ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈತೊಳೆಯೋದಕ್ಕೆ ಬಿಸಿ ನೀರು ಒಳ್ಳೆಯದೋ ತಣ್ಣೀರೋ?

ಸೂಕ್ಷ್ಮಾಣುಗಳೆಲ್ಲ ಹೋಗಬೇಕಂದ್ರೆ ಬಿಸಿ ನೀರಲ್ಲೇ ಕೈತೊಳೆಯಬೇಕು ಅಂತಾರೆ ಕೆಲವರು. ಆದರೆ ಅಸಲಿ ವಿಷಯ ಏನಂದ್ರೆ ಕೈತೊಳೆಯುವುದಕ್ಕೆ ಬಿಸಿ ನೀರನ್ನೇ ಬಳಸಿ, ಅಥವಾ ತಣ್ಣೀರನ್ನೇ ಬಳಸಿ ಪರಿಣಾಮ ಮಾತ್ರ ಒಂದೇ ಎನ್ನುತ್ತಾರೆ ಸಂಸೋಧಕರು.

By ವಿಕಾಸ್ ನಂಜಪ್ಪ
|
Google Oneindia Kannada News

ಕೆಲವರಿಗೆ ಅದೊಂದು ನಂಬಿಕೆ. ಬಿಸಿ ನೀರಲ್ಲಿ ಕೈತೊಳೆದರೆ ಕೈ ಕ್ಲೀನ್ ಆಗುತ್ತೆ ಅಂತ! ಸೂಕ್ಷ್ಮಾಣುಗಳೆಲ್ಲ ಹೋಗಬೇಕಂದ್ರೆ ಬಿಸಿ ನೀರಲ್ಲೇ ಕೈತೊಳೆಯಬೇಕು ಅಂತಾರೆ ಕೆಲವರು. ಆದರೆ ಅಸಲಿ ವಿಷಯ ಏನಂದ್ರೆ ಕೈತೊಳೆಯುವುದಕ್ಕೆ ಬಿಸಿ ನೀರನ್ನೇ ಬಳಸಿ, ಅಥವಾ ತಣ್ಣೀರನ್ನೇ ಬಳಸಿ ಪರಿಣಾಮ ಮಾತ್ರ ಒಂದೇ ಎನ್ನುತ್ತಾರೆ ಸಂಸೋಧಕರು.

ಕೈತೊಳೆಯುವುದು ಹಲವು ರೋಗಗಳನ್ನು ತಡೆಯುವುದಕ್ಕೆ ಮೊದಲ ಉಪಾಯ. ಯಾವುದೇ ಕೆಲಸವನ್ನೇ ಮಾಡಿರಲಿ ಒಮ್ಮೆ ಕೈತೊಳೆಯುವುದರಿಂದಲೇ ಎಷ್ಟೋ ಸೋಂಕು ರೋಗಗಳನ್ನು ತಡೆಯಬಹುದು. ಆದರೆ ಕೈತೊಳೆಯುವುದಕ್ಕೆ ನೀವು ಬಿಸಿ ನೀರು ಬಳಸುತ್ತೀರೋ, ತಣ್ಣೀರು ಬಳಸಿತ್ತೀರೋ ಎಂಬುದು ಮಹತ್ವದ ವಿಷಯವಲ್ಲ.[ಎಚ್ಚರ, ಹಸ್ತಲಾಘವವನ್ನು ಲಘುವಾಗಿ ಪರಿಗಣಿಸದಿರಿ]

Cold or hot water, effect is same while washing hands!

ಬಿಸಿ ನೀರನ್ನು ಬಳಸುವುದರಿಂದ ನಿಮಗೆ ಸ್ವಲ್ಪ ಆಹ್ಲಾದಕರವಾದ ಅನುಭವ ಸಿಗಬಹುದೇ ಹೊರತು, ತಣ್ಣೀರಿಗಿಂತ ಬಿಸಿನೀರು ಶ್ರೇಷ್ಠ ಎಂದುಕೊಂಡು ಪ್ರಯೋಜನವಿಲ್ಲ ಎಂಬುದು ಅಮೆರಿಕದ ರಟ್ಗರ್ಸ್ ವಿಶ್ವವಿದ್ಯಾಲಯದ ಡೊನಾಲ್ಡ್ ಶಫ್ನರ್ ಅಭಿಪ್ರಾಯ.

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೈತೊಳೆಯುವುದ ಬಹಳ ಪ್ರಮುಖವಾದದ್ದು. ಹೊಟೇಲ್ ಗಳಲ್ಲಿ ಸರ್ವರ್ ಕೆಲಸ ಮಾಡುವವರು, ಬೇಕರಿಗಳಲ್ಲಿ ತೆರೆದ ಆಹಾರ ನೀಡುವವರು ಕೈತೊಳೆಯುತ್ತಲೇ ಇರಬೇಕು. ಆದರೆ ಹಲವರು ಈ ಬಗ್ಗೆ ಯೋಚಿಸದ ಕಾರಣ ತಿಂಡಿಗಳನ್ನು ಕೊಳ್ಳುವವರ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾ ಉಂಟಾಗುತ್ತಿದೆ. ಶೌಚಾಲಯಕ್ಕೆ ಹೋಗಿಬಂದ ನಂತರ, ಯಾವುದೇ ವಸ್ತುಗಳನ್ನು ಮುಟ್ಟಿದ ನಂತರ ಒಮ್ಮೆ ಕೈತೊಳೆಯುವುದು ಒಳ್ಳೆಯದು.

English summary
It may a pointless exercise to wash your hands only with hot water. Scientists have found that washing hands with cold water is equally effective at killing germs. Washing even for 10 seconds significantly removed bacteria from the hands, researchers have also found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X