ಕೊರೋನಾ ವೈರಸ್‌ಗೆ 106 ಬಲಿ, ಹೈದರಾಬಾದ್‌ನಲ್ಲಿ ನಾಲ್ಕು ಶಂಕಿತ ಪ್ರಕರಣ
ಚೀನಾ ಮೂಲಕ ವಿಶ್ವವ್ಯಾಪಿಯಾಗುತ್ತಿರುವ ಅತ್ಯಂತ ಅಪಾಯಕಾರಿ ಕೊರೋನಾ ವೈರಸ್‌ನಿಂದಾಗಿ ಚೀನಾ ಒಂದರಲ್ಲೇ ಈ ವರೆಗೆ 106 ಮಂದಿ ಸಾವನ್ನಪ್ಪಿದ್ದಾರೆ.
ಮಾರಣಾಂತಿಕ ಕೊರೋನಾ ವೈರಸ್ ಚೀನಾ ತುಂಬೆಂಲ್ಲ ಹರಡಿದ್ದು, ವೈರಸ್ ಅನ್ನು ತಹಬದಿಗೆ ತರಲು ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಚೀನಾದಲ್ಲಿ 2700 ಮಂದಿ ಕೊರೋನಾ ವೈರಸ್‌ನಿಂದ ಭಾದಿತರಾಗಿದ್ದಾರೆ. ಹಲವು ನಗರಗಳನ್ನು 'ಲಾಕ್ ಡೌನ್' ಮಾಡಲಾಗಿದ್ದು, ಯಾರೂ ಒಂದು ನಗರದಿಂದ ಮತ್ತೊಂದು ನಗರಕ್ಕೆ ಹೋಗದಂತೆ ಸರ್ಕಾರ ತಡೆ ಹೇರಿದೆ. ವೈರಸ್ ಹೆಚ್ಚು ಹರಡಿದರಲೆಂದು ಈ ಕ್ರಮ.

ಕೊರೋನಾ ವೈರಸ್ ಭಾದಿತ ಪ್ರದೇಶ ಚೀನಾದ ಉಹಾನ್‌ನಲ್ಲಿ ಭಾರತದ ಸುಮಾರು 250 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಅವರನ್ನು ಭಾರತಕ್ಕೆ ಮರಳಿ ಕರೆತರುವ ಬಗ್ಗೆ ಚೀನಾದ ಅಧಿಕಾರಗಳೊಂದಿಗೆ ವಿದೇಶಾಂಗ ಇಲಾಖೆ ಅಧಿಕಾರಿಗಳು ನಿನ್ನೆ ಮಾತುಕತೆ ನಡೆಸಿದ್ದಾರೆ.
ನೆರೆಯ ಹೈದರಾಬಾದ್‌ನಲ್ಲಿ ನಾಲ್ಕು ಮಂದಿಗೆ ಕೊರೋನಾ ವೈರಸ್ ದಾಳಿ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದ್ದು, ಶಂಕಿತ ರೋಗಿಗಳನ್ನು ತೀವ್ರ ನಿಗಾಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಈ ನಾಲ್ವರೂ ಸಹ ಚೀನಾದಿಂದ ವಾಪಸ್ಸಾದವರಾಗಿದ್ದಾರೆ. ನಾಲ್ವರನ್ನೂ ವಿಶೇಷ ನಿಗಾಘಟಕದಲ್ಲಿಟ್ಟು ತಪಾಸಣೆ ನಡೆಸಲಾಗುತ್ತಿದೆ. ಈ ನಾಲ್ವರೂ ಸಹಹ ಪ್ರವಾಸಿಗರಾಗಿದ್ದರು, ಚೀನಾಕ್ಕೆ ಇತ್ತೀಚೆಗಷ್ಟೆ ಭೇಟಿ ನೀಡಿದ್ದರು.












Click it and Unblock the Notifications