ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಚುನಾವಣೆ: ಇಂದು ಫಲಿತಾಂಶ
ಶಿಲ್ಲಾಂಗ್/ಕೋಹಿಮಾ/ಅಗರ್ತಳ, ಮಾರ್ಚ್ 03: ಸಪ್ತ ಸಹೋದರಿಯರೆಂದೇ ಕರೆಸಿಕೊಳ್ಳುವ ಈಶಾನ್ಯ ರಾಜ್ಯಗಳಲ್ಲಿ ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು(ಮಾ.3) ಹೊರಬೀಳಲಿದೆ.
ಮೂರು ರಾಜ್ಯಗಳಲ್ಲಿ ತಲಾ 60 ವಿಧಾನಸಭಾ ಕ್ಷೇತ್ರಗಳಿದ್ದು, ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರದ ಹಾಲಿ ವಿಧಾನಸಭೆಯ ಕಾಲಾವಧಿ ಕ್ರಮವಾಗಿ ಮಾರ್ಚ್ 6, 13 ಮತ್ತು 14 ರಂದು ಅಂತ್ಯಗೊಳ್ಳಲಿದೆ.
ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶದ ಕ್ಶಣ ಕ್ಷಣದ ಲೈವ್ ಮಹಿತಿಯನ್ನು ಒನ್ ಇಂಡಿಯಾ ನೀಡಲಿದೆ.

ತ್ರಿಪುರದಲ್ಲಿ ಫೆ.18 ರಂದು ಮತದಾನ ನಡೆದಿದ್ದರೆ, ಮೇಘಾಲಯ ಮತ್ತು ನಾಗಾಲ್ಯಾಂಡ್ ಗಳಲ್ಲಿ ಫೆ.27 ರಂದು ಮತದಾನ ನಡೆದಿತ್ತು.
ಮೂರೂ ರಾಜ್ಯಗಳಲ್ಲೂ ಇವಿಎಂ(Electronic voting machines) ಮತ್ತು ವಿವಿಪಿಎಟಿ (Voter Verifiable Paper Audit Trail) ಯಂತ್ರಗಳನ್ನು ಬಳಸಲಾಗಿತ್ತು. ಕೆಲವೆಡೆ ಯಂತ್ರ ಕೈಕೊಟ್ಟಿದ್ದರಿಂದ ಮರು ಮತದಾನವೂ ನಡೆದಿತ್ತು.












Click it and Unblock the Notifications