Get Updates
Get notified of breaking news, exclusive insights, and must-see stories!

ಕೊರೊನಾ ಮೂರನೇ ಅಲೆ ಭೀತಿ ನಡುವೆ ಏರಿದೆ ಸೋಂಕಿನ 'ಆರ್' ದರ

ನವದೆಹಲಿ, ಸೆಪ್ಟೆಂಬರ್ 4: ಸಂಭಾವ್ಯ ಕೊರೊನಾ ಮೂರನೇ ಅಲೆ ಎಚ್ಚರಿಕೆ ನಡುವೆ ಹಲವು ರಾಜ್ಯಗಳಲ್ಲಿ ಸೋಂಕಿನ ಹರಡುವಿಕೆ ತಡೆಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಕ್ಟೋಬರ್ ತಿಂಗಳಿನಲ್ಲಿ ಕೊರೊನಾ ಮೂರನೇ ಅಲೆ ಉತ್ತುಂಗಕ್ಕೆ ಹೋಗುವುದಾಗಿ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ಇದರ ಜೊತೆಜೊತೆಗೆ ಮತ್ತೆ ಕೊರೊನಾ ಸೋಂಕಿನ ಪುನರುತ್ಪತ್ತಿ ದರ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಆಗಸ್ಟ್‌ ತಿಂಗಳಿನ ಕೊನೆಯ ವಾರದಲ್ಲಿ ದೇಶದಲ್ಲಿ ಕೊರೊನಾ ಸೋಂಕಿನ ಪುನರುತ್ಪತ್ತಿ ದರ ಏರಿಕೆಯಾಗಿದ್ದು, 1.17ಗೆ ತಲುಪಿದೆ. ಆಗಸ್ಟ್‌ 14-17ರವರೆಗೆ ಸೋಂಕಿನ ಪುನರುತ್ಪತ್ತಿ ದರ 0.89 ಇದ್ದದ್ದು ಕೊನೆಯ ವಾರದಲ್ಲಿ ಏಕಾಏಕಿ 1.17ಗೆ ಏರಿಕೆಯಾಗಿದೆ ಎಂದು ಚೆನ್ನೈನ ಇನ್‌ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸಸ್ ಸಂಶೋಧಕರು ತಿಳಿಸಿದ್ದಾರೆ. ಈ ಅಂಕಿ ಅಂಶ ಸೋಂಕು ಹೆಚ್ಚಳದ ಸೂಚನೆಯನ್ನು ನೀಡುತ್ತಿದೆ.

ಕೊರೊನಾ ಸೋಂಕು ಹರಡುವಿಕೆ ವೇಗವನ್ನು ಈ ಪುನರುತ್ಪತ್ತಿ ದರ ಸಾಂಕೇತಿಸುತ್ತದೆ. ಈ ದರ ಸದ್ಯ ಒಂದಕ್ಕಿಂತ ಹೆಚ್ಚಾಗಿರುವುದು ಚಿಂತೆಗೆ ಎಡೆಮಾಡಿಕೊಟ್ಟಿದೆ ಎಂದು ಸಂಶೋಧಕಿ ಸೀತಾಭ್ರಾ ಸಿನ್ಹಾ ಆತಂಕ ವ್ಯಕ್ತಪಡಿಸಿದ್ದಾರೆ.

Covid R-Value Rising Amid Threat Of Third Wave

ಹಲವು ರಾಜ್ಯಗಳಲ್ಲಿ ಆಗಸ್ಟ್‌ ಕೊನೆಯ ವಾರದಲ್ಲಿ ಪುನರುತ್ಪತ್ತಿ ದರ ಒಂದಕ್ಕಿಂತ ಹೆಚ್ಚಾಗಿರುವುದು ಕಂಡುಬಂದಿದೆ. ಇದರಿಂದ ರಾಷ್ಟ್ರೀಯ ಮಟ್ಟದ ಸರಾಸರಿಯಲ್ಲಿಯೂ ಏರಿಕೆ ದಾಖಲಾಗಿದೆ. ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಈ ದರ ಅತಿ ಹೆಚ್ಚಾಗಿದೆ. ಮಿಜೋರಾಂ ಹಾಗೂ ಜಮ್ಮು, ಕಾಶ್ಮೀರದಲ್ಲಿ ಆರ್ ದರ ಹಿಂದಿಗಿಂತ ಏರಿಕೆಯಾಗಿದೆ.

ಏನಿದು 'ಆರ್' ದರ?
ದೇಶದಲ್ಲಿ ಕೊರೊನಾ ಸೋಂಕು ಯಾವ ವೇಗದಲ್ಲಿ ಹರಡುತ್ತಿದೆ ಎಂಬುದನ್ನು ಈ "ಪುನರುತ್ಪತ್ತಿ ದರ" ಸಾಂಕೇತಿಸುತ್ತದೆ. ಒಬ್ಬ ವ್ಯಕ್ತಿಯಿಂದ ಎಷ್ಟು ಮಂದಿಗೆ ಸೋಂಕು ಹರಡಬಹುದು ಎಂಬ ಸರಾಸರಿ ಅಂದಾಜನ್ನು ಇದು ಹೇಳುತ್ತದೆ. ಆರ್ ಮಟ್ಟ ತಗ್ಗುವುದು ಸೋಂಕಿನ ಹರಡುವಿಕೆಯೂ ಕ್ಷೀಣಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ. ಆರ್ ದರ ಒಂದಕ್ಕಿಂತ ಹೆಚ್ಚಿದ್ದರೆ, ಸೋಂಕಿತರ ಸಂಖ್ಯೆ ಪ್ರತಿ ಸುತ್ತಿನಲ್ಲೂ ಹೆಚ್ಚುತ್ತಿದೆ ಮತ್ತು ತಾಂತ್ರಿಕವಾಗಿ, ಇದನ್ನು ಸಾಂಕ್ರಾಮಿತ ಹಂತ ಎಂದು ಕರೆಯಲಾಗುತ್ತದೆ. ಎಷ್ಟು ಪರಿಣಾಮಕಾರಿಯಾಗಿ ಸೋಂಕು ಹರಡುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ.

Covid R-Value Rising Amid Threat Of Third Wave

ಹೆಚ್ಚು ಪುನರುತ್ಪತ್ತಿ ದರ ಹೊಂದಿರುವ ರಾಜ್ಯಗಳು
ಕೇರಳದಲ್ಲಿ ಆರ್ ದರ 1.33 ಇದೆ. ದೇಶದಲ್ಲೇ ಅತಿ ಹೆಚ್ಚಿನ ಸಕ್ರಿಯ ಪ್ರಕರಣಗಳಿರುವ ರಾಜ್ಯ ಕೇರಳ ಆಗಿದೆ. ಮಿಜೋರಾಂನಲ್ಲಿ ಈ ದರ 1.36 ಇದ್ದು, ಜಮ್ಮು ಹಾಗೂ ಕಾಶ್ಮೀರದಲ್ಲಿ 1.25 ಇದೆ. ಆಂಧ್ರದಲ್ಲಿ 1.09 ಹಾಗೂ ಮಹಾರಾಷ್ಟ್ರದಲ್ಲಿ 1.06 ಸೋಂಕಿನ ಪುನರುತ್ಪತ್ತಿ ದರ ಇದೆ.

ಎರಡನೇ ಅಲೆಯಲ್ಲಿ ಹೇಗಿತ್ತು ಆರ್ ದರ?
ಕೊರೊನಾ ಎರಡನೇ ಅಲೆ, ಅಂದರೆ ಮಾರ್ಚ್‌ನಿಂದ ಮೇ ತಿಂಗಳವರೆಗೆ ದೇಶದಲ್ಲಿ ಸೋಂಕಿನ ಪುನರುತ್ಪತ್ತಿ ದರವು 1.37 ದಾಖಲಾಗಿತ್ತು. ಮೇ 15 ರಿಂದ ಜೂನ್ 26ರವರೆಗೆ ಈ ದರ 0.78 ಆಗಿತ್ತು. ಜೂನ್ 20-ಜುಲೈ 7ರಲ್ಲಿ ನಿಧಾನಗತಿಯಲ್ಲಿ ಏರಿಕೆಯಾಗಿದ್ದು, ಆಗ ಇದರ ದರ 0.88ಗೆ ಬಂದು ನಿಂತಿತ್ತು. ಜುಲೈ 22ರವರೆಗೆ 0.95, ಜುಲೈ 24-27ರವರೆಗೆ 0.96 ಆಗಿದೆ.
ಜುಲೈ 27ರ ನಂತರ ಈ ದರ 1ರ ಸಮೀಪ ಬಂದಿದೆ.
ಆಗಸ್ಟ್‌ 6-9ರವರೆಗೆ 0.92, ಆಗಸ್ಟ್‌ 12-14ರವರೆಗೆ 0.99 ಇದೆ. ಆಗಸ್ಟ್‌ 14-17ರವರೆಗೆ 0.89 ಆಗಿದೆ. ಆನಂತರ 1.3 ಆಗಿದೆ.

ಈಚೆಗೆ ಚೆನ್ನೈನ ಇದೇ ಸಂಶೋಧನಾ ಸಂಸ್ಥೆ, ಭಾರತದಲ್ಲಿ ಸೋಂಕಿನ "R" ದರ ಕೊರೊನಾ ಮೂರನೇ ಅಲೆ ಕುರಿತು ಎಚ್ಚರಿಕೆ ಗಂಟೆ ಬಾರಿಸುತ್ತಿರುವುದಾಗಿ ತಿಳಿಸಿತ್ತು. ಈ ಆರ್‌ ದರ 1ಕ್ಕಿಂತ ಕಡಿಮೆಯಿದ್ದರೆ ಅಪಾಯವಿಲ್ಲ ಎಂದು ಪರಿಗಣಿಸಬಹುದು. ಆದರೆ ಇದನ್ನು ಮೀರಿದರೆ ಪ್ರಕರಣಗಳ ಸಂಖ್ಯೆಯೂ ಏಕಾಏಕಿ ಏರಿಕೆಯಾಗುವುದು ಖಚಿತ. ಮುಂದಿನ ಕೆಲವು ವಾರಗಳಲ್ಲಿ ಈ ದರ ಇನ್ನಷ್ಟು ಹೆಚ್ಚಳವಾಗಲಿದ್ದು, ರಾಜ್ಯದ ಈಶಾನ್ಯ ಭಾಗದಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಎಂದು ಅಂದಾಜು ಮಾಡಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+