ಶಾಲೆಗಳಲ್ಲಿ ಯೋಗ ಕಡ್ಡಾಯ ವಿರೋಧಿಸಿ ಕಾನೂನು ಹೋರಾಟ
ನವದೆಹಲಿ, ಜೂ. 08 : ಸರ್ಕಾರಿ ಶಾಲೆಗಳಲ್ಲಿ ಯೋಗದ ಪಠ್ಯವನ್ನು ಆಳವಡಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧರಿಸಿದೆ. ಮಂಡಳಿ ಸರ್ಕಾರದ ಈ ಪ್ರಸ್ತಾವನೆ ವಿರುದ್ಧ ದೇಶವ್ಯಾಪಿ ಆಂದೋಲವನ್ನು ಹಮ್ಮಿಕೊಳ್ಳಲಿದೆ.
ಭಾನುವಾರ ಲಕ್ನೋದಲ್ಲಿ ನಡೆದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರದ ಪ್ರಸ್ತಾವನೆ ವಿರುದ್ಧ ದೇಶವ್ಯಾಪಿ ಜನಾಂದೋಲನ ರೂಪಿಸುವ ಜೊತೆಗೆ ಸಾಮಾಜಿಕ ಜಾಲ ತಾಣಗಳಲ್ಲಿಯೂ ಪ್ರಚಾರ ನಡೆಸಲು ತೀರ್ಮಾನಿಸಿದೆ. [ಯೋಗ ಗುರುವಾಗಲಿದ್ದಾರೆ ಮೋದಿ]

ಈಗಾಗಲೇ ಕೇಂದ್ರ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಿದ್ದು, ಯೋಗದ ಪಠ್ಯಗಳನ್ನು ಕಡ್ಡಾಯಗೊಳಿಸಿಲ್ಲ. ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದೆ. ಆದರೆ, ಮಂಡಳಿ ಈ ಬಗ್ಗೆ ಕಾನೂನು ಹೋರಾಟ ನಡೆಸಲು ಮುಂದಾಗಿದೆ. [ಮೋದಿ ಯೋಗ ದಿನಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ]
ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರಗಳ ಕುರಿತು ಜನಾಂದೋಲವನ್ನು ಆರಂಭಿಸಬೇಕಿದೆ. ಶಾಲೆಗಳಲ್ಲಿ ಯೋಗ, ಸೂರ್ಯ ನಮಸ್ಕಾರದ ಬಗ್ಗೆ ಪಠ್ಯವನ್ನು ಅಳವಡಿಸುವುದು ಇದರಲ್ಲಿ ಸೇರಿದೆ ಎಂದು ಕಾನೂನು ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ವಕ್ತಾರರ ನೇಮಕ : ದೇಶವ್ಯಾಪಿ ಮುಸ್ಲಿಂ ಸಮುದಾಯವನ್ನು ಈ ಆಂದೋಲನ ತಲುಪಬೇಕಾಗಿದೆ. ಆದ್ದರಿಂದ ಸಾಮಾಜಿಕ ಜಾಲ ತಾಣಗಳ ಮೂಲಕವೂ ಪ್ರಚಾರ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಪ್ರಚಾರ ಆಂದೋಲನದಲ್ಲಿ ದೇಶವ್ಯಾಪ್ತಿ ಜನರಿಗೆ ಮಾಹಿತಿ ನೀಡಲು ವಕ್ತಾರರನ್ನು ನೇಮಿಸಲು ಮಂಡಳಿ ಮುಂದಾಗಿದೆ.












Click it and Unblock the Notifications