ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೋದಿ ಹತ್ಯೆ ಸಂಚಿನ ಲೇವಡಿ: ಕೆಳಮಟ್ಟಕ್ಕಿಳಿದ ವಿರೋಧಿಗಳು'

|
Google Oneindia Kannada News

Recommended Video

ನರೇಂದ್ರ ಮೋದಿ ಹತ್ಯೆ ಸಂಚಿನ ಬಗ್ಗೆ ಲೇವಡಿ ಮಾಡಿದ ವಿರೋಧಿಗಳು

ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆ ಸಂಚಿನ ಕುರಿತು ಮಾಡಲಾಗುತ್ತಿರುವ ಲೇವಡಿಗಳು ಸಂವೇದನಾರಹಿತ ಮತ್ತು ರಾಜಕೀಯದ ಕೀಳುಮಟ್ಟದ ಹೇಳಿಕೆಗಳಾಗಿವೆ ಎಂದು ಬಿಜೆಪಿ ಆರೋಪಿಸಿದೆ.

ಮೋದಿ ಅವರ ಹತ್ಯೆ ಸಂಚಿನ ವರದಿ ಕುರಿತು ಶಿವ ಸೇನಾ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಅಣಕವಾಡುತ್ತಿರುವುದನ್ನು ಖಂಡಿಸಿ ಬಿಜೆಪಿ ಈ ಹೇಳಿಕೆ ನೀಡಿದೆ.

ರಾಜೀವ್ ಹತ್ಯೆ ಮಾದರಿಯಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಮಾವೊವಾದಿಗಳ ಸಂಚು? ರಾಜೀವ್ ಹತ್ಯೆ ಮಾದರಿಯಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಮಾವೊವಾದಿಗಳ ಸಂಚು?

ಅನುಕಂಪ ಗಿಟ್ಟಿಸಿಕೊಳ್ಳಲು ಬಿಜೆಪಿಯು ಬೆದರಿಕೆ ಪತ್ರದ ನೆಪ ಬಳಸಿಕೊಳ್ಳುತ್ತಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದರು.

Comments on Modi assassination plot lowest level of insensitivity says BJP

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಹತ್ಯೆಗೆ ಮಾವೋವಾದಿಗಳು ಸಂಚು ರೂಪಿಸಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರು ಹೇಳಿಕೆ ನೀಡಿದ ಬಳಿಕ ವಿವಿಧ ರಾಜಕೀಯ ಪಕ್ಷಗಳು ಹತ್ಯೆಯ ಸಂಚು ಕಟ್ಟುಕಥೆ ಎಂದು ಲೇವಡಿ ಮಾಡಿದ್ದವು.

ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಆರೋಪದಡಿ ಐವರನ್ನು ಕಳೆದ ವಾರ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು.

ಅವರಲ್ಲಿ ಒಬ್ಬ ಆರೋಪಿಯ ಮನೆಯಲ್ಲಿ ದೊರೆತ ಪತ್ರದಲ್ಲಿ ಮೋದಿ ಅವರನ್ನು ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲಿ ಕೊಲ್ಲಲು ಸಲಹೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದರು.

ಮೋದಿ ಹತ್ಯೆ ಮಾಡಲು ಆರೆಸ್ಸೆಸ್, ಗಡ್ಕರಿ ಸಂಚು : ಶೆಹ್ಲಾ ಟ್ವೀಟ್ಮೋದಿ ಹತ್ಯೆ ಮಾಡಲು ಆರೆಸ್ಸೆಸ್, ಗಡ್ಕರಿ ಸಂಚು : ಶೆಹ್ಲಾ ಟ್ವೀಟ್

ಈ ಹತ್ಯೆಯ ಸಂಚು ನಿಗೂಢ ರಹಸ್ಯದಂತೆ ಮತ್ತು ಹಾರರ್ ಸಿನಿಮಾವೊಂದರ ಕಥೆಯಂತೆ ಕಾಣಿಸುತ್ತಿದೆ ಎಂದು ಶಿವಸೇನಾ ತನ್ನ ಮುಖವಾಣಿ 'ಸಾಮ್ನಾ' ಪತ್ರಿಕೆಯಲ್ಲಿ ವ್ಯಂಗ್ಯವಾಡಿತ್ತು.

ಮೋದಿ ಅವರು 15 ರಾಜ್ಯಗಳಲ್ಲಿ ಸರ್ಕಾರ ರಚಿಸುವಲ್ಲಿ ಸಫಲರಾಗಿದ್ದಾರೆ. ಇದು ಮುಂದುವರಿದರೆ ಸಂಘಟನೆ ತೊಂದರೆಯಲ್ಲಿ ಸಿಲುಕಲಿದೆ. ಹೀಗಾಗಿ ಮೋದಿ ಅವರನ್ನು ಕೊನೆಗಾಣಿಸಬೇಕು ಎಂಬುದಾಗಿ ಪತ್ರದಲ್ಲಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದು ನಗೆ ತರಿಸುವ ಸಂಗತಿಯಾಗಿದೆ.

ರಾಜಕೀಯ ಉದ್ದೇಶದಿಂದ ಈ ವಿವಾದವನ್ನು ಹೆಣೆಯಲಾಗಿದೆ. ಈ ಸಂಚಿನ ಆರೋಪ ನೈಜವಾಗಿರುವಂತೆ ಕಾಣಿಸುತ್ತಿಲ್ಲ ಎಂದು ಸಾಮ್ನಾ ಹೇಳಿತ್ತು.

ಮೋದಿ ಹತ್ಯೆಗೆ ಸಂಚು, ದುಷ್ಟರ ವಿರುದ್ಧ ಸಿಡಿದೆದ್ದ ಟ್ವಿಟ್ಟಿಗರು!ಮೋದಿ ಹತ್ಯೆಗೆ ಸಂಚು, ದುಷ್ಟರ ವಿರುದ್ಧ ಸಿಡಿದೆದ್ದ ಟ್ವಿಟ್ಟಿಗರು!

ಮೋದಿ ಅವರಿಗೆ ನೀಡಿರುವ ಭದ್ರತೆಯು ಮೊಸ್ಸಾದ್‌ನಷ್ಟೇ (ಇಸ್ರೇಲ್‌ ಬೇಹುಗಾರಿಕೆ ಸಂಸ್ಥೆ) ಪ್ರಬಲವಾಗಿದೆ. ಅದನ್ನು ಭೇದಿಸಲು ಯಾರಿಗೂ ಸಾಧ್ಯವಾಗುವುದಿಲ್ಲ ಎಂದು ಶಿವಸೇನಾ ಹೇಳಿದೆ.

ಶರದ್ ಪವಾರ್ ಅವರು ಕೂಡ ಬೆದರಿಕೆ ಪತ್ರದ ಅಧಿಕೃತತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಬಿಜೆಪಿಯು ತನ್ನ ಜನಪ್ರಿಯ ಬೆಂಬಲವನ್ನು ಕಳೆದುಕೊಳ್ಳುತ್ತಿರುವುದನ್ನು ಅರಿತುಕೊಂಡಿದೆ. ಹೀಗಾಗಿ ಅನುಕಂಪ ಪಡೆದುಕೊಳ್ಳಲು ಅದು ಬೆದರಿಕೆ ಕಾಗದದ ಕಥೆ ಕಟ್ಟಿದೆ. ಇಂತಹ ತಂತ್ರಗಳಿಗೆ ಜನರು ಸಿಲುಕುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದು ಪವಾರ್, ಸೋಮವಾರ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ನಾನು ಈ ಬಗ್ಗೆ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರೊಂದಿಗೆ ಮಾತನಾಡಿದ್ದೆ. ಅವರು ಇಂತಹ ಬೆದರಿಕೆ ಪತ್ರಗಳು ಮಾಧ್ಯಮದ ಬಳಿ ಹೋಗುವುದಿಲ್ಲ. ಬದಲಾಗಿ ಭದ್ರತಾ ಸಂಸ್ಥೆಗಳಿಗೆ ತಕ್ಷಣ ರವಾನೆಯಾಗುತ್ತವೆ. ಅವರು ಕೂಡಲೇ ಅಗತ್ಯ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ವಿವರಿಸಿದ್ದಾಗಿ ಪವಾರ್ ಹೇಳಿದ್ದರು.

ಇದಕ್ಕೆ ಟ್ವಿಟ್ಟರ್‌ನಲ್ಲಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದ ಫಡಣವೀಸ್, ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತೀರಾ? ಪವಾರ್‌ಜಿ ನೀವು ದೇಶದ ರಾಜಕೀಯದಲ್ಲಿ ಮಾಡಬೇಕೇ ಹೊರತು ದ್ವೇಷ ರಾಜಕೀಯವನ್ನಲ್ಲ ಎಂದು ಹೇಳಿದ್ದರು.

ದೇಶವು ಹಿಂಸಾಚಾರದ ಕಾರಣ ಇಬ್ಬರು ಪ್ರಧಾನಿಗಳನ್ನು ಕಳೆದುಕೊಂಡಿದೆ. ಇಂತಹ ಪ್ರಯತ್ನಗಳನ್ನು ಎಲ್ಲರೂ ಖಂಡಿಸಬೇಕು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಒತ್ತಾಯಿಸಿದ್ದರು.

ಜನರು ಈ ಬಗ್ಗೆ ಇನ್ನೂ ಯೋಚಿಸುತ್ತಿಲ್ಲ. ಈ ಪತ್ರವನ್ನು ಯಾರು ಬರೆದಿರಬಹುದು ಎಂದು ಪ್ರಶ್ನಿಸುವುದನ್ನು ಬಿಟ್ಟು ವಿರೋಧ ಪಕ್ಷಗಳು ಇದು ಹೀಗೆ ಬಹಿರಂಗವಾಯಿತು ಎಂದು ಪ್ರಶ್ನಿಸುತ್ತಿವೆ ಎಂಬುದಾಗಿ ಜಾವಡೇಕರ್ ಹರಿಹಾಯ್ದಿದ್ದರು.

ಇದು ಸಂವೇದನೆ ಇಲ್ಲದ ಮತ್ತು ರಾಜಕೀಯದ ಕೀಳುಮಟ್ಟದ ಹೇಳಿಕೆಗಳಾಗಿವೆ ಎಂದು ಅವರು ಟೀಕಿಸಿದ್ದರು.

English summary
The BJP has said that the various remarks mocking the assassination plot against Prime Minister Narendra Modi is the lowest point of insensitivity and politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X