ಯುವತಿಯರೇಕೆ ಓಡಿ ಹೋಗ್ತಿದ್ದಾರೆ? ತನಿಖೆಗೆ ಮಾಡಿ
ಬರೇಲಿ, ಫೆ. 5: ಓಡಿ ಹೋಗುವ ಯುವತಿಯರ ವಯಸ್ಸು ಎಷ್ಟಿರಬೇಕು ಎಂದು ಎಲ್ಲಿಯೂ ಹೇಳಿಲ್ಲ. ಆದರೆ, ಓಡಿ ಹೋದವರೆಲ್ಲ 19 ವರ್ಷ ವಯಸ್ಸಿಗಿಂತ ಹೆಚ್ಚಿನವರು ಏಕೆ? ಈ ಅನುಮಾನ ಬಂದಿದ್ದು ಬರೇಲಿ ಕೋರ್ಟ್‌ಗೆ.
ಕೇವಲ ಆರು ತಿಂಗಳಲ್ಲಿ 149 ಯುವತಿಯರು ಪಲಾಯನಗೈದಿದ್ದಾರೆ. ಆದರೆ, ಅವರೆಲ್ಲ 19 ವಯಸ್ಸಿಗಿಂತ ಮೇಲ್ಪಟ್ಟವರು. ಈ ಕುರಿತು ತನಿಖೆ ನಡೆಸಿ... ಹೀಗೆಂದು ಬರೇಲಿಯಲ್ಲಿರುವ ನ್ಯಾಯಾಲಯವೊಂದು ಪೊಲೀಸರಿಗೆ ಆದೇಶ ನೀಡಿದೆ. [ಪ್ರೇಮಿಗಳೇ ಎಚ್ಚರ... ಸಿಕ್ಕಿಬಿದ್ದರೆ ಮದುವೆ ಗ್ಯಾರಂಟಿ]
ಅಲ್ಲದೆ, ವೈದ್ಯಕೀಯ ಪರೀಕ್ಷೆಯಲ್ಲಿ ಎಷ್ಟು ಯುವತಿಯರು ನಿಜವಾಗಿಯೂ ವಯಸ್ಕರು ಎಂಬುದು ಪತ್ತೆಯಾಗಿದೆ ಎಂದು ತಿಳಿಸುವಂತೆ ವೈದ್ಯಾಧಿಕಾರಿಗೆ ಸೂಚನೆ ನೀಡಿದೆ.

ಆದರೆ, ನ್ಯಾಯಾಲಯಕ್ಕೆ ಈ ಅನುಮಾನ ಬರಲು ಕಾರಣ ಏನು ಎಂಬುದನ್ನು ತಿಳಿಸಿಲ್ಲ. ಪೊಲೀಸರು ಈ ನಿಟ್ಟಿನಲ್ಲಿ ಯಾವ ತನಿಖೆ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಓಡಿಹೋಗುವ ಯುವತಿಯರ ಪಾಲಕರೆಲ್ಲ ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದೇ ದೂರು ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮಗಳು ಇನ್ನೂ ಬಾಲಕಿ ಎಂದು ತಿಳಿಸುತ್ತಾರೆ. ಆದರೆ, ನಂತರ ಮಗಳ ವಯಸ್ಸನ್ನು ಸಾಬೀತುಪಡಿಸುವಲ್ಲಿ ವಿಫಲರಾಗುತ್ತಿದ್ದಾರೆ. [ಮದುವೆಗಾಗಿ ಕಾಯ್ತಿದ್ದಾರೆ 5 ಲಕ್ಷ ಯುವತಿಯರು]
ಅಲ್ಲದೆ, ಓಡಿಹೋದ ಮಗಳನ್ನು ಹುಡುಕಿ ತಂದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಅವರು ವಯಸ್ಕರು ಎಂಬುದು ಸಾಬೀತಾಗುತ್ತಿದೆ. ಆದ್ದರಿಂದ ನ್ಯಾಯಾಲಯಕ್ಕೆ ಕೂಡ ಮಗಳಿಗೆ ಅವರ ಸ್ನೇಹಿತರ ಜೊತೆ ಹೋಗಲು ಅವಕಾಶ ಮಾಡಿಕೊಡಲಾಗುತ್ತಿದೆ.












Click it and Unblock the Notifications