Vande Bharat Express: ಕ್ರಿಸ್ಮಸ್ ಹಬ್ಬಕ್ಕೆ ವಿಶೇಷ ವಂದೇ ಭಾರತ್ ರೈಲು- ಯಾವ ನಗರಗಳ ನಡುವೆ- ಸಮಯ, ವಿವರ
ಬೆಂಗಳೂರು, ಡಿಸೆಂಬರ್ 24: ದೇಶಾದ್ಯಂತ ಜಾಲ ವಿಸ್ತರಿಸಿಕೊಳ್ಳುತ್ತಿರುವ ವಂದೇ ಭಾರತ್ ರೈಲುಗಳನ್ನು (Vande Bharat Special Train) ಆಗಾಗ ಹಬ್ಬದ ಸಂದರ್ಭಗಳಲ್ಲಿಯೂ ವಿಶೇಷ ರೈಲುಗಳನ್ನು ರೈಲ್ವೆ ಇಲಾಖೆ ನಿಯೋಜಿಸಿತ್ತದೆ. ಅದೇ ರೀತಿ ಕ್ರಿಸ್‌ಮಸ್ ಸಂದರ್ಭದಲ್ಲಿ ವಿಬಿ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.
ಹೌದು, ಕ್ರಿಸ್‌ಮಸ್ ಋತುವಿನಲ್ಲಿ ಹಬ್ಬದ ಹೆಚ್ಚು ಜನ ಸಂಚಾರ ಇರುತ್ತದೆ. ಊರಿಂದ ಬೇರೆ ಊರುಗಳಿಗೆ ಓಡಾಡುವವರ ಸಂಖ್ಯೆ ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆಯು ವಿಶೇಷ ವಂದೇ ಭಾರತ್ ರೈಲು ಅನ್ನು ಬಿಡಲಾಗಿದೆ. ಈ ರೈಲು ಡಾ ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ ಕೋಝಿಕ್ಕೋಡ್‌ಗೆ ಒನ್ ವೇ ಮಾರ್ಗದಲ್ಲಿ ಸಂಚರಿಸಲಿದೆ.

ಈ ವಿಶೇಷ 'ವಿಬಿ' ರೈಲು ಸೇವೆಯು ಪ್ರಯಾಣಿಕರಿಗೆ ಅನುಕೂಲಕರ ಪ್ರಯಾಣದ ಆಯ್ಕೆಗಳನ್ನು ಒದಗಿಸುವ ಗುರಿ ಹೊಂದಲಾಗಿದೆ. ಕ್ರಿಸ್‌ಮಸ್ ಪ್ರಯುಕ್ತ ಚೆನ್ನೈನಿಂದ ಹೊರಡುವವರು ಹಾಗೂ ಮಧ್ಯೆದ ಊರುಗಳ ಜನರಿಗೆ ಇದು ಬಹಳಷ್ಟು ಸಹಾಯವಾಗಲಿದೆ. ಈ ರೈಲಿನ ವೇಳಾಪಟ್ಟಿ, ಸಮಯ, ನಿಲ್ದಾಣದಗಳ ಮಾಹಿತಿ ಇಲ್ಲಿದೆ.
ಕ್ರಿಸ್‌ಮಸ್ 'ವಿಬಿ' ರೈಲು ವೇಳಾಪಟ್ಟಿ
ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಈ ವಂದೇ ಭಾರತ್ ವಿಶೇಷ ರೈಲು (ಗಾಡಿ ಸಂಖ್ಯೆ 06041) 25ನೇ ಡಿಸೆಂಬರ್ ಭಾನುವಾರ ಬೆಳಗ್ಗೆ 04:30 ಗಂಟೆಗೆ ಹೊರಡಲಿದೆ. ಅಲ್ಲಿಂದ ಅದು ವಿವಿಧ ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ಮರುದಿನ ಮಧ್ಯಾಹ್ನ ಕೋಝಿಕ್ಕೋಡ್‌ಗೆ ತಲುಪುತ್ತದೆ. ಇದು ಕೇವಲ ಒಂದು ದಿನದ ಮಾತ್ರದ ಸೇವೆ ಆಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಎಷ್ಟು ಬೋಗಿಗಳ ರೈಲು ಇದು?
ಈ ಒನ್ ವೇ ವಂದೇ ಭಾರತ್ ವಿಶೇಷ ರೈಲು ಒಟ್ಟು ಎಂಟು ಕೋಚ್‌ಗಳನ್ನು ಒಳಗೊಂಡಿದೆ. ವಂದೇ ಭಾರತ್ ರೇಕ್ ಅನ್ನು ಒಳಗೊಂಡಿರುತ್ತದೆ. ಈ ಸುವ್ಯವಸ್ಥಿತ ಸಂಯೋಜನೆಯನ್ನು ಸಮರ್ಥ ಮತ್ತು ಆರಾಮದಾಯಕ ಪ್ರಯಾಣ ನೀಡಲಿದೆ. ಪ್ರಯಾಣಿಕರು ಕ್ರಿಸ್‌ಮಸ್ ಹಬ್ಬ, ಹೊಸ ವರ್ಷಕ್ಕೆ ಊರಿಗೆ ತೆರಳುವವರು ಈ ರೈಲಿನಲ್ಲಿ ತೆರಳಬಹುದು.

ನಿಲುಗಡೆ ನಿಲ್ದಾಣ-ಸಮಯದ ವಿವರ
ಈ ಹಬ್ಬದ ಪ್ರಯಾಣವನ್ನು ಪ್ರಾರಂಭಿಸಲು ಯೋಜಿಸುತ್ತಿರುವ ಪ್ರಯಾಣಿಕರಿಗೆ ಸಹಾಯವಾಗುವ ಈ ರೈಲು (ಸಂಖ್ಯೆ 06041) ಹಲವೆಡೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ. ಯಾವ ನಿಲ್ದಾಣಗಳಲ್ಲಿ ಯಾವ ಸಮಯ ನಿಲುಗಡೆ ನೀಡುತ್ತದೆ ಎಂಬ ಮಾಹಿತಿ ಇಲ್ಲಿದೆ.
ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ 04.30am ಹೊರಡುವ ವಿಶೇಷ ವಂದೇ ಭಾರತ್ ರೈಲು, ಪೆರಂಬೂರ್ ನಲ್ಲಿ 04.45am, ಕಟಪಾಡಿ 06.00am, ಸೇಲಂ 08.28am, ಈರೋಡ್ 09.30am, ತಿರುಪ್ಪೂರ್ 10.10am, ಪೋದನೂರು 11.18am, ಪಾಲಕ್ಕಾಡ್ 12.08pm, ಶೋರನೂರು 13.05pm, ತಿರೂರ್ 14.0pm, ಕೋಝಿಕ್ಕೋಡ್ ಗೆ ಮಧ್ಯಾಹ್ನ 15.20 ಗಂಟೆಗೆ ತಲುಪಲಿದೆ.
ಸಂಚಾರಕ್ಕೆ ಯಾವುದೇ ಅಡಚಣೆ ಇಲ್ಲದೇ ಪ್ರಯಾಣ ಮಾಡಲು ಅಭ್ಯರ್ಥಿಗಳಿಗೆ ಈ ರೈಲಿನ ಟಿಕೆಟ್‌ಗಳನ್ನು ಮುಂಗಡವೇ ಕಾಯ್ದಿರಿಸಲು ಅವಕಾಶ ಕಲ್ಪಿಸಿದೆ. ಒನ್ ವೇ ವಂದೇ ಭಾರತ್ ವಿಶೇಷಕ್ಕಾಗಿ ಮುಂಗಡ ಕಾಯ್ದಿರಿಸುವಿಕೆ ಈಗ ಮುಕ್ತವಾಗಿದೆ. ರೈಲು ಸಂಖ್ಯೆ 06041 ಅನ್ನು ಪ್ರಾರಂಭಿಸಲು ಯೋಜಿಸುವವರಿಗೆ, ಅಧಿಕೃತ ವೆಬ್‌ಸೈಟ್ www.irctc.co.in ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ.
ರೈಲಿನ ವಿವವಾರದ ಸಮಯ, ಶುಲ್ಕ, ಹೆಚ್ಚುವರಿ ನಿಲುಗಡೆ ಸೇರಿದಂತೆ ಇನ್ನಿತರ ಮಾಹಿತಿಗಾಗಿ ಆಸಕ್ತರ ಪ್ರಯಾಣಿಕರು www.enquiry.indianrail.gov.in ಗೆ ಭೇಟಿ ನೀಡಬಹುದು. ಇಲ್ಲವೇ NTES ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು.












Click it and Unblock the Notifications