Breaking; ಆರೋಗ್ಯ ಕಾರ್ಯಕರ್ತರ ವಿಮೆ ವಿಸ್ತರಿಸಿದ ಕೇಂದ್ರ

ನವದೆಹಲಿ, ಏಪ್ರಿಲ್ 19; ಕೋವಿಡ್ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿರುವ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತಿರುವ ವಿಮೆ ಸೌಲಭ್ಯವನ್ನು ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ.

ಮಂಗಳವಾರ ಕೇಂದ್ರ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಆರೋಗ್ಯ್ ಕಾರ್ಯಕರ್ತರಿಗೆ ನೀಡುತ್ತಿರುವ ವಿಮೆ ಸೌಲಭ್ಯವನ್ನು 180 ದಿನಗಳ ತನಕ ವಿಸ್ತರಣೆ ಮಾಡಲಾಗಿದೆ.

ಎಲ್ಲಾ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳು, ಕಾರ್ಯದರ್ಶಿಗಳಿಗೆ ಏಪ್ರಿಲ್ 19ರಂದು ಈ ಕುರಿತು ಪತ್ರ ಬರೆಯಲಾಗಿದೆ. ವಿಮೆ ವಿಸ್ತರಣೆ ಮಾಡಿರುವ ಕುರಿತು ಪ್ರಚಾರದ ಮೂಲಕ ಮಾಹಿತಿ ನೀಡುವಂತೆಯೂ ಸೂಚಿಸಲಾಗಿದೆ.

Covid Duty Health Workers Insurance Scheme Extended

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ (ಪಿಎಂಜಿಕೆಪಿ) ಮಾರ್ಚ್ 30, 2020ರಂದು ಆರಂಭಿಸಲಾಯಿತು. ಇದರ ಅಡಿಯೇ ವಿಮೆಯನ್ನು ನೀಡಲಾಗುತ್ತಿದೆ. ಯೋಜನೆ ಪ್ರಾರಂಭವಾದ ಬಳಿಕ ಕೋವಿಡ್ ಕರ್ತವ್ಯದಲ್ಲಿ ತೊಡಗಿದ್ದ 1905 ಆರೋಗ್ಯ ಕಾರ್ಯಕರ್ತರು ಮೃತಪಟ್ಟಿದ್ದಾರೆ. ಯೋಜನೆ ಅನ್ವಯ 50 ಲಕ್ಷದ ತನಕ ವಿಮೆ ನೀಡಲಾಗುತ್ತದೆ.

ಕೋವಿಡ್ ಕರ್ತವ್ಯದ ವೇಳೆ ಸಾವನ್ನಪ್ಪುವ ಆರೋಗ್ಯ ಕಾರ್ಯಕರ್ತರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಆರೋಗ್ಯ ಕಾರ್ಯಕರ್ತರಿಗೆ ವಿಮೆ ಘೋಷಣೆ ಮಾಡಿತ್ತು. ಕಳೆದ ವರ್ಷ ಈ ಯೋಜನೆಯನ್ನು ಒಂದು ವರ್ಷದ ತನಕ ವಿಸ್ತರಣೆ ಮಾಡಲಾಗಿತ್ತು. ಈ ಯೋಜನೆ ಅಡಿ 22.12 ಲಕ್ಷ ಫಲಾನುಭವಿಗಳಿದ್ದಾರೆ.

ಮಂಗಳವಾರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಭಾರತದಲ್ಲಿ 1247 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಏಪ್ರಿಲ್ 18ರ ಹೆಲ್ತ್ ಬುಲೆಟಿನ್‌ಗೆ ಹೋಲಿಕೆ ಮಾಡಿದರೆ ಶೇ 43ರಷ್ಟು ಪ್ರಕರಣಗಳು ಕಡಿಮೆಯಾಗಿವೆ.

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 928 ಜನರು ಗುಣಮುಖಗೊಂಡಿದ್ದಾರೆ. ದೇಶದ ಕೋವಿಡ್ ಗುಣಮುಖ ಪ್ರಮಾಣ ಶೇ 98.76 ಆಗಿದೆ. ವಾರದ ಪಾಸಿಟಿವಿಟಿ ದರ ಶೇ 0.34 ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+