ಟ್ವಿಟರ್ ನಲ್ಲಿ ಪ್ರಧಾನಿಯನ್ನು 'ಜುಮ್ಲಾ ಮೋದಿ'ಎಂದು ವ್ಯಂಗ್ಯವಾಡಿದ ಕಾಂಗ್ರೆಸ್
ಅಧಿಕಾರದಿಂದ ದೂರವಾದ ನಂತರ ಆಡಳಿತ ಪಕ್ಷವನ್ನು ಕಟುವಾಗಿ ಟೀಕಿಸುತ್ತಲೇ ಬರುತ್ತಿರುವ ಕಾಂಗ್ರೆಸ್ ಪಕ್ಷ, ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಟ್ವಿಟರ್ ನಲ್ಲಿ ಹೊಸ ರೀತಿಯಲ್ಲಿ ಅಣಕವಾಡಿದೆ.
ಟ್ವಿಟರ್ ನಲ್ಲಿ 594 ಸಾವಿರಕ್ಕೂ ಹೆಚ್ಚು ಹಿಂಬಾಲಕರು ಇರುವ ಕಾಂಗ್ರೆಸ್ಸಿನ ಅಧಿಕೃತ @INCIndia ಅಕೌಂಟ್ ನಿಂದ ಟ್ವೀಟ್ ಮಾಡಲಾಗಿರುವ ಈ ಸಂದೇಶದಲ್ಲಿ, ಮೋದಿ ಸರಕಾರದ ಭ್ರಷ್ಟಾಚಾರದ ವಿಚಾರವನ್ನು 'ಸಿನಿಮೀಯ' ಶೈಲಿಯಲ್ಲಿ ಕಾಂಗ್ರೆಸ್ ತಮಾಷೆಯಾಡಿದೆ.
ದೆಹಲಿ ಕ್ರಿಕೆಟ್ ಮಂಡಳಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನೇತೃತದ ವಿರೋಧ ಪಕ್ಷಗಳು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ರಾಜೀನಾಮೆಗೆ ಆಗ್ರಹಿಸುತ್ತಿರುವ ಜೊತೆಗೆ, ಕಾಂಗ್ರೆಸ್ ಸಾಮಾಜಿಕ ತಾಣದಲ್ಲಿ ಮೋದಿಯನ್ನು 'ಜುಮ್ಲಾ ಮೋದಿ' ಎಂದು ವ್ಯಂಗ್ಯವಾಡಿದೆ. (ಮೋದಿ ಕನಸಿನ ಬೇಟಿ ಬಚಾವೋ ಯೋಜನೆಗೆ ವಿಜಯಪುರ)
ಜೇಟ್ಲಿ ರಾಜೀನಾಮೆಗೆ ಪಟ್ಟು ಹಿಡಿದಿರುವ ಕಾಂಗ್ರೆಸ್, ಅಡ್ವಾಣಿ ಹಿಂದೊಮ್ಮೆ ತನ್ನ ಮೇಲೆ ಬಂದ ಭ್ರಷ್ಟಾಚಾರದ ಆರೋಪ ಬಂದ ಕೂಡಲೇ ರಾಜೀನಾಮೆ ನೀಡಿದ್ದನ್ನು ಉಲ್ಲೇಖಿಸಿ ಮೋದಿ ವಿರುದ್ದ ತಿರುಗಿಬಿದ್ದಿದೆ.
ನಾವು ಅಧಿಕಾರದಲ್ಲಿದ್ದಾಗ ನಮ್ಮ ಸರಕಾರದ ಸಚಿವರ ರಾಜೀನಾಮೆ ಕೇಳುತ್ತಿದ್ದ ಬಿಜೆಪಿಯವರು ಜೇಟ್ಲಿ ವಿಚಾರದಲ್ಲಿ ಸುಮ್ಮನಾಗಿರುವುದು ಯಾಕೆ ಎಂದು ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ, ಮೋದಿಯವರನ್ನು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಟ್ವೀಟ್ ಮಾಡಿರುವ ಪೋಸ್ಟರ್, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...
|
ಜುಮ್ಲಾ ಮೋದಿ
ಪೋಸ್ಟರ್ ನಲ್ಲಿ ಕಾಂಗ್ರೆಸ್ ಅಣಕವಾಡಿದ್ದು ಹೀಗೆ
ಎ ಫಿಲ್ಮ್ ಬೈ ಜುಮ್ಲಾ ಪ್ರೊಡಕ್ಷನ್, ತಾರಾಗಣದಲ್ಲಿ
ನರೇಂದ್ರ 'ಜುಮ್ಲಾ'ಮೋದಿ
ಶಿವರಾಜ್ 'ವ್ಯಾಪಂ' ಚೌಹಾಣ್
ಸುಷ್ಮಾ 'ಮೋದಿ ಗೇಟ್'ಸ್ವರಾಜ್
ಹೊಸ ಪರಿಚಯ: ಅರುಣ್ 'ಡಿಡಿಸಿಎ' ಜೇಟ್ಲಿ
|
ಬಿಜೆಪಿ ವಿರುದ್ದ ಕಾಂಗ್ರೆಸ್ ಸಾಲು ಸಾಲು ಟ್ವೀಟ್
ಜೇಟ್ಲಿ, ದೆಹಲಿ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದ ವೇಳೆ ಭ್ರಷ್ಟಾಚಾರ, ಬೊಗಸ್ ಕಂಪೆನಿ ಮುಂತಾದ ಅಕ್ರಮ ನಡೆದಿಲ್ಲ ಎನ್ನುವುದಕ್ಕೆ ನಿರಾಕರಣೆಯಿಲ್ಲ.

ಮೋದಿ ಸ್ಪಷ್ಟನೆ ನೀಡಲಿ
ಬಿಜೆಪಿಯ ಸಾಲು ಸಾಲು ಹಗರಣಗಳು ಬಹಿರಂಗವಾಗುತ್ತಿದ್ದರೂ ಪ್ರಧಾನಿ ಮೋದಿ ಮೌನವಹಿಸಿದ್ದಾರೆ. ಈ ಹಗರಣಗಳ ವಿಚಾರದಲ್ಲಿ ಮೋದಿ ತಮ್ಮ ಸರಕಾರದ ನಿಲುವನ್ನು ಸ್ಪಷ್ಟ ಪಡಿಸಬೇಕೆಂದು ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಆಗ್ರಹಿಸಿದ್ದಾರೆ.
|
ಬಿಜೆಪಿ ಸಿದ್ದಾಂತ ಪಾಲಿಸಲಿ
ಬಿಜೆಪಿ ತನ್ನ ಸಿದ್ದಾಂತವನ್ನು ಪಾಲಿಸಲಿ ಮತ್ತು ಅರುಣ್ ಜೇಟ್ಲಿ ರಾಜೀನಾಮೆ ನೀಡಲಿ.
|
ಕ್ರೀಡಾ ಸಂಸ್ಥೆ ಆರ್ಟಿಐ
ನಾವು ಆರ್ಟಿಐ ಮಸೂದೆ ಆಂಗೀಕರಿಸಲು ಹೊರಟಾಗ ಕ್ರೀಡಾ ಸಂಸ್ಥೆಗಳು ಆರ್ಟಿಐ ನಿಂದ ಹೊರತಾಗಿರ ಬೇಕೆಂದು ಹಠ ಹಿಡಿದಿದ್ದರು, ಇದರ ಮರ್ಮ ಏನೆಂದು ಈಗ ಅರ್ಥವಾಗುತ್ತಿದೆ.












Click it and Unblock the Notifications