ದಿಗ್ವಿಜಯ್ ವೆಡ್ಸ್ ಅಮೃತಾ: ಟ್ವಿಟ್ಟರ್ ಕಮೆಂಟ್ಸ್ ಪ್ರವಾಹ
ನವದೆಹಲಿ,ಸೆಪ್ಟೆಂಬರ್, 06: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮತ್ತು ಟಿವಿ ನಿರೂಪಕಿ ಅಮೃತಾ ರಾಯ್ ಅವರು ಆಗಸ್ಟ್ ತಿಂಗಳಿನಲ್ಲಿಯೇ ಮದುವೆಯಾಗಿದ್ದಾರೆ. ಸದ್ಯ ಇಬ್ಬರು ಅಮೆರಿಕ್ಕೆ ತೆರಳಿದ್ದಾರಂತೆ. ಭಾನುವಾರ ಟ್ವಿಟ್ಟರ್ ನಲ್ಲಿ ಈ ಸುದ್ದಿಯದ್ದೇ ಭರಾಟೆ. ದಿಗ್ವಿಜಯ್ ಸಿಂಗ್ ಮತ್ತು ಅಮೃತಾ ರಾಯ್ ಮದುವೆ ಬಗ್ಗೆ ಬಗೆಬಗೆಯ ಕಮೆಂಟ್ ಗಳು ಹರಿದಾಡುತ್ತಿವೆ.
68 ವರ್ಷದ ದಿಗ್ವಿಜಯ್ ಸಿಂಗ್ ಮತ್ತು 44 ರ ಹರೆಯದ ಅಮೃತಾ ರಾಯ್ ವಿವಾಹವಾಗಿದ್ದು ಅನೇಕ ವಿವಾದಗಳಿಗೂ ಈ ಮೂಲಕ ತೆರೆ ಎಳೆದಿದ್ದಾರೆ. ಮದುವೆ ಬಗ್ಗೆ ಅಮೃತಾ ರಾಯ್ ತಮ್ಮ ಫೇಸ್‌ಬುಕ್‌ನಲ್ಲಿ ಖಾತೆಯಲ್ಲೂ ಬರೆದುಕೊಂಡಿದ್ದಾರೆ.
ಪತ್ನಿ ತೀರಿಕೊಂಡ ಬಳಿಕ ದಿಗ್ವಿಜಯ್ ಸಿಂಗ್ , ರಾಯ್ ರನ್ನು ಮದುವೆಯಾಗಿದ್ದಾರೆ. ರಾಯ್ ಸಹ ತಮ್ಮ ಪತಿಗೆ ವಿಚ್ಚೇದನ ನೀಡಿದ್ದಾರೆ. 'ಅಮೃತಾ ನನ್ನಿಂದ ದೂರಾದ ಬಳಿಕ ಯಾವುದೇ ನಿರ್ಧಾರಕೈಗೊಳ್ಳಲು ಸ್ವತಂತ್ರಳು, ಅವಳ ಭವಿಷ್ಯ ಸುಂದರವಾಗಿರಲಿ ಎಂದು ಅಮೃತಾ ಮಾಜಿ ಪತಿ ಆನಂದ್ ಪ್ರಧಾನ್ ಫೇಸ್ ಬುಕ್‌ನಲ್ಲಿ ತಿಳಿಸಿದ್ದಾರೆ.

ತಂದೆ ಮಗಳು!
ನರೇಂದ್ರ ಮೋದಿ ಅವರ ಬೇಠಿ ಬಚಾವೋ ಆಂದೋಲನದ ಸಮಯದಲ್ಲಿ ದಿಗ್ವಿಜಯ್ ಮತ್ತು ಅಮೃತಾ ಅವರು ಜತೆಗಿದ್ದ ಫೋಟೋವನ್ನು ಪ್ರಕಟಿಸಿದ್ದ ಮಾಧ್ಯಮವೊಂದು ತಂದೆ ಮಗಳು ಎಂಬ ಶೀರ್ಷಿಕೆ ನೀಡಿ ವಿವಾದಕ್ಕೆ ಕಾರಣವಾಗಿತ್ತು.

ಹೊಸ ಬಾಳಿಗೆ ಶುಭವಾಗಲಿ
ಹೊಸದಾಗಿ ಮದುವೆಯಾದ ಜೋಡಿಗೆ ಶುಭವಾಗಲಿ. ಮೋದಿ ಸರ್ಕಾರದಲ್ಲಿ ನಿಮಗೂ ಅಚ್ಛೇ ದಿನ ಬಂದಿದೆ.
|
ರಾಹುಲ್ ಗಾಂಧಿಗೆ ಮಾರ್ಗದರ್ಶನ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಹ ಗುರುವಿನ ಕೆಲಸವನ್ನು ಪರಿಪಾಲಿಸಲಿದ್ದು ತಮ್ಮ 68 ನೇ ವರ್ಷದಲ್ಲಿ ವಿವಾಹವಾಗಲಿದ್ದಾರೆ.
|
ಮೋದಿ ವಿರುದ್ಧ ಹೊಸ ಅಸ್ತ್ರ
ದಿಗ್ವಿಜಯ್ ಸಿಂಗ್ ಮದುವೆಯಾಗಿದ್ದಕ್ಕೆ ಏನು ಕಾರಣ ಎಂಬುದನ್ನು ಸರ್ ರವೀಂದ್ರ ಜಡೇಜಾ ಹೇಳಿದ ರೀತಿಯೇ ಬೇರೆ!

ರಾಹುಲ್ ಗಾಂಧಿ ಏನಂತ ಕರೀತಾರೆ
ತಮ್ಮದೇ ವಯಸ್ಸಿನ ಅಮೃತಾ ರಾಯ್ ಅವರನ್ನು ರಾಹುಲ್ ಗಾಂಧಿ ಏನಂತ ಕರೆಯುತ್ತಾರೆ? ಎಂದು ಟ್ವೀಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ.

ದಿಗ್ವಿಜಯ್ ಜಾಹೀರಾತಿಗೆ ಬರ್ತಾರಾ?
ಕೆಲವೊಂದು ಉತ್ಪನ್ನಗಳ ಜಾಹೀರಾತಿನಲ್ಲಿ ದಿಗ್ವಿಜಯ್ ಸಿಂಗ್ ಕಾಣಿಸಿಕೊಂಡರೂ ಆಶ್ಚರ್ಯವಿಲ್ಲ!












Click it and Unblock the Notifications