ಜೂನ್‌ನಲ್ಲಿ ಲಸಿಕೆ ನೀಡಿಕೆ ದ್ವಿಗುಣ: ಇನ್ನೂ ಹೆಚ್ಚಬೇಕಿದೆ ವೇಗ
ನವದೆಹಲಿ, ಜು.01: ಕೇಂದ್ರ ಸರ್ಕಾರವು ಜೂನ್‌ನಲ್ಲಿ 11,95,70,000 ಕೋವಿಡ್ ಲಸಿಕೆ ಪ್ರಮಾಣವನ್ನು ಪೂರೈಸಲಾಗುವುದು ಎಂದು ಮೇ 30 ರಂದು ರಾಷ್ಟ್ರಕ್ಕೆ ಭರವಸೆ ನೀಡಿದೆ. ಈ ತಿಂಗಳಲ್ಲಿ ಅಷ್ಟೇ ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ದಿನಕ್ಕೆ ಸರಾಸರಿ 39,88,979 ಡೋಸ್‌ನಂತೆ ಕಳೆದ ತಿಂಗಳು ಒಟ್ಟು 11,96,69,381 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.
ದೇಶದ ಎಲ್ಲಾ ವಯಸ್ಕ ವ್ಯಕ್ತಿಗಳಿಗೆ ಲಸಿಕೆ ಅಭಿಯಾನ ಆರಂಭಿಸಿದ ನಂತರ ಮೇ ತಿಂಗಳಿಗಿಂತ ಲಸಿಕೆ ನೀಡಿಕೆಯು ಗಮನಾರ್ಹವಾಗಿ ಹೆಚ್ಚಾಗಿದೆ. ದಿನಕ್ಕೆ ಸರಾಸರಿ 19,69,580 ಲಸಿಕೆಯಂತೆ ಮೇ ತಿಂಗಳಲ್ಲಿ ಒಟ್ಟು 6,10,57,003 ಲಸಿಕೆ ಪ್ರಮಾಣವನ್ನು ನೀಡಲಾಗಿದೆ.
ದೇಶದಲ್ಲಿ 2021 ಜನವರಿ 16 ರಂದು ಕೊರೊನಾ ಲಸಿಕೆ ಅಭಿಯಾನವು ಆರಂಭಿಸಲಾಗಿದ್ದು, ಈಗ ಮಾಸಿಕ ವ್ಯಾಕ್ಸಿನೇಷನ್ ವೇಗವು ಮೇ ನಿಂದ ಜೂನ್ ವರೆಗೆ ಶೇ.96 ರಷ್ಟು ಏರಿಕೆಯಾದರೆ, ದೈನಂದಿನ ವ್ಯಾಕ್ಸಿನೇಷನ್ ಶೇ. 102 ರಷ್ಟು ಹೆಚ್ಚಾಗಿದೆ.

ಎಪ್ರಿಲ್‌ನ ಕೊರೊನಾ ಲಸಿಕೆ ಎಷ್ಟು?
ಲಸಿಕೆ ವೇಗವು ಎಪ್ರಿಲ್‌ನಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆ ಅಥವಾ 34.5 ಕೋಟಿ ಭಾರತೀಯರು ಲಸಿಕೆ ಪಡೆಯಲು ಅರ್ಹರಾದ ಸಂದರ್ಭದಲ್ಲಿ ಭಾರತದಲ್ಲಿ ಕೊರೊನಾ ಲಸಿಕೆ ನೀಡಿಕೆ ಪ್ರಮಾಣವು ವೇಗವನ್ನು ಪಡೆದಿದೆ. ಆ ತಿಂಗಳು, 8,98,71,739 ಡೋಸ್‌ಗಳನ್ನು ನೀಡಲಾಗಿದೆ. ದಿನಕ್ಕೆ ಸರಾಸರಿ 29,95,724 ಡೋಸ್‌ಗಳನ್ನು ನೀಡಲಾಗಿದೆ. ನಾವು ಏಪ್ರಿಲ್ ವ್ಯಾಕ್ಸಿನೇಷನ್ ಅಂಕಿಅಂಶಗಳನ್ನು ಜೂನ್‌ನಲ್ಲಿ ಹೋಲಿಕೆ ಮಾಡಿದಾಗ, ವ್ಯಾಕ್ಸಿನೇಷನ್ ವೇಗವು 33.15ರಷ್ಟು ಅಧಿಕವಾಗಿದೆ.

30 ಲಕ್ಷ ಡೋಸ್ ದಾಟಿದ ದೈನಂದಿನ ಲಸಿಕೆ ನೀಡಿಕೆ
ಏಪ್ರಿಲ್‌ನಲ್ಲಿ ದೈನಂದಿನ ವ್ಯಾಕ್ಸಿನೇಷನ್ 13 ದಿನಗಳಲ್ಲಿ 30 ಲಕ್ಷ ಪ್ರಮಾಣವನ್ನು ದಾಟಿದೆ. ಮೇ ತಿಂಗಳಿಗೆ ಹೋಲಿಸಿದರೆ ಅದು ಕೇವಲ ಎರಡು ದಿನಗಳಲ್ಲಿ ಮಾತ್ರ ಸಂಭವಿಸಿದೆ. ಆದರೆ ಜೂನ್‌ನಲ್ಲಿ, ಪ್ರತಿದಿನ 30 ಲಕ್ಷ ಕೋವಿಡ್ ಲಸಿಕೆ ಪ್ರಮಾಣವನ್ನು ನೀಡಲಾಗುತ್ತಿದೆ. 21 ದಿನಗಳು ಈ ಬೆಳವಣಿಗೆ ಕಂಡು ಬಂದಿರುವುದು, ಕೇಂದ್ರ ಆರೋಗ್ಯ ಸಚಿವಾಲಯದ ಡೇಟಾದಲ್ಲಿ ತೋರಿಸುತ್ತದೆ. ಮೇ ತಿಂಗಳಲ್ಲಿ ಲಸಿಕೆ ದರವು ಕಡಿಮೆಯಾಗುತ್ತಿದ್ದಂತೆ ರಾಜ್ಯ ಸರ್ಕಾರಗಳು ಮತ್ತೆ ಕೇಂದ್ರ ಸರ್ಕಾರವೇ ಲಸಿಕೆ ನೀಡಬೇಕು ಎಂದು ಒತ್ತಾಯಿಸಿತು. ಕೇಂದ್ರ ಸರ್ಕಾರ ಜೂನ್ 21 ರಿಂದ ಲಸಿಕೆ ನೀಡಲು ಆರಂಭಿಸಿದೆ.

ರಾಜ್ಯದ ಮೇಲೆ ಬಿದ್ದಿತ್ತು ಲಸಿಕೆ ಹೊರೆ
ದೇಶದಲ್ಲಿ ಮೇ ತಿಂಗಳಿಂದ ಲಸಿಕೆ ನೀಡಿಕೆ ಹೊರೆಯನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಹಾಕಿತ್ತು. ಈ ನಡುವೆ ಲಸಿಕೆ ಕೊರತೆ ಕಾಣಿಸಿಕೊಂಡು ರಾಜ್ಯ ಸರ್ಕಾರಗಳು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಾಗದೆ ಕೇಂದ್ರ ಸರ್ಕಾರ ಲಸಿಕೆ ಹಂಚಬೇಕು ಎಂದು ಒತ್ತಾಯಿಸಿದವು. ಜೂನ್ 20 ರವರೆಗೆ ಈ ವಿಕೇಂದ್ರೀಕೃತ ಲಸಿಕೆ ನೀತಿಯನ್ನು ಅನುಸರಿಸಲಾಗಿತ್ತು. ಕೇಂದ್ರ ಸರ್ಕಾರದ ವಿರುದ್ದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಲಸಿಕೆ ನೀತಿಯನ್ನು ಸುಪ್ರೀಂ ಕೋರ್ಟ್ ಕೂಡಾ ಟೀಕಿಸಿತ್ತು. ಅದಾಗಲೇ ಮೇ ಒಂದರಿಂದ 18-44 ವಯಸ್ಸಿನವರಿಗೆ ಲಸಿಕೆ ಅಭಿಯಾನ ಆರಂಭಿಸಲಾಗಿತ್ತು. ಆದರೆ ಲಸಿಕೆ ಕೊರತೆಯಿಂದ ಹೆಚ್ಚಿನ ಕಡೆ ಈ ಅಭಿಯಾನ ತಾತ್ಕಾಲಿಕ ಸ್ಥಗಿತಗೊಳಿಸಲಾಗಿತ್ತು. ಈ ನಡುವೆ ಖಾಸಗಿ ಆಸ್ಪತ್ರೆಗಳು ಕೂಡಾ ಲಸಿಕೆ ನೀಡಲು ಆರಂಭಿಸಿತು. 18-44 ವಯಸ್ಸಿನವರಿಗೆ ಲಸಿಕೆಗಳನ್ನು ನೀಡುವುದು ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳ ಜವಾಬ್ದಾರಿಯಾಯಿತು. 45 ವರ್ಷಕ್ಕಿಂತ ಮೇಲ್ಪಟ್ಟವರು ಕೇಂದ್ರದಿಂದ ಉಚಿತ ಲಸಿಕೆಗಳನ್ನು ಲಭಿಸುತ್ತಿತ್ತು.

ಲಸಿಕೆ ಅಭಿಯಾನದಲ್ಲಿ ಮತ್ತೆ ವೇಗ
ಜೂನ್ 21 ರಿಂದ ಜಾರಿಗೆ ತಂದ ಹೊಸ ಲಸಿಕೆ ನೀತಿಯಡಿಯಲ್ಲಿ, ಹತ್ತು ದಿನಗಳು, ಜೂನ್ 21 ರಿಂದ ಜೂನ್ 30 ರವರೆಗೆ, ವ್ಯಾಕ್ಸಿನೇಷನ್ ವೇಗವು ಹೆಚ್ಚಿತು. ದೇಶಾದ್ಯಂತದ ಜೂನ್ 27 ರಂದು 17,21,268 ಡೋಸ್‌ಗಳು ಮಾತ್ರ ನೀಡಲಾಗಿದ್ದರೂ ಜೂನ್ 29 ರಂದು 36,51,983 ಲಕ್ಷ ಡೋಸ್, ಜೂನ್ 30 ರಂದು 27,60,345 ಡೋಸ್ ನೀಡಲಾಗಿದೆ. ಭಾರತೀಯರಿಗೆ ಪ್ರತಿದಿನ ಸರಾಸರಿ 52,55,937 ಡೋಸ್‌ಗಳನ್ನು ನೀಡಲಾಗಿದೆ. ಆದರೆ 94.02 ಕೋಟಿ ಅರ್ಹ ವಯಸ್ಕರಿಗೆ ಲಸಿಕೆ ಹಾಕುವಲ್ಲಿ ಭಾರತವು ಮಹತ್ತರವಾದ ಕಾರ್ಯವನ್ನು ಮಾಡಿದೆ. ಇಲ್ಲಿಯವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ, 33,57,16,019 ಅಥವಾ 35.7% ವಯಸ್ಕ ಭಾರತೀಯರಿಗೆ ಕೋವಿಡ್ ಲಸಿಕೆಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನೀಡಲಾಗಿದೆ. ಆದರೆ ಸಂಪೂರ್ಣ ಲಸಿಕೆ ಹಾಕಿದ ಜನಸಂಖ್ಯೆಯ ಪಾಲು ಕೇವಲ 6.34% ಆಗಿದೆ. ಇನ್ನೂ ಕೂಡಾ 60,44,83,981 ಮಂದಿ ಲಸಿಕೆ ಹಾಕಿಸಿಲ್ಲ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications