ಇಬ್ಬರು ಭಾರತೀಯರಿಗೆ ಕೊರೊನಾ ವೈರಸ್: ಇದು ಹಡಗಿನಲ್ಲಿರುವವರ ವಿಷ್ಯ

ನವದೆಹಲಿ, ಫೆಬ್ರವರಿ.12: ಇಬ್ಬರು ಭಾರತೀಯರಲ್ಲಿ ಮಾರಕ ರೋಗ ಕೊರೊನಾ ವೈರಸ್ (ಕೊವಿಡ್-19) ಪತ್ತೆಯಾಗಿರುವ ಬಗ್ಗೆ ಜಪಾನ್ ನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ತಿಂಗಳು ಹಾಂಗ್ ಕಾಂಗ್ ನಿಂದ ಹೊರಟ ಡೈಮೆಂಡ್ ಪ್ರಿನ್ಸಸ್ ಎಂಬ ಹಡಗಿನಲ್ಲಿ 200 ಭಾರತೀಯರು ಸೇರಿದಂತೆ 3,700 ಮಂದಿ ಪ್ರಯಾಣಿಕರಿದ್ದು, ಜಪಾನ್ ನ ಯೊಕೊಹಮಾ ಬಂದರಿನಲ್ಲಿ ಹಡಗು ಸಿಲುಕಿಕೊಂಡಿತ್ತು.

ಕಳೆದ ವಾರ ಜಪಾನ್ ಆಗಮಿಸಿದ್ದ ಹಡಗಿನಲ್ಲಿರುವ ಕೆಲವು ಪ್ರಯಾಣಿಕರಲ್ಲಿ ಕೊವಿಡ್-19 ಸೋಂಕು ತಗಲಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ ಪ್ರಯಾಣಿಕರನ್ನು ಮುಂದಿನ ಫೆಬ್ರವರಿ 19ರವರೆಗೂ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ.

ಒಟ್ಟು 174 ಪ್ರಯಾಣಿಕರಲ್ಲಿ ಕಾಣಿಸಿಕೊಂಡ ಕೋವಿಡ್-19

ಒಟ್ಟು 174 ಪ್ರಯಾಣಿಕರಲ್ಲಿ ಕಾಣಿಸಿಕೊಂಡ ಕೋವಿಡ್-19

ಹಡಗಿನಲ್ಲಿರುವ ಎಲ್ಲ ಪ್ರಯಾಣಿಕರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ನಂತರದಲ್ಲಿ ವಿಂಗಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಮುಂದಿನ ಫೆಬ್ರವರಿ.19ರವರೆಗೂ ಈ ಕಾರ್ಯ ನಡೆಯಲಿದ್ದು, ಇದುವರೆಗೂ ಹಡಗಿನಲ್ಲಿರುವ 174 ಮಂದಿಯಲ್ಲಿ ಸೋಂಕು ತಗಲಿರುವ ಬಗ್ಗೆ ಸ್ಪಷ್ಟವಾಗಿದೆ.

ಹಡಗಿನ ಪ್ರವೇಶಕ್ಕೆ ಫೆ.19ರವರೆಗೂ ನಿರ್ಬಂಧ

ಹಡಗಿನ ಪ್ರವೇಶಕ್ಕೆ ಫೆ.19ರವರೆಗೂ ನಿರ್ಬಂಧ

ಹಡಗಿನಲ್ಲಿ ಕೊವಿಡ್-19 ಸೋಂಕಿತರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲ ಪ್ರಯಾಣಿಕರ ವೈದ್ಯಕೀಯ ತಪಾಸಣೆ ಬಳಿಕವಷ್ಟೇ ಜಪಾನ್ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಅಲ್ಲಿವರೆಗೂ ಹಡಗಿನಲ್ಲೇ ಎಲ್ಲ ಪ್ರಯಾಣಿಕರನ್ನು ಇರಿಸಲಾಗುತ್ತಿದೆ.

ಭಾರತ ಸರ್ಕಾರದ ಮೊರೆಯಿಟ್ಟ ಭಾರತೀಯರು

ಭಾರತ ಸರ್ಕಾರದ ಮೊರೆಯಿಟ್ಟ ಭಾರತೀಯರು

ಚೀನಾದ ವುಹಾನ್ ನಗರದಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಿಸಿದಂತೆ ಹಡಗಿನಲ್ಲಿ ಸಿಲುಕಿರುವ ತಮ್ಮನ್ನು ರಕ್ಷಿಸುವಂತೆ ಕೆಲವು ಭಾರತೀಯರು ಸಾಮಾಜಿಕ ಜಾಲತಾಣಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಪಶ್ಚಿಮ ಬಂಗಾಳ ಮೂಲಕ ಬಿನಯ್ ಕುಮಾರ್ ಸರ್ಕಾರ್, ವಿಡಿಯೋವೊಂದನ್ನು ಅಪ್ ಲೋಡ್ ಮಾಡಿ ತಮ್ಮನ್ನು ರಕ್ಷಿಸುವಂತೆ ಮೊರೆಯಿಟ್ಟಿದ್ದರು.

ನಮ್ಮ ದೇಶಕ್ಕೆ ನಮ್ಮನ್ನು ಕರೆಸಿಕೊಳ್ಳಿ ಎಂದು ಮನವಿ

ನಮ್ಮ ದೇಶಕ್ಕೆ ನಮ್ಮನ್ನು ಕರೆಸಿಕೊಳ್ಳಿ ಎಂದು ಮನವಿ

ಜಪಾನ್ ಹಡಗಿನಲ್ಲಿ ಸಿಲುಕಿರುವ ತಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆಸಿಕೊಳ್ಳುವಂತೆ ಭಾರತೀಯರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಟೋಕಿಯೋದಲ್ಲಿ ಇರುವ ಭಾರತೀಯ ರಾಯಭಾರಿಯು ಪ್ರತಿಕ್ರಿಯೆ ನೀಡಿದೆ. ಹಡಗಿನಲ್ಲಿ ಇರುವ ಭಾರತೀಯರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ರಾಯಭಾರಿ ಕಚೇರಿ ಸ್ಪಷ್ಟಪಡಿಸಿದೆ.

ಡ್ರ್ಯಾಗನ್ ರಾಷ್ಟ್ರದಲ್ಲಿ ಮುಂದುವರಿದ ಸಾವಿನ ಸರದಿ

ಡ್ರ್ಯಾಗನ್ ರಾಷ್ಟ್ರದಲ್ಲಿ ಮುಂದುವರಿದ ಸಾವಿನ ಸರದಿ

ಚೀನಾದಲ್ಲಿ ಕೋವಿಡ್-19 ಮಾರಕ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಬುಧವಾರದ ಅಂಕಿ-ಅಂಶಗಳ ಪ್ರಕಾರ ಚೀನಾ ಒಂದರಲ್ಲೇ 1,113 ಮಂದಿ ಕೊವಿಡ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಇನ್ನು, 44,653 ಜನರಲ್ಲಿ ಮಾರಕ ಸೋಂಕು ಪತ್ತೆಯಾಗಿರುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಕೊರೊನಾ ವೈರಸ್ ಗೆ ಕೋವಿಡ್-19 ಎಂಬ ಹೆಸರು

ಕೊರೊನಾ ವೈರಸ್ ಗೆ ಕೋವಿಡ್-19 ಎಂಬ ಹೆಸರು

ಜಾಗತಿಕ ಮಟ್ಟದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ನ್ನು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ(WHO) ಗಂಭೀರವಾಗಿ ಪರಿಗಣಿಸಿದೆ. ಡಬ್ಲ್ಯೂಹೆಚ್ಓ ಕೊರೊನಾ ವೈರಸ್ ಗೆ ಹೊಸದಾಗಿ ನಾಮಕರಣ ಮಾಡಿದೆ. Corona ಎಂಬ ಪದದಿಂದ CO ಮತ್ತು Virus ಎಂಬ ಪದದಿಂದ Vi ಅನ್ನು ತೆಗೆದುಕೊಂಡಿದ್ದು 2019ರಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ 19 ಅನ್ನು ತೆಗೆದುಕೊಂಡಿದ್ದು Covid-19 ಎಂದು ಹೆಸರು ಕೊಡಲಾಗಿದೆ. ಇದರ ಜೊತೆಗೆ ಕೊವಿಡ್-19ಗೆ ಔಷಧವನ್ನು ಕಂಡು ಹಿಡಿಯಲು 18 ತಿಂಗಳು ಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+