ತೈಲ ಬೆಲೆ ಏರಿಕೆಗೆ ವಿರೋಧ: ಸೆಪ್ಟೆಂಬರ್ 10ರಂದು ಭಾರತ್ ಬಂದ್
ನವದೆಹಲಿ, ಸೆಪ್ಟೆಂಬರ್ 6: ತೈಲ ಬೆಲೆ ಏರಿಕೆ ಖಂಡಿಸಿ ಸೆಪ್ಟೆಂಬರ್ 10ರಂದು ಭಾರತ್ ಬಂದ್‌ಗೆ ನಡೆಸಲು ಕಾಂಗ್ರೆಸ್ ಮುಂದಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ನಿರಂತರ ಹೆಚ್ಚಳವನ್ನು ವಿರೋಧಿಸಿ ದೇಶದಾದ್ಯಂತ ಬಂದ್ ನಡೆಸಲು ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಅದಕ್ಕೆ ಕೈಜೋಡಿಸುವಂತೆ ಇತರೆ ವಿರೋಧ ಪಕ್ಷಗಳು ಹಾಗೂ ಸಾಮಾಜಿಕ ಸಂಘಟನೆಗಳು, ಸಂಘ ಸಂಸ್ಥೆಗಳಿಗೆ ಮನವಿ ಮಾಡಿದೆ.
ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲಗಳು ದುಬಾರಿಯಾಗುತ್ತಿರುವುದರಿಂದ ಜನಸಾಮಾನ್ಯರು ತೀವ್ರ ಕಂಗೆಟ್ಟಿದ್ದಾರೆ ಎಂದು ಕಾಂಗ್ರೆಸ್‌ನ ಸಂವಹನ ಉಸ್ತುವಾರಿ ರಣದೀಪ್ ಸುರ್ಜೇವಾಲಾ ದೂರಿದ್ದಾರೆ.
#BharatBandh call by INC on 10th September, 2018 against the ₹11 lakh Cr loot by Modi Govt on fuel prices - Petrol/Diesel.
— Randeep Singh Surjewala (@rssurjewala) 6 September 2018
May 2014
Crude Oil 106.24 USD/ Barrel;
Petrol 71.41 ; Diesel 55.49
4 Sept 2018
Crude Oil 73-77 USD/ Barrel;
Petrol 79.31 ; Diesel 71.34
11 ಲಕ್ಷ ಕೋಟಿ ರೂಪಾಯಿ ತೈಲ ಲೂಟಿಯ ಕುರಿತು ಜನರಿಗೆ ತಿಳಿಸಲು ಮತ್ತು ಕೇಂದ್ರ ಅಬಕಾರಿ ಸುಂಕವನ್ನು ತಕ್ಷಣ ಇಳಿಸುವ ಮೂಲಕ ರಾಜ್ಯಗಳಲ್ಲಿ ಹೆಚ್ಚುವರಿ ವ್ಯಾಟ್ ತಗ್ಗಿಸಲು ಅನುವು ಮಾಡುವಂತೆ ಒತ್ತಾಯಿಸಿ ಸೆಪ್ಟೆಂಬರ್ 10ರ ಭಾನುವಾರ ಭಾರತ್ ಬಂದ್‌ಗೆ ಕಾಂಗ್ರೆಸ್ ಕರೆ ನೀಡಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ. ಇದರಿಂದ ತೀವ್ರ ಆರ್ಥಿಕ ಹೊರೆ ಎದುರಿಸುತ್ತಿರುವ ಜನಸಾಮಾನ್ಯರಿಗೆ ತಕ್ಕಮಟ್ಟಿಗೆ ನಿರಾಳತೆ ಸಿಗಲಿದೆ ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷಗಳು ಸಹ ಪ್ರತಿಭಟನೆಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಜನರ ಚಳವಳಿಗೆ ಸಾಮಾಜಿಕ ಸಂಘಟನೆಗಳು, ಗುಂಪುಗಳು, ಎನ್‌ಜಿಒಗಳು ಬೆಂಬಲ ನೀಡುವಂತೆ ಕೋರುವುದಾಗಿ ಹೇಳಿದ್ದಾರೆ.












Click it and Unblock the Notifications