• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಮೂವರಲ್ಲಿ ಮರುಕಳಿಸಿದ ಕೊರೊನಾ ಸೋಂಕು:ಐಸಿಎಂಆರ್

|

ನವದೆಹಲಿ, ಅಕ್ಟೋಬರ್ 14: ಭಾರತದಲ್ಲಿ ಮೂರು ಮಂದಿಯಲ್ಲಿ ಕೊರೊನಾ ಸೋಂಕು ಮರುಕಳಿಸಿದೆ.

ಐಸಿಎಂಆರ್ ನಿರ್ದೇಶಕ ಬಲರಾಮ್ ಭಾರ್ಗವ ಕೋವಿಡ್-19 ಸೋಂಕು ಮರುಕಳಿಸುವುದೇ ಆದಲ್ಲಿ ಚೇತರಿಕೆ ಕಂಡ 100 ದಿನಗಳಲ್ಲಿ ಮರುಕಳಿಸುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಪ್ರತಿಕಾಯಗಳು ನಾಲ್ಕು ತಿಂಗಳವರೆಗೆ ಜೀವ ಹೊಂದಿರುತ್ತವೆ ಎಂದು ಹೇಳಿದ್ದಾರೆ.

ಚಳಿಗಾಲದಲ್ಲಿ ಕೊರೊನಾದ ಎರಡನೇ ಅಲೆ: ನೀತಿ ಆಯೋಗ ಎಚ್ಚರಿಕೆ

ಕೊರೊನಾ ಪ್ರಕರಣಗಳ ಏರಿಳಿತದ ನಡುವೆ ಹೊಸ ಆತಂಕ ಮೂಡಿದ್ದು ಮೂವರಿಗೆ ಕೊವಿಡ್-19 ಮರುಕಳಿಸಿದೆ. ಒಂದು ಸಮಯದಲ್ಲಿ ಕೊವಿಡ್-19 ಹಾಟ್ ಸ್ಪಾಟ್ ಎಂದೇ ಗುರುತಿಸಿಕೊಂಡಿದ್ದ ಮುಂಬೈ ನಲ್ಲಿ ಎರಡು ಪ್ರಕರಣಗಳಲ್ಲಿ ಕೊವಿಡ್-19 ಸೋಂಕು ಮರುಕಳಿಸಿದ್ದು, ಅಹ್ಮದಾಬಾದ್ ನಲ್ಲಿ ಒಂದು ಪ್ರಕರಣ ವರದಿಯಾಗಿದೆ ಎಂದು ಐಸಿಎಂಆರ್ ತಿಳಿಸಿದೆ.

ಮರುಕಳಿಸುವ ಅವಧಿ 90 ದಿನಗಳೋ, 100 ದಿನಗಳೋ ಅಥವಾ 110 ದಿನಗಳೋ ಎಂಬ ಬಗ್ಗೆ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಭಾರತದಲ್ಲಿ ನಾವು 100 ದಿನಗಳೆಂದು ಪರಿಗಣಿಸಿದ್ದೇವೆ ಎಂದು ಭಾರ್ಗವ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯಿಂದ ನಾವು ಕೆಲವು ದತ್ತಾಂಶಗಳನ್ನು ಪಡೆದಿದ್ದೇವೆ, ವಿಶ್ವದಲ್ಲಿ ಈ ವರೆಗೂ 12 ಕ್ಕೂ ಹೆಚ್ಚು ಕೊವಿಡ್-19 ಮರುಕಳಿಸಿದ ಪ್ರಕರಣಗಳು ವರದಿಯಾಗಿದೆ.

   Congress ಶಾಲಿಗೆ ಬೆಲೆ ಇಲ್ಲಾ ಅನ್ನೋದು ಗೊತ್ತಾಗಿದೆ | Oneindia Kannada

   ಈಗ ಭಾರತದಲ್ಲಿ ಕೊರೊನಾ ಸೋಂಕು ಮರುಕಳಿಸಿರುವವರ ಬಗ್ಗೆ ದತ್ತಾಂಶ ಸಂಗ್ರಹಿಸಲು ಮುಂದಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

   English summary
   The Indian Council of Medical Research (ICMR), which is studying reinfection among coronavirus (Covid-19) cases, has identified three to date that are being looked into, said Dr Balram Bhargava, director-general (D-G), ICMR, on Tuesday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X