ಲೈಂಗಿಕ ಕಿರುಕುಳ ಆರೋಪ ಬಾಬಾ ಪರಮಾನಂದ ಬಂಧನ

Posted By:
Subscribe to Oneindia Kannada

ನವದೆಹಲಿ, ಮೇ 24: ವಿವಾದಿತ 'ದೇವ ಮಾನವ' ಬಾಬಾ ಪರಮಾನಂದ ಅವರನ್ನು ಮಂಗಳವಾರ ಬಂಧಿಸಲಾಗಿದೆ. ಬಾಬಾ ಪರಮಾನಂದ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರೆಸಲಾಗಿದೆ.

ರಾಮ್ ಶಂಕರ್ ತಿವಾರಿ ಅಲಿಯಾಸ್ ಬಾಬಾ ಪರಮಾನಂದ್ ಅವರು ಮಹಿಳೆಯೊಬ್ಬರಿಗೆ ಮಗು ಕರುಣಿಸುವ ವಾಗ್ದಾನ ನೀಡಿ ಮಂಕುಬೂದಿ ಹಾಕಿದ್ದಾರೆ. ಬರಾಬಂಕಿಯಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. [ವಿವಾದದಲ್ಲೇ ಮುಳುಗೆದ್ದ ಟಾಪ್ 10 'ದೇವಮಾನವರು']

Controversial 'godman' Baba Parmanand arrested for sexually exploiting women

ಈ ಬಗ್ಗೆ ವರದಿ ಮಾಡಿರುವ ಜೀ ನ್ಯೂಸ್, ಬರಾಬಂಕಿ ಪೊಲೀಸರು ಬಾಬಾ ಪರಮಾನಂದ ಅವರ ಆಶ್ರಮದ ಮೇಲೆ ದಾಳಿ ನಡೆಸಿದ್ದಾರೆ. ಆಶ್ರಮದಲ್ಲಿ ಹಲವಾರು ಸಿಡಿ, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಲವಾರು ಮಹಿಳೆಯರ ಅಶ್ಲೀಲ ವಿಡಿಯೋಗಳು, ಅಶ್ಲೀಲ ಸಾಹಿತ್ಯಗಳು, ಪೋರ್ನ್ ಸಿನಿಮಾಗಳ ರಾಶಿ ಸಿಕ್ಕಿದೆ.[ದೇವಮಾನವ ಸಾರಥಿ ಬಾಬಾ ಆಸ್ತಿ ಮೌಲ್ಯ ಎಷ್ಟು?]

ಪೊಲೀಸ್ ದಾಳಿಯ ಬಳಿಕ ನಾಪತ್ತೆಯಾಗಿದ್ದ ಬಾಬಾ ಪರಮಾನಂದನನ್ನು ಪೊಲೀಸರು ಮಧ್ಯಪ್ರದೇಶದ ಸತ್ನಾದಲ್ಲಿ ಮಂಗಳವಾರ ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ಈ ಹಿಂದೆ ಕೂಡಾ ಅನೇಕ ಮಹಿಳೆಯರು, ಬಾಬಾ ವಿರುದ್ಧ ದೂರು ನೀಡಿದ್ದರು. ಮಕ್ಕಳಿಲ್ಲದ ದಂಪತಿಗಳಿಗೆ ಮಗು ಕರುಣಿಸುವ ವಿಶೇಷ ಶಕ್ತಿ ಎಂದು ಬಾಬಾ ಎಲ್ಲೆಡೆ ಪ್ರಚಾರ ಪಡೆದಿದ್ದರು. ಬಾಬಾ ನಂಬಿ ಬಂದ ಭಕ್ತೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿತ್ತು. ಬಾಬಾ ವಿರುದ್ಧ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ram Shankar Tiwari alias Baba Parmanand who is based in Barabanki exploited women under the pretense of granting them childbirth.
Please Wait while comments are loading...