'ಯುವಕ, ಯುವತಿಯರು ಅಪ್ಪಿಕೊಳ್ಳುವುದರಿಂದ ಅತ್ಯಾಚಾರ ಹೆಚ್ಚಾಗ್ತಿವೆ'
ಯುವಕ, ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ಅಪ್ಪಿಕೊಳ್ಳುತ್ತಿರುವುದರಿಂದಲೇ ಸಮಾಜದಲ್ಲಿ ಅತ್ಯಾಚಾರ ಹೆಚ್ಚು. ಉತ್ತರ ಪ್ರದೇಶದ ಉನ್ನಾ ಕ್ಷೇತ್ರದ ಬಿಜೆಪಿ ಸಂಸದ ಸಾಕ್ಷಿ ಮಹಾಜನ್ ಅವರಿಂದ ವಿವಾದಾತ್ಮಕ ಹೇಳಿಕೆ.
ನವದೆಹಲಿ, ಸೆಪ್ಟೆಂಬರ್ 21: ತಮ್ಮ ವಿಚಿತ್ರ ಹೇಳಿಕೆಗಳ ಮೂಲಕ ಆಗಾಗ ವಿವಾದಕ್ಕೀಡಾಗುವ ಉತ್ತರ ಪ್ರದೇಶದ ಉನ್ನಾವೊ ಕ್ಷೇತ್ರದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದಿನ ಯುವಕ, ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಅಪ್ಪಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇದರಿಂದಲೇ ಸಮಾಜದಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕ ಸಭೆಯೊಂದರಲ್ಲಿ ಭಾಷಣ ಮಾಡುತ್ತಿದ್ದಾಗ ಅವರ ಬಾಯಿಂದ ಈ ನುಡಿಮುತ್ತುಗಳು (!) ಉದುರಿವೆ.
ಅಷ್ಟೇ ಅಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಅಪ್ಪಿಕೊಳ್ಳುವ ಯುವಕ, ಯುವತಿಯರನ್ನು ಜೈಲಿಗೆ ಹಾಕಬೇಕು ಎಂದೂ ಅವರು ತಾಕೀತು ಮಾಡಿದ್ದಾರೆ.
''ಬೈಕ್ ಆಗಲೀ, ಕಾರ್ ಆಗಲೀ ಎಲ್ಲೇ ಇರಲಿ. ಸಾರ್ವಜನಿಕ ಸ್ಥಳಗಳಲ್ಲಿ ಈ ಯುವಕ, ಯುವತಿಯರು ಒಬ್ಬರನ್ನೊಬ್ಬರು ತಿಂದುಬಿಡುತ್ತಾರೇನೋ ಎಂಬಂತೆ ಅಪ್ಪಿಕೊಳ್ಳುತ್ತಿರುತ್ತಾರೆ. ಇದರಿಂದಾಗಿಯೇ ಸಾಮಾಜಿಕ ಸ್ವಾಸ್ಥ್ಯ ಹಾಳುಗುತ್ತಿದೆ ಎಂದಿದ್ದಾರೆ.












Click it and Unblock the Notifications