ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಸ್ಮಸ್ ದಿನದ ಮಹಾ ಮತಾಂತರ ಕಾರ್ಯಕ್ರಮ ರದ್ದು

By Mahesh
|
Google Oneindia Kannada News

ಆಲಿಘಢ(ಉತ್ತರಪ್ರದೇಶ) ಡಿ.17: ಕ್ರಿಸ್ ಮಸ್ ದಿನದಂದು ನಡೆಸಲು ಉದ್ದೇಶಿಸಿದ್ದ ಘರ್ ವಾಪಸಿ ಮತಾಂತರ ಕಾರ್ಯಕ್ರಮವನ್ನು ರದ್ದುಪಡಿಸುವುದಾಗಿ ಹಿಂದೂ ಸಂಘಟನೆ ಧರ್ಮ ಜಾಗರಣ್ ಸಮಿತಿ ಘೋಷಿಸಿದೆ. ಈ ಬಗ್ಗೆ ಸ್ಥಳೀಯ ಹಿಂದೂ ಮುಖಂಡ ಸತ್ಯ ಪ್ರಕಾಶ್ ಅವರು ಹೇಳಿಕೆ ನೀಡಿದ್ದು ಡಿ.25 ರ ಕಾರ್ಯಕ್ರಮ ರದ್ದಾಗಿದೆ ಎಂದಿದ್ದಾರೆ.

ಕ್ರಿಸ್ ಮಸ್ ದಿನದಂದು ಇಲ್ಲಿನ ಕಾಲೇಜೊಂದರಲ್ಲಿ ನಡೆಸಲು ಉದ್ದೇಶಿಸಿದ್ದ ಬೃಹತ್ ಮತಾಂತರ(ಮರು ಮತಾಂತರ?) ಕಾರ್ಯಕ್ರಮ ರದ್ದು ಮಾಡಲು ಕಾರಣವೇನು? ಎಂಬುದು ಇನ್ನೂ ತಿಳಿದು ಬಂದಿಲ್ಲ. ಆಲಿಘಡ್ ನಗರದಲ್ಲಿ ಎರಡು ದಿನಗಳ ಕಾಲ ಸಿಆರ್ ಪಿಸಿ ಸೆಕ್ಷನ್ 144 ಜಾರಿಯಲ್ಲಿದೆ. ಮತಾಂತರ ಕಾರ್ಯಕ್ರಮಕ್ಕೆ ಪ್ರಗತಿಪರರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. [ಮತಾಂತರ ಏಕೆ? ಈ ಬಗ್ಗೆ ಕಾನೂನು ಏನು ಹೇಳುತ್ತದೆ?]

ಬಿಜೆಪಿ ಸಂಸದ ಯೋಗಿ ಆದಿತ್ಯಾನಂದ್ ಅವರು ಕೂಡಾ ಈ ಮರು ಮತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸುದ್ದಿ ಬಂದಿತ್ತು. ಅದರೆ, ಸದ್ಯಕ್ಕೆ ಕಾರ್ಯಕ್ರಮ ನಿಗದಿತ ರದ್ದಾಗಿದೆ. ಈ ಬಗ್ಗೆ ಹಿಂದೂ ಸಂಘಟಕಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯ ಬಿಜೆಪಿ ಘಟಕದ ಅಧ್ಯಕ್ಷ ದೇವರಾಜ್ ಸಿಂಗ್ ಹೇಳಿದ್ದಾರೆ.

Hindu outfit calls off ceremony

'ಘರ್‌ ವಾಪಸಿ' ಹೆಸರು ಬದಲು?: ಅದರೆ, ಕಾರ್ಯಕ್ರಮದ ಹೆಸರನ್ನು 'ಘರ್‌ ಘರ್‌ ಸ್ವಾಗತ್‌' ಎಂದು ಮರುನಾಮಕರಣ ಮಾಡಿ ಮತಾಂತರ ನಡೆಸಲು ಸಂಘಟನೆಗಳು ತೀರ್ಮಾನಿಸುವ ಸುಳಿವು ಕೂಡಾ ಸಿಕ್ಕಿದೆ. ಅದರೆ, ಇದಕ್ಕೆ ಸ್ಥಳೀಯ ಆಡಳಿತ ಮತ್ತು ವಿರೋಧ ಪಕ್ಷಗಳ ಪ್ರತಿರೋಧ ಕಂಡು ಬಂದಿದೆ.

ಆರ್‌ಎಸ್‌ಎಸ್‌, ಧರ್ಮ ಜಾಗರಣ ಸಮಿತಿ, ವಿಹೆಚ್‌ಪಿ, ಬಜರಂಗದಳ ಹಾಗೂ ಸ್ಥಳೀಯ ಬಿಜೆಪಿ ಘಟಕದ ಮುಖಂಡರು ಕಾರ್ಯಕ್ರಮದ ಉಸ್ತುವಾರಿ ನಡೆಸಿದ್ದಾರೆ. ಇತ್ತೀಚೆಗೆ ಬಿಜೆಪಿ ಸಂಸದ ಯೋಗಿ ಆದಿತ್ಯ ನಾಥ್ ಅವರ ಕ್ಷೇತ್ರದ ಗ್ರಾಮವೊಂದರಲಿ ಮತಾಂತರಗೊಂಡಿದ್ದ 27 ಜನರುಳ್ಳ ಐದು ಕುಟುಂಬವನ್ನು ಯಶಸ್ವಿಯಾಗಿ ಹಿಂದೂ ಧರ್ಮಕ್ಕೆ ಪುನಃ ಕರೆಸಿಕೊಳ್ಳಲಾಗಿದೆ. [ದಿಲ್ಶನ್ ಬಳಿ ಮತಾಂತರ ಬಗ್ಗೆ ಶೆಹ್ಜಾದ್ ಹೇಳಿದ್ದೇನು?]

ಆದರೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಯ್ ಬರೇಲಿ ಕ್ಷೇತ್ರದ 60 ಮುಸ್ಲಿಂ ಹಾಗೂ ಕ್ರೈಸ್ತ ಕುಟುಂಬವನ್ನು ಮರು ಮತಾಂತರ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್ ಘೋಷಿಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.ಸದ್ಯಕ್ಕೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ, ನಿಷೇಧಾಜ್ಞೆ ನಡುವೆಯೂ ಜನಸಂಪರ್ಕ ಸಾಧಿಸುವ ಯತ್ನ ಮುಂದುವರೆದಿದೆ.

ಹಿಂದೂ ಮುಖಂಡನ ಬಂಧನ: ಆಗ್ರಾದಲ್ಲಿ ಜನರನ್ನು ಬಲವಂತವಾಗಿ ಮತಾಂತರಗೊಳಿಸಿದ ಆರೋಪ ಹೊತ್ತಿರುವ ಹಿಂದೂ ಸಂಘಟನೆ ಮುಖಂಡ ನಂದ ಕಿಶೋರ್ ಬಾಲ್ಮಿಕಿ ಅವರನ್ನು ಆಗ್ರಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಂಗಳವಾರ ಬಂಧಿಸಲಾಗಿದೆ.

ಡಿಸೆಂಬರ್ 8 ರಂದು ಧರ್ಮ ಜಾಗರಣ್ ಮಂಚ್ ಮತ್ತು ಬಾಲ್ಮಿಕಿ ಬಲವಂತವಾಗಿ ಮತಾಂತರ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲ್ಮಿಕಿ ವಿರುದ್ಧ ಎಫ್‌ಐ ಆರ್ ದಾಖಲಿಸಲಾಗಿತ್ತು.ಬಾಲ್ಮಿಕಿ ಅವರ ಪುತ್ರ ರಾಹುಲ್ ಮತ್ತು ಸಂಬಂಧಿ ಕೃಷ್ಣ ಕುಮಾರ್ ಅವರನ್ನು ಬಂಧಿಸಲಾಗಿತ್ತು, ನಂತರ ಬಾಲ್ಮಿಕಿ ಪೊಲೀಸರಿಗೆ ಶರಣಾಗಿದ್ದಾರೆ. (ಪಿಟಿಐ)

English summary
Ending days of stand-off, Dharam Jagaran Samiti, a western UP-based Hindutva group, today called off its controversial conversion programme scheduled for December 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X