ಭಾರತದಲ್ಲಿ ಕೊರೊನಾ ಲಸಿಕೆ ಸಾಮಾನ್ಯ ಜನರ ಕೈತಲುಪುವುದು ಯಾವಾಗ?
ನವದೆಹಲಿ, ಆಗಸ್ಟ್ 20: ನಾವೆಲ್ ಕೊರೊನಾ ವೈರಸ್‌ಗೆ ಲಸಿಕೆ ಬಂದರೂ ಕೂಡ ಸಾಮಾನ್ಯ ಜನರನ್ನು ಅದು ತಲುಪಲು ಎಷ್ಟು ದಿನ ಬೇಕಾಗಬಹುದು ಎನ್ನುವ ಸಹಜ ಪ್ರಶ್ನೆ ಮೂಡಿದೆ.
Recommended Video
ಸುಮಾರು 12ರಷ್ಟು ಕಂಪನಿಗಳು ಕೊರೊನಾ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿವೆ. ಸಾಕಷ್ಟು ಕಂಪನಿಗಳು ಅಭಿವೃದ್ಧಿ ಹಂತದಲ್ಲಿದೆ. ಲಸಿಕೆ ತಯಾರಿಕೆಯಲ್ಲಿ ನಡೆಯುತ್ತಿರುವ ಸ್ಪರ್ಧೆಯನ್ನು ಕೂಡ ಗಮನಿಸಬಹುದಾಗಿದೆ.
ರಷ್ಯಾ, ಚೀನಾ, ಅಮೆರಿಕ, ಯುಕೆ ಹಾಗೂ ಭಾರತದಲ್ಲಿ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಬೇರೆಲ್ಲಾ ಲಸಿಕೆಗಳಿಗಿಂತಲೂ ತಾವು ಮೊದಲು ಲಸಿಕೆಯನ್ನು ಕಂಡುಹಿಡಿಯಬೇಕು ಎನ್ನುವ ಆತುರದಲ್ಲಿವೆ.
ಶೇ.60-70ರಷ್ಟು ಜನರಿಗಾದರೂ ಲಸಿಕೆ ನೀಡಿ, ಕೊರೊನಾ ಸೋಂಕು ಹರಡುವುದನ್ನು ತಡೆಯುವ ಯೋಜನೆ ರೂಪಿಸಲಾಗಿದೆ. ಮುಂದಿನ ವರ್ಷದ ಮಧ್ಯಭಾಗದಲ್ಲಿ ಎಲ್ಲರಿಗೂ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ.

ರಷ್ಯಾದಲ್ಲಿ ವಿಶ್ವದ ಮೊದಲ ಕೊರೊನಾ ಲಸಿಕೆ ಸಂಶೋಧನೆ
ರಷ್ಯಾದಲ್ಲಿ ವಿಶ್ವದ ಮೊದಲ ಕೊರೊನಾ ಲಸಿಕೆ ಸಂಶೋಧನೆ ನಡೆಸಲಾಗಿದ್ದು, ಆಗಸ್ಟ್ 11 ರಂದು ಅದಕ್ಕೆ ಒಪ್ಪಿಗೆಯೂ ಕೂಡ ದೊರೆತಿದೆ. ಮೊದಲ ಲಸಿಕೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಗಳು ಪಡೆಯಲಿದ್ದಾರೆ ಎಂದು ಪುಟಿನ್ ತಿಳಿಸಿದ್ದಾರೆ.

ಭಾರತದಲ್ಲಿ ಮೂರು ಲಸಿಕೆಗಳು ಶೀಘ್ರ ಬಳಕೆಗೆ
ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಮೂರು ಕೊರೊನಾ ಲಸಿಕೆಗಳ ಪ್ರಯೋಗ ವಿವಿಧ ಹಂತಗಳಲ್ಲಿ ನಡೆಯುತ್ತಿದೆ. ಅತಿ ಶೀಘ್ರದಲ್ಲಿ ಭಾರತದ ಜನರಿಗೆ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಭರವಸೆ ನೀಡಿದ್ದರು.ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್, ಝೈಡಸ್ ಕ್ಯಾಡಿಲಾ, ಸೇರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಲಸಿಕೆಗಳು ಲಭ್ಯವಿರಲಿವೆ.

ಮೂರು ಲಸಿಕೆಗಳ ವಿವಿರ
ಭಾರತ್ ಬಯೋಟೆಕ್ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಜತೆ ಸೇರಿ ಪ್ರಯೋಗಗಳನ್ನು ನಡೆಸುತ್ತಿದೆ.ಝೈಡಸ್ ಒಂದು ಹಾಗೂ ಎರಡನೇ ಹಂತದ ಪ್ರಯೋಗಗಳನ್ನು ನಡೆಸುತ್ತಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಕ್ಸ್‌ಫರ್ಡ್ ಜೊತೆ ಸೇರಿ ಎರಡು ಹಾಗೂ ಮೂರನೇ ಹಂತದ ಪ್ರಯೋಗ ನಡೆಸುತ್ತಿದೆ. ವಿವಿಧ ಹಂತಗಳಲ್ಲಿ ದೇಶದ 50 ಸಾವಿರಕ್ಕೂ ಅಧಿಕ ಮಂದಿ ಪ್ರಯೋಗಕ್ಕೆ ಒಳಗಾಗುತ್ತಿದ್ದಾರೆ.

ಡಿಸೆಂಬರ್ ಅಂತ್ಯಕ್ಕೆ ಲಸಿಕೆ ಸಿಗುತ್ತೆ ಆದರೆ...
ಡಿಸೆಂಬರ್ ಅಂತ್ಯಕ್ಕೆ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಆದರೆ ಯಾರು ಮೊದಲು ಈ ಲಸಿಕೆಯನ್ನು ಪಡೆಯುತ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ವೈದ್ಯರು, ಆರೋಗ್ಯ ಕಾರ್ಯಕರ್ತರು, ಮಕ್ಕಳು, ಶಿಕ್ಷಕರು, ವೃದ್ಧರು ಯಾರು ಈ ಲಸಿಕೆಯನ್ನು ಮೊದಲು ಪಡೆಯುತ್ತಾರೆ. ದೇಶದ ಎಲ್ಲಾ ಜನರಿಗೂ ಲಸಿಕೆಯನ್ನು ಒಂದೇ ಬಾರಿಗೆ ಒದಗಿಸಲು ಸಾಧ್ಯವಿಲ್ಲ.












Click it and Unblock the Notifications