Coronavirus Mock drill: ಭಾರತದ 20,000 ಆಸ್ಪತ್ರೆಗಳಲ್ಲಿ ಅಣಕು ಡ್ರಿಲ್

ನವದೆಹಲಿ, ಡಿಸೆಂಬರ್ 28: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿ ನಡುವೆ ಭಾರತದಾದ್ಯಂತ ಮಂಗಳವಾರ 20,000 ಆಸ್ಪತ್ರೆಗಳಲ್ಲಿ ಅಣಕು ಡ್ರಿಲ್ ಅನ್ನು ಮಾಡಲಾಯಿತು. ಈ ವೇಳೆ 11,000ಕ್ಕೂ ಹೆಚ್ಚು ಆಕ್ಸಿಜನ್ ಸ್ಥಾವರಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 2.8 ಲಕ್ಷ ಪ್ರತ್ಯೇಕ ಹಾಸಿಗೆಗಳು ಲಭ್ಯವಿದ್ದವು.

ಕೆಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳ ಉಲ್ಬಣದ ಮಧ್ಯೆ ಕೋವಿಡ್ ಅನ್ನು ಎದುರಿಸಲು ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಲು ಮಂಗಳವಾರ ದೇಶಾದ್ಯಂತ ಅಣಕು ಡ್ರಿಲ್‌ಗಳನ್ನು ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ಚೀನಾ ಮತ್ತು ಇತರ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಸಮರಾಭ್ಯಾಸವನ್ನು ನಡೆಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಿದೆ. ಹೀಗಾಗಿ ಅಧಿಕಾರಿಗಳ ಪ್ರಕಾರ, 15,424 ಸರ್ಕಾರಿ ಸೌಲಭ್ಯಗಳು ಸೇರಿದಂತೆ 20,021 ಸೌಲಭ್ಯಗಳ ಸಮರಾಭ್ಯಾಸವನ್ನು ನಡೆಸಲಾಯಿತು. ಈ ಸೌಲಭ್ಯಗಳಾದ್ಯಂತ ಒಟ್ಟು 3,37,710 ಪ್ರತ್ಯೇಕ ಹಾಸಿಗೆಗಳಲ್ಲಿ 2,79,202 ಕ್ರಿಯಾತ್ಮಕವಾಗಿವೆ. ಒಟ್ಟು 2,82,229 ಆಕ್ಸಿಜನ್ ಬೆಂಬಲಿತ-ಕೋವಿಡ್ ಹಾಸಿಗೆಗಳಲ್ಲಿ 2,45,894 ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

Coronavirus News: Across India Mock drill held in 20,000 hospitals to check Covid preparedness

ಐಸಿಯು ಮತ್ತು ಐಸಿಯು-ಕಮ್-ವೆಂಟಿಲೇಟರ್ ಹಾಸಿಗೆ:

ಭಾರತದಲ್ಲಿ ಒಟ್ಟು 70,073 ಐಸಿಯು ಹಾಸಿಗೆಗಳಲ್ಲಿ 64,711, 57,286 ಐಸಿಯು-ಕಮ್-ವೆಂಟಿಲೇಟರ್ ಹಾಸಿಗೆಗಳಲ್ಲಿ 49,236 ಕಾರ್ಯನಿರ್ವಹಿಸುತ್ತಿವೆ. ಈ ಅಣಕು ಡ್ರಿಲ್ ಸಮಯದಲ್ಲಿ 20,021 ಸೌಲಭ್ಯಗಳಲ್ಲಿ 70,996 ವೆಂಟಿಲೇಟರ್‌ಗಳಲ್ಲಿ ಶೇ.88 ಪ್ರತಿಶತವು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಡ್ರಿಲ್ ಸಮಯದಲ್ಲಿ, 20,021 ಸೌಲಭ್ಯಗಳಲ್ಲಿ 70,996 ವೆಂಟಿಲೇಟರ್‌ಗಳಲ್ಲಿ ಶೇ.88 ಪ್ರತಿಶತವು ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. 12,656 ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಶನ್ (ಪಿಎಸ್‌ಎ) ಸ್ಥಾವರಗಳಲ್ಲಿ ಶೇ.93 ಪ್ರತಿಶತ, 6,63,547 ಮತ್ತು ಆಮ್ಲಜನಕ 966 ಸಿಲಿಂಡರ್‌ಗಳಲ್ಲಿ ಶೇ.94 ಪ್ರತಿಶತ 2,37,003 ಆಮ್ಲಜನಕದ ಸಾಂದ್ರಕಗಳಲ್ಲಿ ಶೇಕಡಾವಾರು ಕ್ರಿಯಾತ್ಮಕವಾಗಿವೆ, ಎಂದು ಅಧಿಕೃತ ಅಂಕಿ-ಅಂಶಗಳು ಹೇಳುತ್ತವೆ.

Coronavirus News: Across India Mock drill held in 20,000 hospitals to check Covid preparedness

ಇನ್ನು ಔಷಧಗಳ ಪೈಕಿ ಈ ಸೌಲಭ್ಯಗಳಲ್ಲಿ 713,785 ರೆಮ್‌ಡೆಸಿವಿರ್, 76,581 ಟೊಸಿಲಿಜುಮಾಬ್, 8,41,85,669 ಡಾಕ್ಸಿಸೈಕ್ಲಿನ್, 8,42,90, 682 ಅಜಿಥ್ರೊಮೈಸಿನ್ ಮತ್ತು 2,46 27,157 ಡೆಕ್ಸಮೆಥಾಸೊನ್ ಸ್ಟಾಕ್ ಇದೆ ಎಂದು ಹೇಳಿದರು. ಅಲ್ಲದೆ, 11,681 ಬೇಸಿಕ್ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್‌ಗಳು ಮತ್ತು 3,723 ಸುಧಾರಿತ ಜೀವನ ಬೆಂಬಲ ಆಂಬ್ಯುಲೆನ್ಸ್‌ಗಳು ಲಭ್ಯವಿದೆ. 10,515 ಸೌಲಭ್ಯಗಳು ಟೆಲಿ-ಮೆಡಿಸಿನ್ ಸೇವೆಗಳನ್ನು ಹೊಂದಿದ್ದರೆ, 9,144 ಆಂಬ್ಯುಲೆನ್ಸ್ ಸೆಲ್ ಕೇಂದ್ರಗಳಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+