ಚಿಕಿತ್ಸೆ ನಂತರ ಗೋವಾಗೆ ಮರಳಲಿದ್ದಾರೆ ಪರಿಕ್ಕರ್
ಪಣಜಿ, ಜೂನ್ 12: ದೀರ್ಘ ಕಾಲದ ಚಿಕಿತ್ಸೆಯ ನಂತರ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಾಳೆ ತವರಿಗೆ ವಾಪಸಾಗಲಿದ್ದಾರೆ. ಅಮೆರಿಕಾದಲ್ಲಿ ಪಾನ್ ಕ್ರಿಯಾಟಿಕ್ ಅಲ್ಮೆಂಟ್ಗೆ ಖಾಯಿಲೆಗೆ ಚಿಕಿತ್ಸೆ ಪಡೆದುಕೊಂಡಿರುವ ಅವರು ಈ ವಾರ ಪಣಜಿಗೆ ಮರಳಲಿದ್ದಾರೆ ಎಂದು ಗೋವಾದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ಮಾರ್ಚ್ ನಿಂದ 62 ವರ್ಷದ ಪರಿಕ್ಕರ್ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. "ಈ ವಾರ ಮುಖ್ಯಮಂತ್ರಿಗಳು ರಾಜ್ಯಕ್ಕೆ ಮರಳಲಿದ್ದಾರೆ. ಆದರೆ ಅವರು ಬರುವ ಖಚಿತ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ," ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿ ತಿಳಿಸಿದ್ದಾರೆ.
ಪರಿಕ್ಕರ್ ಮರಳುವುದಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮುಖ್ಯಮಂತ್ರಿ ಕಚೇರಿ ಮಾಡಿಕೊಳ್ಳುತ್ತಿದೆ. "ಮುಖ್ಯಮಂಗತ್ರಿಗಳು ಅಮೆರಿಕಾದಿಂದ ನೇರವಾಗಿ ಮುಂಬೈಗೆ ಬರಲಿದ್ದಾರೆ. ನಂತರ ಅಲ್ಲಿಂದ ಇನ್ನೊಂದು ವಿಮಾನದಲ್ಲಿ ಗೋವಾಗೆ ಆಗಮಿಸಲಿದ್ದಾರೆ," ಎಂದು ಕಚೇರಿ ಸಿಬ್ಬಂದಿ ವಿವರ ನೀಡಿದ್ದಾರೆ.

ಗೋವಾವನ್ನು ತೊರೆಯುವ ಮೊದಲು ಪರಿಕ್ಕರ್ ಸಂಪುಟ ಸಲಹಾ ಸಮಿತಿ ರಚನೆ ಮಾಡಿ ತೆರಳಿದ್ದರು. ಅವರ ಅನುಪಸ್ಥಿತಿಯಲ್ಲಿ ಸರಕಾರದ ಆಡಳಿತ ನೋಡಿಕೊಳ್ಳಲು ಅವರು ಈ ವ್ಯವಸ್ಥೆ ಮಾಡಿದ್ದರು.












Click it and Unblock the Notifications