ಅಂಬಾನಿ ಕಳಿಸಿದ ನೊಟೀಸ್ ಅನ್ನು ವಿಮಾನ ಮಾಡಿ ಹಾರಿಸಿದ ಕಾಂಗ್ರೆಸ್ ಸಂಸದ
ಚಂಡೀಘಡ್, ಆಗಸ್ಟ್ 22: ರಫೆಲ್ ಡೀಲ್ ಬಗ್ಗೆ ಸತತ ಆರೋಪ ಮಾಡುತ್ತಿದ್ದ ಪಂಜಾಂಬ್‌ನ ಕಾಂಗ್ರೆಸ್ ಮುಖಂಡ ಸುನಿಲ್ ಜಖಾರ್‌ಗೆ ಅನಿಲ್ ಅಂಬಾನಿ ಲೀಗಲ್ ನೊಟೀಲ್ ಕಳುಹಿಸಿದ್ದರು. ಆದರೆ ಅವರು ಅದನ್ನೇ ವಿಮಾನ ಮಾಡಿ ಹಾರಿಸಿದ್ದಾರೆ!
ಹೌದು, ನೊಟೀಸ್ ಹಾಳೆಯಲ್ಲೇ ಸಣ್ಣ ವಿಮಾನ ಮಾಡಿ ಅದನ್ನು ಹಾರಿಸುತ್ತಿರುವ ಚಿತ್ರವನ್ನು ಪಂಜಾಬ್ ಕಾಂಗ್ರೆಸ್‌ನ ಅಧ್ಯಕ್ಷರೂ ಆಗಿರುವ ಸುನಿಲ್ ಜಖಾರ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಇದು ಈಗ ಭಾರಿ ವೈರಲ್ ಆಗಿದೆ.
ಎಚ್‌ಎಎಲ್‌ಗೆ ನೀಡಲಾಗಿದ್ದ ರಫೇಲ್ ಯುದ್ಧ ವಿಮಾನ ನಿರ್ಮಾಣ ತಯಾರಿ ಗುತ್ತಿಗೆಯನ್ನು ರದ್ದು ಪಡಿಸಿ, ವಿಮಾನ ನಿರ್ಮಿಸಿ ಅನುಭವವೇ ಇಲ್ಲದ ಅನಿಲ್ ಅಂಬಾನಿ ಅವರಿಗೆ ನೀಡಿದ್ದ ಬಗ್ಗೆ ಕಾಂಗ್ರೆಸ್ ಮುಖಂಡ ಸುನಿಲ್ ಜಖಾರ್ ಅವರು ತೀವ್ರ ವಾಗ್ದಾಳಿ ನಡೆಸಿದ್ದರು ಅಲ್ಲದೆ ಅನಿಲ್ ಅಂಬಾನಿ ಹಾಗೂ ಅವರ ರಿಲಯನ್ಸ್ ಸಂಸ್ಥೆ ಬಗ್ಗೆ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು.
ಇದರಿಂದ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಸಂಸ್ಥೆಯು ಸುನಿಲ್ ಅವರಿಗೆ ಲೀಗಲ್ ನೊಟೀಸ್ ಕಳುಹಿಸಿತ್ತು. ಅದೇ ಹಾಳೆಯನ್ನು ಬಳಸಿ ವಿಮಾನ ನಿರ್ಮಿಸಿ ಸುನಿಲ್ ಅವರು ಹಾರಿಸಿದ್ದಾರೆ. ಆ ಮೂಲಕ ಅನಿಲ್ ಅವರ ನೊಟೀಸ್‌ಗೆ ಟಾಂಗ್ ನೀಡಿದ್ದಾರೆ.
| Array |
ವಿಮಾನ ಹಾರಿಸುತ್ತಿರುವ ಚಿತ್ರ ಟ್ವಿಟ್ಟರ್‌ನಲ್ಲಿ
ಪೇಪರ್ ವಿಮಾನ ಹಾರಿಸುತ್ತಿರುವ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿರುವ ಸುನಿಲ್ ಅವರು, ನನ್ನ ವಿಮಾನ ನಿರ್ಮಾಣ ಕೌಶಲ್ಯ ನಿಮಗಿಂತಲೂ ಉತ್ತಮವಾಗಿದೆ ಎಂದು ಕಿಚಾಯಿಸಿದ್ದಾರೆ. ಹೀಗೆಯೇ ಅವರು ಲೋಕಸಭೆಯಲ್ಲೂ ಮಾಡಿ ತೋರಿಸಿದ್ದರು.
|
ಸುನಿಲ್ ವಿಮಾನ ಅಂಬಾನಿಯದ್ದಕ್ಕಿಂತ ಉತ್ತಮ
ಸುನಿಲ್ ಅವರ ಪೋಸ್ಟ್‌ಗೆ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಥಾಮಸ್ ಎನ್ನುವರೊಬ್ಬರು, 'ಸುನಿಲ್ ಅವರೇ ನಿಮ್ಮ ವಿಮಾನ ಅನಿಲ್ ಅವರು ತಯಾರಿಸುವ ವಿಮಾನಕ್ಕಿಂತ 1000 ಪಾಲು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ ಎಂಬುದರಲ್ಲಿ ಅನುಮಾನವಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.
|
ಅನಿಲ್ ಬ್ರಾಡ್ ಬೆಂಡ್ ಅನ್ನೇ ಸರಿಯಾಗಿ ಕೊಡಲಾರರು
ರಿಲಯನ್ಸ್ ಸಂಸ್ಥೆ ಬ್ರಾಡ್ ಬ್ಯಾಂಡ್ ನೆಟ್‌ವರ್ಕನ್ನೇ ಸೇವೆಯನ್ನೇ ಸರಿಯಾಗಿ ಕೊಡುವುದಿಲ್ಲ ಇನ್ನು ವಿಮಾನ ನಿರ್ಮಿಸ ಬಲ್ಲರೇ ಎಂದು ಕಿಚಾಯಿಸಿದ್ದಾರೆ.
|
ಮುಂದಿನ ಬಾರಿ ಗಾಳಿಪಟ ಮಾಡಿ
ತುಂಬಾ ಚೆನ್ನಾಗಿ ವಿಮಾನ ಮಾಡಿದ್ದೀರಾ ಮುಂದಿನ ಬಾರಿ ನೊಟೀಸ್ ಕಳಿಸಿದರೆ ಅದರಲ್ಲಿ ಗಾಳಿಪಟ ಮಾಡಿ ಹಾರಿಸಿ ಎಂದು ಸಲಹೆ ಕೊಟ್ಟಿದ್ದಾರೆ ಅಭಿಷೇಕ್ ದತ್












Click it and Unblock the Notifications