ಯಾಹೂ! ಲಾಕ್ಡೌನ್ ಟೈಮಲ್ಲಿ ಭಾರತೀಯರ ಟಾಪ್ 7 ಹುಡುಕಾಟವೇನು?

ಬೆಂಗಳೂರು, ಏಪ್ರಿಲ್ 28: ಕೊರೊನಾವೈರಸ್ ಸೋಂಕು ಹರಡದಂತೆ ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದ್ದರಿಂದ ಮನೆಯಲ್ಲೇ ಕಾಲ ಕಳೆಯುವ ಅನಿವಾರ್ಯ ಅಗತ್ಯ ಎದುರಾಗಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣ, ಸರ್ಚ್ ಇಂಜಿಂಗ್ ಗಳಲ್ಲಿ ಭಾರತೀಯರು ಹೆಚ್ಚೆಚ್ಚು ಹುಡುಕಾಟ ನಡೆಸಿದ್ದು ಯಾವುದರ ಬಗ್ಗೆ? ಏನೆಲ್ಲ ಹೊಸ ಅಭ್ಯಾಸ ಬೆಳೆಸಿಕೊಂಡಿದ್ದಾರೆ? ಕೊರೊನಾ ಬಗ್ಗೆ ಕೂಡಾ ಹೆಚ್ಚೆಚ್ಚು ಹುಡುಕಾಡಿ ಮಾಹಿತಿ ತಿಳಿದುಕೊಂಡಿದ್ದಾರೆ ಎಂದು ಸರ್ಚ್ ಇಂಜಿನ್ ಸಂಸ್ಥೆ ಯಾಹೂ ಮಾಹಿತಿ ನೀಡಿದೆ.

ಲಾಕ್ಡೌನ್ ಸಂದರ್ಭದಲ್ಲಿ ಭಾರತೀಯರು ಸರ್ಚ್ ಮಾಡಿರುವ ರೇಂಜ್, ವೆರೈಟಿ ನೋಡಿ ಸರ್ಚ್ ಇಂಜಿನ್ ಗೆ ತಲೆ ಕೆಡಿರಲೂ ಬಹುದು. ದಕ್ಷಿಣ ಕೊರಿಯಾ ಕಾಫಿ, ಪಾನಿಪುರಿಯಿಂದ ಹಿಡಿದು ಕನ್ನಿಕಾ ಕಪೂರ್ ತನಕ ಎಲ್ಲವೂ ಟ್ರೆಂಡ್ ಲಿಸ್ಟ್ ನಲ್ಲಿ ಕಾಣಿಸಿಕೊಂಡಿವೆ.

ಹಲವರಿಗೆ ಹೊಸ ಸಾಧ್ಯತೆಯನ್ನು ಲಾಕ್ಡೌನ್ ತೋರಿಸಿದೆ. ಫೇಸ್ಬುಕ್ ಲೈವ್ ಜೊತೆಗೆ ಇತ್ತೀಚೆಗೆ ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ನಲ್ಲಿ ಮುಸ್ಸಂಜೆ ವೇಳೆ ಲೈವ್ ಬರೋದು ರೂಢಿಯಾಗಿಬಿಟ್ಟಿದೆ. ಫೇಸ್ಬುಕ್ ನಲ್ಲಿ ಡೆಲ್ಕೋನಾ ಕಾಫಿ, ಪಾನಿಪುರಿ ಅಲ್ಲದೆ, ಥರಾವರಿ ತಿಂಡಿ, ತಿನಿಸು ,ಕೇಕ್ ಗಳ ಚಿತ್ರಗಳು ತುಂಬಿ ಹೋಗಿವೆ. ಮುಂದಿನ ಮಾಸ್ಟರ್ ಶೆಪ್ ಸ್ಪರ್ಧೆಗೆ ಇಂಡಿಯನ್ಸ್ ಸಿದ್ಧ ಎಂಬ ಟ್ರಾಲ್ಸ್ ಭರ್ಜರಿಯಾಗಿ ಜನಪ್ರಿಯತೆ ಗಳಿಸಿವೆ.

ಯಾಹೂ ಇಂಡಿಯಾ ಕಂಡಂತೆ 7 ಪ್ರಮುಖ ವಿಷಯಗಳ ಬಗ್ಗೆ ಟ್ರೆಂಡ್ ಉಂಟಾಗಿದೆ. ಈ 7 ವಿಷಯಗಳಲ್ಲಿ ಕನಿಷ್ಟ 5 ಕೀ ಪದಗಳನ್ನು ಸರ್ಚ್ ಮಾಡಲಾಗಿದೆ.. ಈ ಬಗ್ಗೆ ಇನ್ನಷ್ಟು ಮುಂದೆ ಓದಿ...

ಮನರಂಜನೆ ಕಾರ್ಯಕ್ರಮ ಸರ್ಚ್

ಮನರಂಜನೆ ಕಾರ್ಯಕ್ರಮ ಸರ್ಚ್

ಸಿನಿಮಾ ಹಾಗೂ ಟಿವಿ ಶೋಗಳ ಬಗ್ಗೆ ಸರ್ಚ್ ನಲ್ಲಿ ರಮಾನಂದ ಸಾಗರ ಅವರ ರಾಮಾಯಣ ನಂ.1ಸ್ಥಾನಕ್ಕೇರಿದೆ. ಮಿಕ್ಕಂತೆ ಯಾವೆಲ್ಲ ಶೋಗಳಿವೆ:
ರಾಮಾಯಣ(ಮೆಗಾ ಧಾರಾವಾಹಿ)
ಗುಡ್ ನ್ಯೂಜ್ (ಹಿಂದಿ ಸಿನಿಮಾ)
ತಾನಾಜಿ (ಹಿಂದಿ ಸಿನಿಮಾ)
ಬಿಗ್ ಬಾಸ್ (ರಿಯಾಲಿಟಿ ಶೋ)
ಕಂಟೇಜಿಯನ್ (ಇಂಗ್ಲೀಷ್ ಚಿತ್ರ)

ಕೋವಿಡ್ 19 ಬಗ್ಗೆ ಟಾಪ್ 5 ಸರ್ಚ್ ಕೀವರ್ಡ್

ಕೋವಿಡ್ 19 ಬಗ್ಗೆ ಟಾಪ್ 5 ಸರ್ಚ್ ಕೀವರ್ಡ್

ಲಾಕ್ಡೌನ್ ಗೂ ಮೊದಲು ದೆಹಲಿ ಚುನಾವಣೆ ಫಲಿತಾಂಶ, ದೆಹಲಿ ಗಲಭೆ, ಜೆಎನ್ ಯು ಗಲಭೆ ಟ್ರೆಂಡ್ ನಲ್ಲಿತ್ತು. ಲಾಕ್ಡೌನ್ ಶುರುವಾಗುತ್ತಿದ್ದಂತೆ ಸಂಪೂರ್ಣ್ ಕೊವಿಡ್ ಮಯ.

* COVID-19 updates
* Symptoms of COVID-19
* COVID-19 treatment
* COVID-19 death toll
* Live COVID-19 tracker

ಟಾಪ್ 10 ಅಡುಗೆ ರೆಸಿಪಿಗಳು

ಟಾಪ್ 10 ಅಡುಗೆ ರೆಸಿಪಿಗಳು

ದಕ್ಷಿಣ ಕೊರಿಯಾದ ಡಲ್ಗೋನಾ ಕಾಫಿ
ಕೇಕ್
ಪನೀರ್
ಸಮೋಸಾ
ಚಿಕನ್
ಸಾಂಬಾರ್
ಪಾವ್ ಬಾಜಿ
ರಾಜ್ಮಾದಿಂದ ಮಾಡುವ ಅಡುಗೆ
ನಿತ್ಯ ಉಪಾಹಾರ
ದಾಲ್ ಮಖನಿ

ಕೊರೊನಾವೈರಸ್ ಸಂಬಂಧಿಸಿದ ಟಾಪ್ ಸರ್ಚ್

ಕೊರೊನಾವೈರಸ್ ಸಂಬಂಧಿಸಿದ ಟಾಪ್ ಸರ್ಚ್

ವೈರಸ್ ಬಗ್ಗೆ ಅಪ್ಡೇಟ್, ಸುದ್ದಿ, ಚಿಕಿತ್ಸೆ, ಲಾಕ್ಡೌನ್, ಲಾಕ್ಡೌನ್ ವಿಸ್ತರಣೆ, ವರ್ಲ್ಡ್ ಮೀಟರ್ ನಲ್ಲಿ ವಿಶ್ವದೆಲ್ಲೆಡೆ ಮಾಹಿತಿ, ಕೊವಿಡ್ ಗೆ ಚುಚ್ಚುಮದ್ದು, ಹೈಡ್ರೋಕ್ಲೋರಿಕ್ವಿನ್ ಟಾಪ್ ಸರ್ಚ್ ಪದಗಳು.

Coronavirus updates
Coronavirus latest news
Symptoms of coronavirus
Coronavirus treatment
Social distancing
Lockdown in India
Lockdown extension
Coronavirus Worldometer
Vaccine for coronavirus
Hydroxychloroquine for coronavirus

ವರ್ಕ್ ಫ್ರಂ ಹೋಮ್ ಉಪಯುಕ್ತ ಸಾಧನಗಳು

ವರ್ಕ್ ಫ್ರಂ ಹೋಮ್ ಉಪಯುಕ್ತ ಸಾಧನಗಳು

ಶೇ 90ರಷ್ಟು ಐಟಿ-ಬಿಟಿ ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಆಯ್ದುಕೊಂಡು ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಸಂಸ್ಥೆಯ ಸುರಕ್ಷಿತ ನಿಯಮಗಳ ಅನುಸಾರ ಬಳಸಿದ ಉಪಯುಕ್ತ ಸಾಧನಗಳ ಪಟ್ಟಿ ಇಲ್ಲಿದೆ

ಜೂಮ್
ಸ್ಕೈಪ್
ಗೂಗಲ್ ಹ್ಯಾಂಗ್ ಔಟ್ಸ್
ಮೈಕ್ರೋಸಾಫ್ಟ್ ಟೀಮ್ಸ್
ಗೋಟು ಮೀಟಿಂಗ್

ಹೆಚ್ಚು ಬಳಕೆಯಾದ ಒಟಿಟಿ ಸೇವೆಗಳು

ಹೆಚ್ಚು ಬಳಕೆಯಾದ ಒಟಿಟಿ ಸೇವೆಗಳು

ಹೊಸ ಶೂಟಿಂಗ್ ಸಾಧ್ಯವಿಲ್ಲದೆ ದಿನ ನಿತ್ಯದ ಸೀರಿಯಲ್ ಗಳು ಬಂದ್ ಆಗಿರುವುದರಿಂದ ಚಾನೆಲ್ ಗಳ ಟಿಆರ್ ಪಿ ತಗ್ಗಿವೆ. ಈ ಸಂದರ್ಭದಲ್ಲಿ ಹಳೆ ಸೀರಿಯಲ್ ಗಳು ಟ್ರೆಂಡ್ ಆಗುತ್ತಿದ್ದರೆ, ಇನ್ನೊಂದೆಡೆ ಲಾಭ ಮಾಡುತ್ತಿರುವುದು ಒಟಿಟಿ ಇಂಡಸ್ಟ್ರೀ. ಒಟಿಟಿ ಚಾನೆಲ್ ಕುರಿತ ಹುಡುಕಾಟ ಶೇ 59ರಷ್ಟು ಏರಿಕೆಯಾಗಿದೆ. ಟಾಪ್ 10 ಒಟಿಟಿ ಪ್ಲಾಟ್ ಫಾರ್ಮ್ ಗಳು

ಅಮೇಜಾನ್ ಪ್ರೈಮ್ ವಿಡಿಯೋ
ನೆಟ್ ಫ್ಲಿಕ್ಸ್
ಹಾಟ್ ಸ್ಟಾರ್
ವೂಟ್
ಜೀ5
ಸೋನಿಲಿವ್
ಹೊಯ್ ಚಾಯ್
ಅಲ್ಟ್ ಬಾಲಾಜಿ
ವಿಐಯು
ಎರೋಸ್ ನೌ

ಟಾಪ್ 5 ಸೆಲೆಬ್ರಿಟಿಗಳು

ಟಾಪ್ 5 ಸೆಲೆಬ್ರಿಟಿಗಳು

ಟಾಪ್ 5 ಸೆಲೆಬ್ರಿಟಿಗಳು
ಕೊರೊನಾ ಪಾಸಿಟಿವ್ ಆಗಿದ್ದ ಬೇಬಿ ಡಾಲ್ ಖ್ಯಾತಿಯ ಗಾಯಕಿ ಕನಿಕಾ ಕಪೂರ್ ಬಗ್ಗೆ ಜನರು ಹೆಚ್ಚು ಹುಡುಕಾಟ ನಡೆಸಿದ್ದಾರೆ. ಇದರ ಪರಿಣಾಮ, ನಟಿ ಪ್ರಿಯಾಂಕಾ ಛೋಪ್ರಾರನ್ನೇ ಕನಿಕಾ ಹಿಂದಿಕ್ಕಿದ್ದಾರೆ.

ಕನಿಕಾ ಕಪೂರ್
ಪ್ರಿಯಾಂಕಾ ಛೋಪ್ರಾ
ದಿಶಾ ಪಟಾನಿ
ದೀಪಿಕಾ ಪಡುಕೋಣೆ
ಸಾರಾ ಅಲಿ ಖಾನ್

ನಟರು
ಅಮಿತಾಬ್ ಬಚ್ಚನ್
ರಜನಿಕಾಂತ್
ಸಲ್ಮಾನ್ ಖಾನ್
ಅಕ್ಷಯ್ ಕುಮಾರ್
ಟೈಗರ್ ಶ್ರಾಫ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+