತ ವೆಬ್‌ಸೈಟ್ cuet.nta.nic.in ಗೆ ಭೇಟಿ ನೀಡಿ
ಮುಖಪುಟದಲ್ಲಿ, CUET PG 2022 ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ
ಅಗತ್ಯವಿರುವ ಅಪ್ಲಿಕೇಶನ್ ಸಂಖ್ಯೆ ಮತ್ತು ಪಾಸ್‌ವರ್ಡ್/ಹುಟ್ಟಿದ ದಿನಾಂಕವನ್ನು ನಮೂದಿಸಿ
ವಿವರಗಳನ್ನು ಸಲ್ಲಿಸಿ, ಮತ್ತು CUET PG ಫಲಿತಾಂಶವು ಪರದೆಯ ಮೇಲೆ ಗೋಚರಿಸುತ್ತದೆ
ಫಲಿತಾಂಶವನ್ನು ಪರಿಶೀಲಿಸಿ ಮತ್ತು ಭವಿಷ್ಯದ ಬಳಕೆಗಾಗಿ ಅದನ್ನು ಡೌನ್‌ಲೋಡ್ ಮಾಡಿ
ಅಭ್ಯರ್ಥಿಗಳು ಫಲಿತಾಂಶದ ಪ್ರಿಂಟೌಟ್ ತೆಗೆದುಕೊಳ್ಳುವಂತೆಯೂ ಸೂಚಿಸಲಾಗಿದೆ












Click it and Unblock the Notifications