ಅಮಿತ್ ಶಾ ಅರುಣಾಚಲ ಪ್ರದೇಶ ಭೇಟಿಗೆ ಚೀನಾ ಕ್ಯಾತೆ

ನವದೆಹಲಿ, ಫೆಬ್ರವರಿ 20: ಭಾರತದ ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್‌ನ ಭಾಗ ಎಂದು ಪ್ರತಿಪಾದಿಸುತ್ತಿರುವ ಚೀನಾ, ಅಲ್ಲಿಗೆ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೆ ಕ್ಯಾತೆ ತೆಗೆದಿದೆ.

ಅರುಣಾಚಲ ಪ್ರದೇಶದ 34ನೇ ರಾಜ್ಯೋತ್ಸವದ ಅಂಗವಾಗಿ ಫೆ. 20ರಂದು ಅಮಿತ್ ಶಾ ಅಲ್ಲಿಗೆ ಭೇಟಿ ನೀಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ, ಬೀಜಿಂಗ್‌ನ ಪ್ರಾದೇಶಿಕ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಮತ್ತು ಪರಸ್ಪರ ರಾಜಕೀಯ ನಂಬಿಕೆಗೆ ಹಾನಿ ಮಾಡಿದೆ ಎಂದು ಹೇಳಿದೆ.

ಅಮಿತ್ ಶಾ ಭೇಟಿಯನ್ನು ಬಲವಾಗಿ ವಿರೋಧಿಸುವುದಾಗಿ ಚೀನಾ ತಿಳಿಸಿದೆ. 'ಚೀನಾ-ಭಾರತದ ಪೂರ್ವ ವಲಯದ ಗಡಿ ಅಥವಾ ಚೀನಾದ ದಕ್ಷಿಣ ಭಾಗದ ಟಿಬೆಟ್ ಪ್ರದೇಶದ ಕುರಿತಾದ ಚೀನಾದ ನಿಲುವು ಸ್ಪಷ್ಟ ಮತ್ತು ಸ್ಥಿರವಾಗಿದೆ' ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಹೇಳಿದ್ದಾರೆ.

ಭಾರತ ಒಪ್ಪಂದ ಉಲ್ಲಂಘಿಸಿದೆ

ಭಾರತ ಒಪ್ಪಂದ ಉಲ್ಲಂಘಿಸಿದೆ

'ಅರುಣಾಚಲ ಪ್ರದೇಶ ಎನ್ನಲಾಗುವ ಪ್ರದೇಶವನ್ನು ಚೀನಾ ಸರ್ಕಾರ ಎಂದಿಗೂ ಗುರುತಿಸಿಲ್ಲ. ಚೀನಾದ ಟಿಬೆಟ್ ಪ್ರದೇಶದ ದಕ್ಷಿಣ ಭಾಗಕ್ಕೆ ಅಮಿತ್ ಶಾ ಭೇಟಿಯನ್ನು ಚೀನಾ ದೃಢವಾಗಿ ವಿರೋಧಿಸುತ್ತದೆ. ಇದು ಚೀನಾದ ಪ್ರಾದೇಶಿಕ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ. ಗಡಿ ಪ್ರದೇಶದ ಸ್ಥಿರತೆಯನ್ನು ಕಡೆಗಣಿಸಿದೆ. ಪರಸ್ಪರ ರಾಜಕೀಯ ನಂಬಿಕೆಯನ್ನು ಬುಡಮೇಲು ಮಾಡಿದೆ ಮತ್ತು ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸಿದೆ' ಎಂದು ಅವರು ಆರೋಪಿಸಿದ್ದಾರೆ.

ಗಡಿ ವಿಚಾರ ಜಟಿಲಗೊಳಿಸಬೇಡಿ

ಗಡಿ ವಿಚಾರ ಜಟಿಲಗೊಳಿಸಬೇಡಿ

ಗಡಿ ವಿವಾದವನ್ನು ಮತ್ತಷ್ಟು ಸಂಕೀರ್ಣಗೊಳಿಸಬಾರದು ಎಂದು ಚೀನಾ, ಭಾರತಕ್ಕೆ ಸಲಹೆ ನೀಡಿದೆ. 'ಗಡಿ ವಿಚಾರವನ್ನು ಮತ್ತಷ್ಟು ಜಟಿಲಗೊಳಿಸುವಂತಹ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಭಾರತವು ನಿಲ್ಲಿಸಬೇಕು. ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಎತ್ತಿಹಿಡಿಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು' ಎಂದು ಶುವಾಂಗ್ ಹೇಳಿದ್ದಾರೆ.

ರಾಜ್ಯದ ಸ್ಥಾನಮಾನ

ರಾಜ್ಯದ ಸ್ಥಾನಮಾನ

ಅರುಣಾಚಲ ಪ್ರದೇಶವು 1987ರ ಫೆ. 20ರಂದು ಕೇಂದ್ರಾಡಳಿತ ಪ್ರದೇಶದಿಂದ ಸಂಪೂರ್ಣ ರಾಜ್ಯದ ಸ್ಥಾನಮಾನ ಪಡೆದುಕೊಂಡಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮತ್ತು ವಿವಿಧ ಕೈಗಾರಿಕೆ ಹಾಗೂ ರಸ್ತೆ ಯೋಜನೆಗಳಿಗೆ ಚಾಲನೆ ನೀಡಲು ಗೃಹ ಸಚಿವ ಅಮಿತ್ ಶಾ, ಅಲ್ಲಿಗೆ ಭೇಟಿ ನೀಡಿದ್ದಾರೆ.

ಭೂಪಟ ನಾಶಪಡಿಸಿದ್ದ ಚೀನಾ

ಭೂಪಟ ನಾಶಪಡಿಸಿದ್ದ ಚೀನಾ

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ, ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಪ್ರತಿಪಾದಿಸುತ್ತಾ ಬಂದಿದೆ. ಇದುವರೆಗೂ ಗಡಿ ವಿವಾದವನ್ನು ಬಗೆಹರಿಸುವ ಸಲುವಾಗಿ ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳು 22 ಸುತ್ತಿನ ಮಾತುಕತೆಗಳನ್ನು ನಡೆಸಿದ್ದಾರೆ. ಅರುಣಾಚಲ ಪ್ರದೇಶವನ್ನು ಭಾರತದ ಭಾಗ ಎಂದು ತೋರಿಸಿರುವ 28,908 ವಿಶ್ವ ಭೂಪಟಗಳನ್ನು ಚೀನಾ ಕಳೆದ ವರ್ಷ ನಾಶಪಡಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+