ಕೋವ್ಯಾಕ್ಸಿನ್ ಲಸಿಕೆಯ ಕೊನೆಯ ಹಂತದ ಪರಿಣಾಮ ಅರಿಯಲು ಕೆಲವು ವಾರಗಳು ಬೇಕು
ನವದೆಹಲಿ, ಜನವರಿ 26: ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ ಕೊನೆಯ ಹಂತದ ಪರಿಣಾಮವನ್ನು ಅರಿಯಲು ಕೆಲವು ವಾರಗಳು ಬೇಕು ಎಂದು ಮೂಲಗಳು ತಿಳಿಸಿವೆ.
ಭಾರತ್ ಬಯೋಟೆಕ್ ಕೋವಾಕ್ಸಿನ್ ಲಸಿಕೆಯನ್ನು ಕೊವಿಶೀಲ್ಡ್ ಜೊತೆಗೆ ನಿನ್ನೆ ಚತ್ತೀಸ್ ಗಢ, ಗುಜರಾತ್, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಜನತೆಗೆ ನೀಡಲಾಗಿದೆ.
ಕಳೆದ ಭಾನುವಾರದವರೆಗೆ 12 ರಾಜ್ಯಗಳಲ್ಲಿ ಮಾತ್ರ ಕೋವ್ಯಾಕ್ಸಿನ್ ಮತ್ತು ಸೆರಂ ಇನ್ಸ್ ಟಿಟ್ಯೂಟ್ ನ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗುತ್ತಿತ್ತು.

ಕಳೆದ ವಾರ ಹೇಳಿಕೆ ನೀಡಿದ್ದ ಭಾರತ್ ಬಯೋಟೆಕ್, ಕೋವ್ಯಾಕ್ಸಿನ್ ನ ಎರಡನೇ ಸುತ್ತನ್ನು 13 ಸಾವಿರ ಮಂದಿಗೆ ಯಶಸ್ವಿಯಾಗಿ ನೀಡಲಾಗಿದೆ. ಸದ್ಯ ಲಸಿಕೆಯ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ ಎಂದು ಹೇಳಿತ್ತು.
ಭಾರತದ ಮೊದಲ ದೇಶಿ ನಿರ್ಮಿತ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ ನ್ನು ಇನ್ನೂ ಏಳು ರಾಜ್ಯಗಳ ಜನತೆಗೆ ನೀಡಲಾಗಿದ್ದು, ಇದರ ಪರಿಣಾಮ ಗೊತ್ತಾಗಲು ಕೆಲವು ವಾರಗಳು ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.












Click it and Unblock the Notifications