• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋವಿಶೀಲ್ಡ್, ಕೋವ್ಯಾಕ್ಸಿನ್‌ನಲ್ಲಿ ಯಾವ ಲಸಿಕೆ ಹೆಚ್ಚು ಪರಿಣಾಮಕಾರಿ?

|
Google Oneindia Kannada News

ನವದೆಹಲಿ, ಜೂನ್ 07: ಭಾರತದಲ್ಲಿ ಕೊರೊನಾ ಸೋಂಕಿನ ವಿರುದ್ಧ ನೀಡಲಾಗುತ್ತಿರುವ ಲಸಿಕೆಗಳಲ್ಲಿ ಯಾವುದು ಹೆಚ್ಚು ಪರಿಣಾಮಕಾರಿ ಎಂಬ ಪ್ರಶ್ನೆ ಲಸಿಕೆ ಅಭಿಯಾನ ಆರಂಭವಾದಾಗಿನಿಂದಲೂ ಕೇಳಿಬರುತ್ತದೆ. ಇದೀಗ ಅಧ್ಯಯನವೊಂದರಲ್ಲಿ ಇದಕ್ಕೆ ಉತ್ತರ ದೊರೆತಿದೆ.

      ಯಾವ Vaccine ಬೆಸ್ಟ್ ಅನ್ನೋದು ಗೊತ್ತಾಗಿದೆ! | Oneindia Kannada

      ಕೋವ್ಯಾಕ್ಸಿನ್ ಲಸಿಕೆಗಿಂತ ಕೋವಿಶೀಲ್ಡ್‌ ಲಸಿಕೆ ಹೆಚ್ಚಿನ ಮಟ್ಟದಲ್ಲಿ ಪ್ರತಿಕಾಯಗಳನ್ನು ಉತ್ಪತ್ತಿ ಮಾಡುತ್ತದೆ ಎಂಬ ಅಂಶ ತಿಳಿದುಬಂದಿದೆ. Covat ಪ್ರಾಥಮಿಕ ಅಧ್ಯಯನ ಈ ಮಾಹಿತಿಯನ್ನು ನೀಡಿದೆ. ಮುಂದೆ ಓದಿ...

       ಕೋವಿಶೀಲ್ಡ್‌ ಪರಿಣಾಮಕಾರಿ ಎಂದ ಅಧ್ಯಯನ

      ಕೋವಿಶೀಲ್ಡ್‌ ಪರಿಣಾಮಕಾರಿ ಎಂದ ಅಧ್ಯಯನ

      ಕೊರೊನಾ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಈ ಅಧ್ಯಯನದಲ್ಲಿ ಬಳಸಿಕೊಂಡು, ಫಲಿತಾಂಶವನ್ನು ಕಂಡುಕೊಳ್ಳಲಾಗಿದೆ. ಈ ಅಧ್ಯಯನದಲ್ಲಿ ಸೆರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್‌ ಗಿಂತ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂದು ತಿಳಿದುಬಂದಿದೆ.

      ಕೋವ್ಯಾಕ್ಸಿನ್, ಸ್ಪುಟ್ನಿಕ್ ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಸೂಚನೆಕೋವ್ಯಾಕ್ಸಿನ್, ಸ್ಪುಟ್ನಿಕ್ ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಸೂಚನೆ

       ಕೋವಿಶೀಲ್ಡ್‌ನಲ್ಲಿ ಹೆಚ್ಚಿನ ಪ್ರತಿಕಾಯ ಸೃಷ್ಟಿ

      ಕೋವಿಶೀಲ್ಡ್‌ನಲ್ಲಿ ಹೆಚ್ಚಿನ ಪ್ರತಿಕಾಯ ಸೃಷ್ಟಿ

      ಕೋವ್ಯಾಕ್ಸಿನ್‌ಗೆ ಹೋಲಿಸಿದರೆ, ಮೊದಲ ಡೋಸ್ ಲಸಿಕೆ ಪಡೆದ ನಂತರ ಸೋಂಕಿನ ವಿರುದ್ಧ ಹೋರಾಡಲು ಕೋವಿಶೀಲ್ಡ್‌ನಲ್ಲಿ ಹೆಚ್ಚಿನ ಪ್ರತಿಕಾಯ ಸೃಷ್ಟಿಯಾಗಿರುವುದು ಕಂಡುಬಂದಿದೆ. ಕೋವಿಶೀಲ್ಡ್‌ನಲ್ಲಿ ಸೆರೊಪಾಸಿಟಿವಿಟಿ ಪ್ರಮಾಣವೂ ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ. ಲಸಿಕೆಗಳ ಎರಡು ಡೋಸ್ ಪಡೆದ ನಂತರ ಸೋಂಕಿನ ವಿರುದ್ಧ ಹೋರಾಡುವಲ್ಲಿ ಈ ಎರಡೂ ಲಸಿಕೆಗಳು ಪರಿಣಾಮಕಾರಿ ಎಂದು ತಿಳಿದುಬಂದಿದೆ. ಕೋವಿಶೀಲ್ಡ್‌ನಲ್ಲಿ ಪ್ರತಿಕಾಯಗಳು ಅತಿ ಶೀಘ್ರವಾಗಿ ಉತ್ಪತ್ತಿಯಾಗಿರುವುದು ಕಂಡುಬಂದಿದೆ.

       ಕೋವಿಶೀಲ್ಡ್‌; ಕೋವ್ಯಾಕ್ಸಿನ್ ಯಾವುದು ಪರಿಣಾಮಕಾರಿ?

      ಕೋವಿಶೀಲ್ಡ್‌; ಕೋವ್ಯಾಕ್ಸಿನ್ ಯಾವುದು ಪರಿಣಾಮಕಾರಿ?

      ಒಟ್ಟು 552 ಆರೋಗ್ಯ ಕಾರ್ಯಕರ್ತರನ್ನು ಈ ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿತ್ತು. ಅದರಲ್ಲಿ 456 ಮಂದಿಗೆ ಕೋವಿಶೀಲ್ಡ್‌ ಹಾಗೂ 96 ಮಂದಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗಿತ್ತು. ಹೋಲಿಕೆಯಲ್ಲಿ 79.3% ಸೆರೊಪಾಸಿಟಿವಿಟಿ ಪ್ರಮಾಣ ದಾಖಲಾಗಿದೆ. ಇದರಲ್ಲಿ ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ಹೆಚ್ಚಿನ ಆ್ಯಂಟಿ ಸ್ಪೈಕ್ ಪ್ರತಿಕಾಯ ಸೃಷ್ಟಿಯಾಗಿರುವುದು ಕಂಡುಬಂದಿದೆ.

      ಲಸಿಕೆ ಪಡೆದಾಗಿದೆ, ಕೊರೊನಾ ಸೋಂಕಿನ ಲಕ್ಷಣವಿದೆ ಏನು ಮಾಡಬೇಕು?ಲಸಿಕೆ ಪಡೆದಾಗಿದೆ, ಕೊರೊನಾ ಸೋಂಕಿನ ಲಕ್ಷಣವಿದೆ ಏನು ಮಾಡಬೇಕು?

       ಮೊದಲ ಡೋಸ್‌ನಲ್ಲೇ ಪರಿಣಾಮಕಾರಿ

      ಮೊದಲ ಡೋಸ್‌ನಲ್ಲೇ ಪರಿಣಾಮಕಾರಿ

      Covat ಅಧ್ಯಯನದಲ್ಲಿ, ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡೂ ಲಸಿಕೆಗಳು ಉತ್ತಮ ರೋಗನಿರೋಧಕ ಪ್ರತಿಕ್ರಿಯೆ ನೀಡಿರುವುದು ಕಂಡುಬಂದಿದೆ. ಆದರೆ ಹೋಲಿಕೆಯಲ್ಲಿ ಕೋವಿಶೀಲ್ಡ್‌ನಲ್ಲಿ ಪ್ರತಿಕಾಯ ಸೃಷ್ಟಿ ಹೆಚ್ಚಿದೆ. ಮೊದಲ ಡೋಸ್ ಪಡೆದ ನಂತರ ಕೋವ್ಯಾಕ್ಸಿನ್‌ಗಿಂತ ಕೋವಿಶೀಲ್ಡ್‌ನಲ್ಲಿ ಹೆಚ್ಚಿನ ಪ್ರತಿಕಾಯ ಸೃಷ್ಟಿ ಕಂಡುಬಂದಿದೆ. ಆದರೆ ಎರಡೂ ಡೋಸ್‌ಗಳನ್ನು ಪಡೆದುಕೊಂಡ ನಂತರ ಎರಡೂ ಲಸಿಕೆಗಳು ಉತ್ತಮ ಪ್ರತಿಕ್ರಿಯೆ ತೋರಿಸಿವೆ ಎಂದು ತಿಳಿಸಿದೆ.

      English summary
      Covishield vaccine produce more antibodies than covaxin says preliminary study by COVAT
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X
      Desktop Bottom Promotion