ಬೇಡಿಕೆ ಹೆಚ್ಚಳ: ಹೈಡ್ರೋಕ್ಸಿಕ್ಲೋರೊಕ್ವಿನ್ ಇನ್ನು 13 ದೇಶಗಳಿಗೆ ರಫ್ತು
ನವದೆಹಲಿ, ಏಪ್ರಿಲ್ 13: ಮಲೇರಿಯಾ ಚಿಕಿತ್ಸೆಗೆ ನೀಡುವ ಹೈಡ್ರೋಕ್ಸಿಕ್ಲೋರೊಕ್ವಿನ್ ಔಷಧಿಗೆ ಈಗ ಎಲ್ಲಿಲ್ಲದ ಬೇಡಿಕೆ ಉಂಟಾಗಿದೆ. ಈ ಔಷಧಿ ತಯಾರಿಗೆ ಚೀನಾ ಮೂಲವಸ್ತು ಒದಗಿಸಿದರೆ, ಇದರ ಹೆಚ್ಚು ಉತ್ಪಾದನೆ ಭಾರತದಲ್ಲಾಗುತ್ತದೆ, ಈ ಔಷಧಿ ಬಳಕೆ ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ಹೆಚ್ಚಾಗಿದೆ.
Recommended Video
ಮಲೇರಿಯಾ ರೋಗಿಗಳಿಗೆ ಪ್ಲೇಕ್ವೆನಿಲ್ ಹೆಸರಿನಲ್ಲಿ ನೀಡಲಾಗುವ ಹೈಡ್ರೋಕ್ಸಿಕ್ಲೋರೊಕ್ವೆನ್(HCQ) ಎಂಬ Anti-Malaria ಔಷಧದ ಬಗ್ಗೆ ಟ್ರಂಪ್ ಅವರು ಮಾರ್ಚ್ ತಿಂಗಳಲ್ಲಿ ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು. HCQ ಹಾಗೂ ಅಜಿಥ್ರೋಮೈಸಿನ್ ಬಳಕೆಯಿಂದ ವೈದ್ಯಕೀಯ ಲೋಕದಲ್ಲಿ ಭಾರಿ ಬದಲಾವಣೆ ಸಾಧ್ಯ ಎಂದಿದ್ದರು. ಆದರೆ, ಇದಾದ ಬಳಿಕ ಭಾರತ ಈ ಡ್ರಗ್ ರಫ್ತು ಮಾಡುವುದನ್ನು ಬಂದ್ ಮಾಡಿತ್ತು.
ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ತೆಗೆದುಕೊಳ್ಳುತ್ತಿರುವ ಕ್ರಮ ಶ್ಲಾಘಿಸಿದ ಟ್ರಂಪ್ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ Hydroxychloroquine (HCQ) ಔಷಧವನ್ನು ರಫ್ತು ಮಾಡುವಂತೆ ಆಗ್ರಹಪೂರ್ವಕ ಮನವಿ ಮಾಡಿದ್ದರು. ಭಾರತ ಕೂಡಾ ಇದಕ್ಕೆ ಒಪ್ಪಿದೆ. ಹಂತ ಹಂತವಾಗಿ ರಫ್ತು ಮಾಡಿದ್ದು, ಅಮೆರಿಕವನ್ನು ತಲುಪಿದೆ. ಸುಮಾರು 35.82 ಲಕ್ಷ ಎಚ್ ಸಿಕ್ಯೂ ಗುಳಿಗೆಗಳನ್ನು ಯುಎಸ್ ಗೆ ರಫ್ತು ಮಾಡಲಾಗಿದೆ. ಇದಲ್ಲದೆ ಡ್ರಗ್ ತಯಾರಿಸಲು ಬೇಕಾದ ಎಪಿಐ ಅಥವಾ ಮೂಲ ಕಚ್ಚಾವಸ್ತುವನ್ನು 9 ಮೆಟ್ರಿಕ್ ಟನ್ ಪ್ರಮಾಣದಲ್ಲಿ ರಫ್ತು ಮಾಡಲಾಗಿದೆ.

ಈಗ ಇನ್ನು 13 ದೇಶಗಳಿಂದ ಎಚ್ ಸಿಕ್ಯೂಗಾಗಿ ಬೇಡಿಕೆ ಬಂದಿದೆ. ದೇಶದಲ್ಲಿ ಬಳಕೆ, ಬೇಡಿಕೆಗೆ ಅನುಗುಣವಾಗಿ ರಫ್ತು ಪೂರೈಕೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ವಕ್ತಾರ ಕೆಎಸ್ ಧಾಟ್ವಾಲಿಯಾ ಹೇಳಿದ್ದಾರೆ.
ಪ್ಲೇಕ್ವೆನಿಲ್ ಬ್ರ್ಯಾಂಡ್ ಹೆಸರಿನಲ್ಲಿ ನೀಡಲಾಗುವ ಹೈಡ್ರೋಕ್ಸಿಕ್ಲೋರೊಕ್ವೆನ್(HCQ) ಮಲೇರಿಯಾ ಅಲ್ಲದೆ ರುಮಾಟಾಯಿಡ್ ಆರ್ಥೈಟಿಸ್ ಗೂ ಬಳಸಲಾಗುತ್ತದೆ. ಹೃದಯ, ಶ್ವಾಸಕೋಶ, ಜ್ವರ, ಮೈಕೈ ನೋವು, ಸ್ನಾಯು ಸೆಳೆತ ಎಲ್ಲಕ್ಕೂ ಈ ಔಷಧಿ ಬಳಸಬಹುದು ಎಂದು ಜಾನ್ಸ್ ಹಾಪ್ಕಿನ್ ವಿಶ್ವ ವಿದ್ಯಾಲಯ ವರದಿ ನೀಡಿದೆ. ಆದರೆ, ಕೋವಿಡ್19ಗೆ ಈ ಎರಡು ಲಸಿಕೆಯ ಜೋಡಿಗೆ ರಾಮಬಾಣ ಎಂಬುದು ಇನ್ನೂ ದೃಢಪಟ್ಟಿಲ್ಲ.












Click it and Unblock the Notifications