ಓರ್ವ ಕೊರೊನಾ ಸೋಂಕಿತ ಎಂದು ದೃಢಪಡಲು 4 ದಿನ ಬೇಕು!
ಕೊಲ್ಕತ್ತ, ಏಪ್ರಿಲ್ 27: ಓರ್ವ ಕೊರೊನಾ ಸೋಂಕಿತ ಎಂದು ದೃಢಪಡಲು ನಾಲ್ಕು ದಿನಗಳು ಬೇಕು ಎನ್ನುವ ಮಾಹಿತಿ ಲಭ್ಯವಾಗಿದೆ.
ಕೊರೊನಾ ವೈರಸ್ ಪರೀಕ್ಷಾ ವರದಿ ತಡವಾಗಿ ಬರುತ್ತಿರವುದರಿಂದ ವೈರಸ್ ಮತ್ತಷ್ಟು ಮಂದಿಗೆ ಹರಡುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ಕೊಲ್ಕತ್ತ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಓರ್ವ ಆಸ್ಪತ್ರೆಗೆ ಹೋಗಿ ಸ್ವ್ಯಾಬ್ ಪರೀಕ್ಷೆ ಮಾಡಿಸಿದರೆ ಆತನ ವರದಿ ಬರಲು ನಾಲ್ಕು ದಿನಗಳು ಬೇಕು. ಆತನ ವರದಿ ಬಂದು ಐಸೊಲೇಷನ್‌ನಲ್ಲಿ ಇರಿಸುವ ಮುನ್ನ ಸಾಕಷ್ಟು ಮಂದಿಗೆ ವೈರಸ್ ಹರಡಿರುತ್ತದೆ ಎಂಬುದು ಕಳವಳಕಾರಿ ಸಂಗತಿ.

ಕೊಲ್ಕತ್ತದಲ್ಲಿ ಪ್ರಯೋಗಾಲಯಗಳನ್ನು ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ. ಈಗಾಗಲೇ 10 ಪ್ರಯೋಗಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಕೊಲ್ಕತ್ತದ ಮಿಡ್ನಾಪುರ್, ಹೌರಾದಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಮನೆಮನೆಯ ಸರ್ವೇ
ಕೊಲ್ಕತ್ತ ಮುನ್ಸಿಪಲ್ ಕಾರ್ಪೊರೇಷನ್ ಇತ್ತೀಚೆಗೆ ಮನೆಮನೆಗೆ ಹೋಗಿ ಕೊರೊನಾ ಸರ್ವೇ ನಡೆಸಿತ್ತು. ಆಗ ಓರ್ವ ಕೊರೊನಾ ಶಂಕಿತ ವ್ಯಕ್ತಿ ಪತ್ತೆಯಾಗಿದ್ದರು. ಅವರಿಂದ ಸ್ಯಾಂಪಲ್‌ನ್ನು ತೆಗೆದುಕೊಂಡು ಹೋಗಿ ಚಿತ್ತರಂಜನ್ ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ಗ ನೀಡಲಾಗಿತ್ತು.ವರದಿ ಇನ್ನೂ ಬರಬೇಕಿದೆ.

24 ಗಂಟೆಗಳಲ್ಲೇ ವರದಿ ಬರುವಂತಾಗಬೇಕು
ಪರೀಕ್ಷೆ ನಡೆದು 24 ಗಂಟೆಗಳಲ್ಲೇ ವರದಿ ಬರುವಂತಾಗಬೇಕು. ಅಥವಾ ಕನಿಷ್ಠ 36 ಗಂಟೆಯೊಳಗೆ. ಆದರೆ ಯಾಕಾಗಿ ನಾಲ್ಕು ದಿನಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಕಾರ್ಪೊರೇಷನ್ ಅಧಿಕಾರಿ ಹೇಳಿದ್ದಾರೆ.

ಸೋಂಕು ಶಂಕಿತವೆನಿಸಿದರೆ ತಕ್ಷವೇ ಆಸ್ಪತ್ರೆಗೆ ದಾಖಲಾಗಿ
ನಿಮಗೆ ಅಥವಾ ನಿಮ್ಮ ಕುಟುಂಬದವರು ಯಾರೇ ಆಗಿರಲಿ ಅವರಿಗೆ ಕೊರೊನಾ ಸೋಂಕು ಇದೆ ಎಂದು ಅನಿಸಿದರೆ ತಕ್ಷಣವೇ ಆಸ್ಪತ್ರೆಗೆ ಬಂದು ದಾಖಲಾಗಿ. ಅಥವಾ ಮನೆಯಲ್ಲಿಯೇ ಕ್ವಾರಂಟೈನ್ ಆಗಿರಲಿ,ಎಲ್ಲರ ಸಂಪರ್ಕದಿಂದ ದೂರ ಉಳಿಯುವ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.

ವರದಿ ತಡವಾಗುವುದರಿಂದಾಗುವ ಅನಾಹುತಗಳು
ಶಂಕಿತ ವ್ಯಕ್ತಿ ಪರೀಕ್ಷೆ ಮಾಡಿಸಿ ಮನೆಗೆ ತೆರಳಿದರೆ, ವರದಿ ಬರುವ ಮುನ್ನ ಕುಟುಂಬ, ಸ್ನೇಹಿತರು ಎಲ್ಲರಿಗೂ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ವರದಿ ತಡವಾಗುವುದರಿಂದ ಐಸೊಲೇಷನ್ ಕೂಡ ತಡವಾಗುತ್ತದೆ. ವ್ಯಕ್ತಿ ಅಷ್ಟರಲ್ಲಿ ಸಾಕಷ್ಟು ಮಂದಿಗೆ ಕೊರೊನಾ ಸೋಂಕು ವರ್ಗಾಯಿಸಿರುತ್ತಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications