ಎಚ್ಚರ, ಹಸ್ತಲಾಘವವನ್ನು ಲಘುವಾಗಿ ಪರಿಗಣಿಸದಿರಿ

ಪರ್ಫೆಕ್ಟಾಗಿ ಹಸ್ತಲಾಘವ ಮಾಡುವ ಬಗೆಯಾದರೂ ಯಾವುದು? ಹಸ್ತಲಾಘವದಿಂದ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಅಳೆಯಲು ಸಾಧ್ಯವೆ? ಹ್ಯಾಂಡ್ ಶೇಕ್ ನಿಂದ ಆಗುವ ಲಾಭ ಮತ್ತು ದುಷ್ಪರಿಣಾಮಗಳು ಯಾವುದು?

ಈ ಪ್ರಶ್ನೆಗಳನ್ನು ಕೇಳಿದವರು, ಓದಿದವರು ಸಿಕ್ಕಪಟ್ಟೆ ನಗಬಹುದು. ಹಸ್ತಲಾಘವ ಮಾಡಲೂ ಒಂದು ವಿಧಾನವಿದೆಯೆ ಎಂದು ತಮಾಷೆ ಮಾಡಬಹುದು. ಹಸ್ತಲಾಘವದಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ಗಂಭೀರವಾಗಿ ಗಮನಿಸಿದರೆ ಈ ವಿಷಯವನ್ನು ನೀವು ಲಘುವಾಗಿ ನೋಡಲಾರಿರಿ.

ಎಚ್1ಎನ್1 ವೈರಸ್ ಎಬ್ಬಿಸುತ್ತಿರುವ ಹಾವಳಿ ಗಮನಿಸಿದರೆ, ಕೈಯನ್ನು ಸ್ವಚ್ಛವಾಗಿ ಇಡುವುದಿರಲಿ, ಅಪರಿಚಿತರಿಗೆ ಹಸ್ತಲಾಘವ ನೀಡುವುದು ಬಲೇ ಅಪಾಯಕಾರಿ. ಪರಿಚಿತರಿಗೂ ಹಸ್ತಲಾಘವ ನೀಡುವಾಗ ಹಿಂದೆ ಮುಂದೆ ನೋಡಬೇಕು, ಹಾಗಿದೆ ಪರಿಸ್ಥಿತಿ. ನಿಜ ಹೇಳಬೇಕೆಂದರೆ, ಹಸ್ತಲಾಘವ ನೀಡುವುದು ಮುತ್ತಿಡುವುದಕ್ಕಿಂತಲೂ ಆಪಾಯಕಾರಿ.

Perfect handshake

ಆದರೆ, ಹ್ಯಾಂಡ್ ಶೇಕ್ ಮಾಡುವಾಗ ಸರಿಯಾದ ವಿಧಾನ ಬಳಸಿದರೆ, ಇಂಥ ಅನೇಕ ಅಪಾಯಗಳಿಂದ ದೂರವಿರಬಹುದು ಅನ್ನುವುದು ವಿಜ್ಞಾನಿಗಳ ಅಂಬೋಣ. ಅಷ್ಟು ಮಾತ್ರವಲ್ಲ, ಎದುರಿಗಿರುವ ವ್ಯಕ್ತಿಯ ವ್ಯಕ್ತಿತ್ವವನ್ನು ಕೂಡ ಅಳೆದುತೂಗಿ ನೋಡಬಹುದು ಎಂಬುದು ಅವರ ಸ್ಪಷ್ಟ ನುಡಿ.

ಹಸ್ತಲಾಘವ ಆಧುನಿಕ ಆಚರಣೆಯೇನಲ್ಲ, ಅನಾದಿ ಕಾಲದಿಂದಲೂ ಬಂದಂತಹ ಬೆಳವಣಿಗೆ. ಪರಿಚಯಿಸಿಕೊಳ್ಳುವಾಗ, ಶುಭ ಹಾರೈಸುವಾಗ, ಹಾಗೆ ಸುಮ್ಮನೆ ಪರಿಚಿತರಿಗೆ ಹಸ್ತಲಾಘವ ನೀಡುವುದು ನಮ್ಮ ವಾಡಿಕೆ. ಹಸ್ತಲಾಘವ ನಂಬಿಕೆಯ, ಗೌರವದ ಸಂಕೇತ. ಒಂದು ಹಸ್ತಲಾಘವದಲ್ಲಿ ಮನಸ್ತಾಪಗಳನ್ನು ಕ್ಷಣದಲ್ಲಿ ಬಗೆಹರಿಸುವ ಶಕ್ತಿಯೂ ಇರುತ್ತದೆ. ಆದರೆ, ಅನೇಕ ಬಾರಿ ಸಾಕಷ್ಟು ಕಿರಿಕಿರಿಗಳನ್ನೂ ಮಾಡುತ್ತದೆ.

ಕೆಲವರು ಕೈ ಹಿಡಿದರೆ ಬಿಡಿಸಿಕೊಳ್ಳುವವರೆಗೆ ಬಿಡುವುದಿಲ್ಲ, ಕೆಲವರು ಕೊಡುವ ಹಂತದಲ್ಲಿಯೇ ಕೈಕೊಸರಿಕೊಂಡಿರುತ್ತಾರೆ, ಕೆಲವರು ಕೊಟ್ಟ ಹಸ್ತಲಾಘವದಿಂದ ಬೆರಳಿನ ಮೂಳೆಮೂಳೆಗಳೆಲ್ಲ ಲಟಲಟ ಅಂದಿರುತ್ತವೆ. ಹದಿಹರೆಯದ ಹುಡುಗ ಹುಡುಗಿ ಹಸ್ತಲಾಘವ ನೀಡುವಾಗ ಮೌನದಲ್ಲೇ ಮಾತು ಮುಗಿದುಹೋಗಿರುತ್ತದೆ. ಕೆಲ ಬಾರಿ ಕೈ ಯಾವ ಪರಿ ಬೆವೆತು ಹೋಗಿರುತ್ತದೆಂದರೆ ಹಸ್ತಲಾಘವ ನೀಡವುದಕ್ಕಿಂತ ಅವರಿಗೆ ಮುತ್ತಿಡುವುದೇ ವಾಸಿ ಅನ್ನಿಸಿಬಿಡುತ್ತದೆ. ಅನೇಕ ಬಾರಿ ಕೈ ನೀಡಿದಾಗ ಕಣ್ಣು ಇನ್ನೇನೋ ಹುಡುಕುತ್ತಿರುತ್ತದೆ. ಕೆಲ ಬಾರಿ ಎಡಚರು ಎಡಗೈ ನೀಡಿ ಎಡವಟ್ಟು ಮಾಡಿಕೊಂಡುಬಿಟ್ಟಿರುತ್ತಾರೆ.

ಇಲ್ಲಿವೆ ನೋಡಿ ಕೆಲ ನಿಯಮಗಳು

* ಹಸ್ತ ನೀಡುವಾಗ ಬಲಗೈಯನ್ನೇ ನೀಡಿ.
* ಹಸ್ತಗಳ ಸೇರಿದಾಗ ಸಡಿಲಾಗಿಯೂ ಇರಬಾರದು, ತೀರ ಬಿಗಿಯಾಗಿಯೂ ಇರಬಾರದು.
* ಕೈಗಳು ಒಣ ಇರಲಿ, ಬೆವತಿರಬಾರದು.
* ಶೇಕಿಂಗ್ ಮೂರಕ್ಕಿಂತ ಜಾಸ್ತಿ ಇರಬಾರದು.
* ಹಸ್ತಲಾಘವ ಎರಡರಿಂದ ಮೂರು ಸೆಕೆಂಡಿಗಿಂತ ಹೆಚ್ಚು ಇರಬಾರದು.
* ಹಸ್ತಲಾಘವ ಮಾಡುವಾಗ ದೃಷ್ಟಿ ನೇರವಿರಲಿ ಕಣ್ಣು ಸಂಧಿಸುತ್ತಿರಲಿ.
* ಅಪರಿಚಿತರಿಗೆ ಹಸ್ತಲಾಘವ ನೀಡಿದ ಮೇಲೆ ಸೋಪಿನಿಂದ ಕೈ ತೊಳೆಯುವುದನ್ನು ಮರೆಯಬೇಡಿ.

ನೆನಪಿಡಿ, ಸರಿಯಾದ ರೀತಿಯಲ್ಲಿ ಹಸ್ತಲಾಘವ ಮಾಡುವುದರಿಂದ ಮುಂದಿರುವ ವ್ಯಕ್ತಿಯನ್ನು ಅಳೆಯುವುದು ಮಾತ್ರವಲ್ಲ ಅನೇಕ ರೋಗಳಿಂದಲೂ ದೂರವಿರಬುಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+