ಲಾರಿ -ಆಟೋರಿಕ್ಷಾ ಡಿಕ್ಕಿ, ಐವರು ಶಿವ ಭಕ್ತರು ಮೃತ

Posted By:
Subscribe to Oneindia Kannada

ಚಿತ್ತೂರು(ಆಂಧ್ರಪ್ರದೇಶ), ಫೆಬ್ರವರಿ 13: ಮಹಾ ಶಿವರಾತ್ರಿ ಪ್ರಯುಕ್ತ ಶ್ರೀಕಾಳಹಸ್ತಿ ದೇಗುಲಕ್ಕೆ ಭೇಟಿ ನೀಡಿ, ಮನೆಗೆ ಹಿಂತಿರುಗುತ್ತಿದ್ದ ಶಿವಭಕ್ತರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಚಿತ್ತೂರು ಜಿಲ್ಲೆಯ ಬುಚ್ಚಿನಾಯ್ಡು ಕಂಡ್ರಿಗ ತಾಲೂಕಿನಲ್ಲಿ ಈ ದುರ್ಘಟನೆ ನಡೆದಿದೆ. ಲಾರಿ ಹಾಗೂ ಆಟೋರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ್ದು, ಐವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

Chittoor district Road Accident kills Five

ಮೂವರು ಗಾಯಗೊಂಡಿದ್ದು, ತಿರುಪತಿಯ ರುಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಚಿತ್ತೂರಿನ ಚಾಲಕ ವೆಂಕಟರಮಣ, ರಾಮರಾವ್ ಮತ್ತು ಕುಮಾರಿ ಎಂದು ಗುರುತಿಸಲಾಗಿದೆ.

ಮೃತ ದೇಹಗಳನ್ನು ಶ್ರೀಕಾಳಹಸ್ತಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಚಿತ್ತೂರಿನ ಪೊಲೀಸರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chittoor : The mishap took place in Bucchinayadu Kandriga mandal when a speeding lorry collided into an auto-rickshaw at the 10th mile of forest check post.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ