ಕ್ರೂರ ಕೊರೊನಾ ವೈರಸ್ ನಿಂದ ಭಾರತದಲ್ಲಿ ಮೂರನೇ ಬಲಿ: ಹೆಚ್ಚಿದ ಭೀತಿ!

ಮಾರ್ಚ್ 17: ವಿಶ್ವದಾದ್ಯಂತ ಬೆಚ್ಚಿ ಬೀಳಿಸಿರುವ ಮಾರಣಾಂತಿಕ ಕೊರೊನಾ ವೈರಸ್ ಭಾರತದಲ್ಲಿ ಮೂರನೇ ಬಲಿ ಪಡೆದಿದೆ. ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ 64 ವರ್ಷದ ವ್ಯಕ್ತಿ ಮಹಾರಾಷ್ಟ್ರದಲ್ಲಿ ಮೃತಪಟ್ಟಿದ್ದಾರೆ.

Recommended Video

      No need to panic about Corona says this MBBS student | Oneindia kannada

      ಕೊರೊನಾವೈರಸ್ ಹರಡದಂತೆ ಎಲ್ಲೆಡೆ ಸ್ವಚ್ಛತೆ ಅಭಿಯಾನ

      ದುಬೈನಿಂದ ಭಾರತಕ್ಕೆ ವಾಪಸ್ ಆಗಿದ್ದ 64 ವರ್ಷದ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಮಹಾರಾಷ್ಟ್ರದ ಕಸ್ತೂರಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಇಂದು (ಮಂಗಳವಾರ) ಕೊನೆಯುಸಿರೆಳೆದಿದ್ದಾರೆ.

      ಹಾಗ್ನೋಡಿದ್ರೆ, ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಹೆಚ್ಚು ವರದಿ ಆಗಿದೆ. ಇಂದು ಕೊರೊನಾ ವೈರಸ್ ನಿಂದಾಗಿ ಮಹಾರಾಷ್ಟ್ರದಲ್ಲಿ ಮೊದಲ ಸಾವು ಸಂಭವಿಸಿದೆ.

      ಭಾರತದಲ್ಲಿ ಮೂರು ಸಾವು

      ಭಾರತದಲ್ಲಿ ಮೂರು ಸಾವು

      ಡೆಡ್ಲಿ ಕೊರೊನಾ ವೈರಸ್ ಸೋಂಕಿನಿಂದಾಗಿ ಭಾರತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 69 ವರ್ಷದ ಮಹಿಳೆ, ಕರ್ನಾಟಕದ ಕಲಬುರಗಿಯಲ್ಲಿ 76 ವರ್ಷದ ವ್ಯಕ್ತಿ ಮತ್ತು ಮಹಾರಾಷ್ಟ್ರದಲ್ಲಿ 64 ವರ್ಷದ ವ್ಯಕ್ತಿ ಮಾರಣಾಂತಿಕ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ.

      129 ಪ್ರಕರಣಗಳು

      129 ಪ್ರಕರಣಗಳು

      ಭಾರತದಲ್ಲಿ ಇಲ್ಲಿಯವರೆಗೂ ಒಟ್ಟು 129 ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಈಗಾಗಲೇ 13 ಮಂದಿ ಮಾರಕ ಕೊರೊನಾ ವೈರಸ್ ವಿರುದ್ಧ ಹೋರಾಡಿ ಸಾವನ್ನೇ ಗೆದ್ದು ಬಂದಿದ್ದಾರೆ.

      ಕರ್ನಾಟಕದಲ್ಲಿ 10 ಪ್ರಕರಣ

      ಕರ್ನಾಟಕದಲ್ಲಿ 10 ಪ್ರಕರಣ

      ಕರ್ನಾಟಕದಲ್ಲಿ ಇಲ್ಲಿಯವರೆಗೂ ಒಟ್ಟು 10 ಮಂದಿಗೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ವರದಿ ಆಗಿವೆ. ಇಂದು ಬೆಳಗ್ಗೆಯಷ್ಟೇ ಕರ್ನಾಟಕದಲ್ಲಿ 2 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾದವು. ಯು.ಕೆದಿಂದ ವಾಪಸ್ ಆದ 20 ವರ್ಷದ ಮಹಿಳೆ ಮತ್ತು ಕೊರೊನಾ ವೈರಸ್ ಸೋಂಕಿನಿಂದ ಕಲಬುರಗಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಜೊತೆಗೆ ಸಂಪರ್ಕದಲ್ಲಿದ್ದ 60 ವರ್ಷ ವಯಸ್ಸಿನ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢ ಪಟ್ಟಿದೆ.

      ಏಳು ಸಾವಿರಕ್ಕೂ ಅಧಿಕ ಸಾವು

      ಏಳು ಸಾವಿರಕ್ಕೂ ಅಧಿಕ ಸಾವು

      ಇಲ್ಲಿಯವರೆಗೂ ವಿಶ್ವದಾದ್ಯಂತ ಒಟ್ಟು 182,723 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅದರಲ್ಲಿ ಈಗಾಗಲೇ 7174 ಮಂದಿ ಸಾವನ್ನಪ್ಪಿದ್ದಾರೆ. 79,883 ಮಂದಿ ಸಾವಿನ ದವಡೆಯಿಂದ ಬಚಾವ್ ಆಗಿದ್ದಾರೆ. 6163 ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+