ನೀವು ಬೇಕಾದರೆ ಮದ್ಯ ಸೇವಿಸಿ, ಗುಟ್ಕಾ ತಿನ್ನಿ: ಬಿಜೆಪಿ ಸಂಸದನ ವಿಚಿತ್ರ ಹೇಳಿಕೆ

ಭೋಪಾಲ್, ನವೆಂಬರ್‌ 8: ರೇವಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಜನಾರ್ದನ ಮಿಶ್ರಾ ಮಧ್ಯಪ್ರದೇಶದ ರೇವಾದಲ್ಲಿ ನೀರು ಸಂರಕ್ಷಣೆ ಕುರಿತು ವಿಚಿತ್ರವಾದ ಹೇಳಿಕೆ ನೀಡಿದ್ದಾರೆ.

ಅವರು ಹೇಳಿಕೆ ನೀಡಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

'ಭೂಮಿ ನೀರಿಲ್ಲದೇ ಒಣಗಿ ಹೋಗುತ್ತಿದೆ. ನಾವೀಗ ನೆಲವನ್ನು ಉಳಿಸಬೇಕಿದೆ. ನೀವು ಬೇಕಾದರೆ, ಗುಟ್ಕಾ ತಿನ್ನಿ, ಮದ್ಯ ಸೇವಿಸಿ, ಸಲ್ಯೂಷನ್‌ ವಾಸನೆ ತೆಗೆದುಕೊಳ್ಳಿ, ಅಯೋಡಿಕ್ಸ್‌ ತಿನ್ನಿ. ಆದರೆ, ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ' ಎಂದು ಜಲ ಸಂರಕ್ಷಣಾ ಕಾರ್ಯಾಗಾರದಲ್ಲಿ ಮಿಶ್ರಾ ಹೇಳಿದ್ದಾರೆ.

ಭಾನುವಾರ ರೇವಾದ ಕೃಷ್ಣರಾಜ್ ಕಪೂರ್ ಸಭಾಂಗಣದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು.

Consume Liquor Eat Gutkha BJP MP Tips On Water Conservation

ವೈರಲ್ ಆಗಿರುವ ವಿಡಿಯೊ ಪ್ರಕಾರ, 'ಯಾವುದೇ ಸರ್ಕಾರವು ನೀರಿನ ತೆರಿಗೆಯನ್ನು ಮನ್ನಾ ಮಾಡಲು ಘೋಷಿಸಿದರೆ ನೀವು ಅದನ್ನು ಒಪ್ಪಿಕೊಳ್ಳಬೇಡಿ' ಎಂದು ಹೇಳಿದ್ದಾರೆ.

'ನಾವು ನೀರಿನ ತೆರಿಗೆಯನ್ನು ಪಾವತಿಸುತ್ತೇವೆ. ನೀವು ವಿದ್ಯುತ್ ಬಿಲ್ ಸೇರಿದಂತೆ ಉಳಿದ ತೆರಿಗೆಗಳನ್ನು ಮನ್ನಾ ಮಾಡಿ ಎಂದು ಸರ್ಕಾರಕ್ಕೆ ತಿಳಿಸಿ' ಎಂಬುದಾಗಿ ಅವರು ಜನರಿಗೆ ತಿಳಿಸಿದ್ದಾರೆ.

ಮಿಶ್ರಾ ಅವರು ಬಿಜೆಪಿಯ ಹಿರಿಯ ಸಂಸದರು. ಎರಡು ಬಾರಿ ರೇವಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿದೆ. ಅವರು ಈ ರೀತಿಯ ನಡೆಗಳನ್ನು ಪ್ರದರ್ಶಿಸುವುದು ಮೊದಲೇನಲ್ಲ. ಈ ಹಿಂದೆ ಶಾಲೆಯ ಶೌಚಾಲಯವನ್ನು ಬರಿಗೈಯಿಂದ ತೊಳೆದದ್ದು ಬೆಳಕಿಗೆ ಬಂದಿತ್ತು. ಶೌಚಾಲಯ ತೊಳೆಯುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು. ಇದು ನೆಟ್ಟಿಗರಿಂದ ಟ್ರೋಲ್‌ ಸಹ ಆಗಿತ್ತು.

Consume Liquor Eat Gutkha BJP MP Tips On Water Conservation

ಮಧ್ಯಪ್ರದೇಶದಲ್ಲಿ ಕುಡಿಯುವ ನೀರಿನ ಕೊರತೆ ಮೊದಲಿನಿಂದಲೂ ಇದೆ. ಮಧ್ಯಪ್ರದೇಶ ಸರ್ಕಾರದ 'ನಲ್‌ಜಲ್‌' ಯೋಜನೆಯು ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಹಳ್ಳಿಗಳಲ್ಲಿ ಮಹಿಳೆಯರು ನೀರಿಗಾಗಿ ಮೈಲಿಗಟ್ಟಲೇ ನಡೆಯುವ ಪರಿಸ್ಥಿತಿ ಇದೆ. ಯಾವುದೇ ಅಧಿಕಾರಿಗಳಾಗಲಿ, ಸ್ಥಳೀಯ ಆಡಳಿತವಾಗಲಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂಬುದು ಗ್ರಾಮಸ್ಥರ ವಾದವಾಗಿದೆ. ರಾಜ್ಯದ ಲಕ್ಷಾಂತರ ಜನರಿಗೆ ನಿರ್ಮಲವಾದ ಕುಡಿಯುವ ನೀರು ಸಿಗುತ್ತಿಲ್ಲವೆಂಬ ಆರೋಪಗಳೂ ಕೇಳಿಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+