• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಸೋಂಕು; ವಿಶ್ವದಲ್ಲೇ ಹೆಚ್ಚಿನ ಚೇತರಿಕೆ ಪ್ರಮಾಣ ದಾಖಲಿಸಿದ ಭಾರತ

|

ನವದೆಹಲಿ, ಜನವರಿ 07: ಭಾರತದಲ್ಲಿ ಕೊರೊನಾ ವೈರಸ್ ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದ್ದು, ಇಡೀ ವಿಶ್ವದಲ್ಲೇ ಭಾರತ, ಅತ್ಯಧಿಕ ಚೇತರಿಕೆ ಪ್ರಮಾಣವನ್ನು ದಾಖಲಿಸಿದೆ.

ಗುರುವಾರ ಕೊರೊನಾದಿಂದ ಚೇತರಿಕೆಯಾದವರ ಸಂಖ್ಯೆ ಒಂದು ಕೋಟಿ ದಾಟಿದೆ. ಸದ್ಯ ಇರುವ ಸಕ್ರಿಯ ಪ್ರಕರಣಗಳಿಗಿಂತ ಚೇತರಿಕೆ ಪ್ರಮಾಣವು 44ಪಟ್ಟು ಹೆಚ್ಚಾಗಿದೆ ಎಂಬುದು ಸಮಾಧಾನಕರ ಸಂಗತಿ. ದೇಶದ ಐದು ರಾಜ್ಯಗಳ ಒಟ್ಟು ಚೇತರಿಕೆ ಪ್ರಮಾಣ ಶೇ.51ರಷ್ಟಾಗಿದೆ. ಮುಂದೆ ಓದಿ...

 ಕೋಟಿ ದಾಟಿದ ಚೇತರಿಕೆ ಪ್ರಮಾಣ

ಕೋಟಿ ದಾಟಿದ ಚೇತರಿಕೆ ಪ್ರಮಾಣ

ಗುರುವಾರ ದೇಶದಲ್ಲಿ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ ಒಂದು ಕೋಟಿ ಮೀರಿದ್ದು, 1,00,16,859 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಡೀ ವಿಶ್ವದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಭಾರತೀಯರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ 19,587 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ.96.36ಕ್ಕೆ ತಲುಪಿದೆ. ಸಕ್ರಿಯ ಪ್ರಕರಣ ಮತ್ತು ಚೇತರಿಕೆ ನಡುವಿನ ಅಂತರ ನಿರಂತರ ಹೆಚ್ಚಾಗುತ್ತಿದೆ. ಸದ್ಯಕ್ಕೆ 97,88,776 ಸಕ್ರಿಯ ಪ್ರಕರಣ ಇದೆ.

ವೈರಸ್ ವಿರುದ್ಧ ಲಸಿಕೆಗಳು 100% ರಕ್ಷಣೆ ಕೊಡುವುದಿಲ್ಲ; ತಜ್ಞರ ಎಚ್ಚರಿಕೆ

 ಐದು ರಾಜ್ಯಗಳಲ್ಲಿ ಶೇ.51ರಷ್ಟು ಚೇತರಿಕೆ ಪ್ರಕರಣ

ಐದು ರಾಜ್ಯಗಳಲ್ಲಿ ಶೇ.51ರಷ್ಟು ಚೇತರಿಕೆ ಪ್ರಕರಣ

ದೇಶದ ಐದು ರಾಜ್ಯಗಳಲ್ಲಿ ಚೇತರಿಕೆ ಪ್ರಮಾಣವು ಶೇ.51ರಷ್ಟಿದೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಹೆಚ್ಚಿನ ಜನರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಭಾರತದ ಚೇತರಿಕೆ ದರ ವಿಶ್ವದಲ್ಲೇ ಅತ್ಯಧಿಕವಾಗಿದ್ದುದೆ. ಪರೀಕ್ಷಾ ಮೂಲಸೌಕರ್ಯಗಳನ್ನೂ ವಿಸ್ತರಿಸಿದ್ದು, ಭಾರತದಲ್ಲಿ ಸೋಂಕಿನ ಪ್ರಕರಣಗಳ ಇಳಿಕೆಗೆ ಈ ಅಂಶವೂ ಕಾರಣ ಎನ್ನಲಾಗುತ್ತಿದೆ. ದೈನಂದಿನ ಸೋಂಕಿನ ದರ ಶೇ.3ಕ್ಕಿಂತ ಕಡಿಮೆ ಇರುವುದಾಗಿ ತಿಳೀದುಬಂದಿದೆ.

 ಕೇರಳದಲ್ಲಿ ಹೆಚ್ಚು ಚೇತರಿಕೆ ಪ್ರಮಾಣ

ಕೇರಳದಲ್ಲಿ ಹೆಚ್ಚು ಚೇತರಿಕೆ ಪ್ರಮಾಣ

ಕೇರಳದಲ್ಲಿ 5,110 ಹೊಸ ಚೇತರಿಕೆ ಪ್ರಕರಣಗಳಿದ್ದು, ದೈನಂದಿನ ಚೇತರಿಕೆ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರ 2,570 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಹೊಸದಾಗಿ ಸೋಂಕು ದೃಢಪಟ್ಟ ಶೇ. 83.88 ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಂದಿವೆ.

ಕೊರೊನಾ ಲಸಿಕೆ ಪಡೆಯಲು ಶೇ.69ರಷ್ಟು ಭಾರತೀಯರು ಹಿಂದೇಟು, ಕಾರಣವೇನು?

 ಮಹಾರಾಷ್ಟ್ರದಲ್ಲಿ ಗರಿಷ್ಠ ಸಾವಿನ ಪ್ರಮಾಣ

ಮಹಾರಾಷ್ಟ್ರದಲ್ಲಿ ಗರಿಷ್ಠ ಸಾವಿನ ಪ್ರಮಾಣ

ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 6,394 ಪ್ರಕರಣಗಳು ವರದಿಯಾಗಿದ್ದರೆ, ಮಹಾರಾಷ್ಟ್ರದಲ್ಲಿ 4,382 ಹೊಸ ಪ್ರಕರಣಗಳು ದಾಖಲಾಗಿವೆ. ಛತ್ತೀಸ್‌ ಗಡದಲ್ಲಿ ನಿನ್ನೆ 1,050 ಹೊಸ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ 222 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಶೇ.67.57 ಆರು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿವೆ. ಮಹಾರಾಷ್ಟ್ರದಲ್ಲಿ ಗರಿಷ್ಠ ದೈನಂದಿನ ಸಾವಿನ ಸಂಖ್ಯೆ (66 ಸಾವು) ವರದಿಯಾಗಿದೆ. ಕೇರಳದಲ್ಲಿ 25 ಹಾಗೂ ಪಶ್ಚಿಮ ಬಂಗಾಳದಲ್ಲಿ 22 ಸಾವಿನ ಪ್ರಕರಣಗಳು ದಾಖಲಾಗಿವೆ.

English summary
Corona recovery rate has increased and crossed one crore number in India on thursday. Five states have recorded 51% recovery rate
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X