ಎಬಿಪಿ ಸಮೀಕ್ಷೆ: ಮಧ್ಯ ಪ್ರದೇಶದಲ್ಲಿ ಈ ಬಾರಿ ಅಧಿಕಾರದತ್ತ ಕಾಂಗ್ರೆಸ್
ನವದೆಹಲಿ, ಮೇ 24: 2018ರ ಅಂತ್ಯಕ್ಕೆ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ 'ಎಬಿಪಿ ನ್ಯೂಸ್ - ಸಿಎಸ್ ಡಿಸ್ ಸಮೀಕ್ಷೆ' ಹೊರ ಬಿದ್ದಿದೆ. ಸಮೀಕ್ಷೆ ಪ್ರಕಾರ ಸತತ ಮೂರನೇ ಬಾರಿಗೆ ಮಧ್ಯ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಈ ಬಾರಿ ಕಾಂಗ್ರೆಸ್ ಗಿಂತ ಹಿಂದಿದೆ.
2013ರಲ್ಲಿ ಮಧ್ಯ ಪ್ರದೇಶದಲ್ಲಿ ಚುನಾವಣೆ ನಡೆದಾಗ ಬಿಜೆಪಿ ಶೇಕಡಾ 45 ಮತಗಳನ್ನು ಬಾಚಿಕೊಂಡಿತ್ತು. ಕಾಂಗ್ರೆಸ್ ಶೇಕಡಾ 36 ಮತ್ತು ಇತತರ ಶೇಕಡಾ 19 ಮತಗಳನ್ನು ಪಡೆದುಕೊಂಡಿದ್ದರು.
ಆದರೆ ಈ ಬಾರಿ ಪರಿಸ್ಥಿತಿ ಪೂರ್ತಿ ಬದಲಾಗಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಕಾಂಗ್ರೆಸ್ ಈ ಬಾರಿ ಮಧ್ಯ ಪ್ರದೇಶದಲ್ಲಿ ಶೇಕಡಾ 49 ಮತಗಳನ್ನು ಪಡೆದುಕೊಳ್ಳಲಿದೆ ಎಂಬುದಾಗಿ ಸಮೀಕ್ಷೆ ಅಂದಾಜಿದೆ. ಒಂದೊಮ್ಮೆ ಇಷ್ಟು ಮತಗಳನ್ನ ಕಾಂಗ್ರೆಸ್ ಪಡೆದುಕೊಂಡಿದ್ದೇ ಆದಲ್ಲಿ ಇಲ್ಲಿ ಸ್ವಂತ ಬಲದ ಮೇಲೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ.

ಇನ್ನು ಬಿಜೆಪಿ ಶೇಕಡಾ 34 ಮತ್ತು ಇತತರು ಶೇಕಡಾ 17 ಮತಗಳನ್ನಷ್ಟೇ ಇಲ್ಲಿ ಪಡೆಯಲಿದ್ದಾರೆ ಎಂದು ಸಮೀಕ್ಷೆ ಅಂದಾಜಿಸಿದೆ.












Click it and Unblock the Notifications