ಕೋವಿಡ್-19 ಲಸಿಕೆ ತುರ್ತು ಬಳಕೆ ಅನುಮತಿ: ಭಾರತದಲ್ಲಿನ ಅರ್ಜಿ ಹಿಂಪಡೆದ ಫೈಜರ್

ನವದೆಹಲಿ, ಫೆಬ್ರವರಿ 5: ಭಾರತದಲ್ಲಿ ತನ್ನ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆದುಕೊಳ್ಳಲು ನಿರ್ಧರಿಸಿರುವುದಾಗಿ ಅಮೆರಿಕದ ಔಷಧ ದಿಗ್ಗಜ ಫೈಜರ್ ಕಂಪೆನಿ ಶುಕ್ರವಾರ ತಿಳಿಸಿದೆ.

ಭಾರತದಲ್ಲಿ ತನ್ನ ಕೋವಿಡ್ 19 ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಕ್ಕೆ (ಡಿಸಿಜಿಐ) ಅರ್ಜಿ ಸಲ್ಲಿಸಿದ್ದ ಮೊದಲ ಕಂಪೆನಿ ಎನಿಸಿದ್ದ ಫೈಜರ್‌ಗೆ ಇದುವರೆಗೂ ಅನುಮತಿ ದೊರಕಿರಲಿಲ್ಲ. ಬ್ರಿಟನ್ ಮತ್ತು ಬಹರೇನ್‌ಗಳಲ್ಲಿ ತನ್ನ ಲಸಿಕೆ ಬಳಕೆಗೆ ಅನುಮತಿ ದೊರಕುತ್ತಿದ್ದಂತೆಯೇ ಅದು ಭಾರತದಲ್ಲಿ ಕೂಡ ಅನುಮತಿ ಕೋರಿತ್ತು. ಆದರೆ ಅದರ ನಂತರ ಅರ್ಜಿ ಸಲ್ಲಿಸಿದ್ದ ಸೆರಮ್ ಸಂಸ್ಥೆಯ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗಳಿಗೆ ಭಾರತ ಅನುಮತಿ ನೀಡಿತ್ತು.

'ಕೋವಿಡ್-19 ಲಸಿಕೆಯ ತುರ್ತು ಬಳಕೆ ಅಧಿಕಾರವನ್ನು ಪಡೆದುಕೊಳ್ಳುವ ಸಂಬಂಧ ಭಾರತದ ಔಷಧ ನಿಯಂತ್ರಣಾ ಪ್ರಾಧಿಕಾರದ ಪರಿಣತರ ಸಮಿತಿಯ ಜತೆ ಬುಧವಾರ ನಡೆದ ಸಭೆಯಲ್ಲಿ ಫೈಜರ್ ಪ್ರತಿನಿಧಿಗಳು ಭಾಗವಹಿಸಿದ್ದರು. ಆ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಅನುಗುಣವಾಗಿ, ಔಷಧ ನಿಯಂತ್ರಕರು ಮತ್ತಷ್ಟು ಹೆಚ್ಚುವರಿ ಮಾಹಿತಿಗಳನ್ನು ಬಯಸಿರುವ ಹಿನ್ನೆಲೆಯಲ್ಲಿ ಕಂಪೆನಿಯು ಈ ಬಾರಿ ತನ್ನ ಅರ್ಜಿ ಹಿಂಪಡೆಯಲು ನಿರ್ಧರಿಸಿದೆ' ಎಂದು ಕಂಪೆನಿಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 Covid-19 : Pfizer Withdraws Emergency Use Authorisation Application In India

ಫೈಜರ್ ಪ್ರಾಧಿಕಾರದೊಂದಿಗೆ ಸಂಪರ್ಕದಲ್ಲಿರುವುದನ್ನು ಮುಂದುವರಿಸಲಿದ್ದು, ಭವಿಷ್ಯದಲ್ಲಿ ಶೀಘ್ರದಲ್ಲಿಯೇ ಹೆಚ್ಚುವರಿ ಮಾಹಿತಿಗಳನ್ನು ಒದಗಿಸುವ ಮೂಲಕ ಪುನಃ ಬಳಕೆ ಮನವಿ ಸಲ್ಲಿಸಲಿದೆ ಎಂದು ಅವರು ಹೇಳಿದ್ದಾರೆ. ಸ

ಡಿಸೆಂಬರ್ ತಿಂಗಳಲ್ಲಿ ಫೈಜರ್ ಲಸಿಕೆ ಬಳಕೆಗೆ ಕೋರಿ ಔ‍ಷಧ ನಿಯಂತ್ರಕರಿಗೆ ಅರ್ಜಿ ಸಲ್ಲಿಸಿತ್ತು. ಭಾರತದಲ್ಲಿ ತನ್ನ ಲಸಿಕೆಯ ಮಾರಾಟ ಹಾಗೂ ಹಂಚಿಕೆಗೆ ಅನುಮತಿ ಕೋರಿತ್ತು. ಜತೆಗೆ ಹೊಸ ಔಷಧ ಮತ್ತು ಕ್ಲಿನಿಕಲ್ ಪ್ರಯೋಗ ನಿಯಮಗಳು, 2019ರ ವಿಶೇಷ ನಿಯಮಗಳಿಗೆ ಅನುಗುಣವಾಗಿ ಭಾರತದ ಜನಸಂಖ್ಯೆಯ ಮೇಲೆ ಕ್ಲಿನಿಕಲ್ ಪ್ರಯೋಗ ನಡೆಸುವುದರಿಂದ ವಿನಾಯಿತಿ ಕೋರಿತ್ತು.

ಆದರೆ, ಸ್ಥಳೀಯ ಮಟ್ಟದಲ್ಲಿ ಯಾವುದೇ ಪ್ರಯೋಗ ನಡೆಸದೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಭಾರತ ಹೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+