3ನೇ ಮಹಾಯುದ್ಧ: ತೈವಾನ್‌ ನಾಶಕ್ಕೆ ಚೀನಾ ರಣಕಹಳೆ?

ತೈಪೆ: ಚೀನಾ ರೊಚ್ಚಿಗೆದ್ದಿದೆ, ಅಮೆರಿಕ ವಿರುದ್ಧದ ಸಿಟ್ಟಲ್ಲಿ ಬಡಪಾಯಿ ತೈವಾನ್‌ಗೆ ಬುದ್ಧಿ ಕಲಿಸಲು ಚೀನಾ ಮುಂದಾಗಿದೆ. 38 ಯುದ್ಧ ವಿಮಾನಗಳನ್ನ ಒಂದೇ ಬಾರಿಗೆ ತೈವಾನ್ ಕಡೆ ನುಗ್ಗಿಸಿ, 3ನೇ ಮಹಾಯುದ್ಧಕ್ಕೆ ಮುನ್ನುಡಿ ಬರೆಯುವ ತವಕದಲ್ಲಿ ಇರುವಂತೆ ಕಾಣುತ್ತಿದೆ. ಈ ಭಯಾನಕ ಸ್ಥಿತಿ ಕಂಡು ಬೆಚ್ಚಿಬಿದ್ದಿದೆ ತೈವಾನ್ (Taiwan) ಎಂಬ ಪುಟ್ಟ ದ್ವೀಪರಾಷ್ಟ್ರ.

ತೈವಾನ್ ವಿರುದ್ಧ ಚೀನಾ ಯುದ್ಧ ಸಾರುವ ಸ್ಥಿತಿ ನಿರ್ಮಿಸಿದ್ದ ಅಮೆರಿಕ ಈಗಲೂ ಕಿತಾಪತಿ ಮಾಡುತ್ತಿದೆ. ಪದೇಪದೆ ಚೀನಾ ಕೆರಳಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೆಲ ದಿನಗಳ ಹಿಂದಷ್ಟೇ ತೈವಾನ್ ಜಲಸಂಧಿ ಮೂಲಕ ಸೇನಾ ಹಡಗನ್ನು ಪ್ರಯಾಣಿಸಿಕೊಂಡು ಹೋಗಿತ್ತು ಅಮೆರಿಕ. ಈಗ ಇದೇ ಜಾಗದಲ್ಲಿ ಚೀನಾ 38 ಯದ್ಧ ವಿಮಾನ ಹಾಗೂ 6 ಯುದ್ಧನೌಕೆ ನುಗ್ಗಿಸಿ ವಾರ್ನಿಂಗ್ ಕೊಟ್ಟಿದೆ. ಹಾಗಾದರೆ ಚೀನಾದ ಈ ನಡೆಯಿಂದ ಮುಂದೆ ಏನೆಲ್ಲಾ ಆಗಬಹುದು? ತಿಳಿಯೋಣ ಬನ್ನಿ.

China once again sent combat drones and navy vessels towards Taiwan

ತೈವಾನ್ ವಿನಾಶಕ್ಕೆ ಚೀನಾ ಮುನ್ನುಡಿ?

ಚೀನಾ ಈಗ ತೈವಾನ್ ಬಳಿ ಹಾರಾಟ ನಡೆಸಿರುವ ಯುದ್ಧ ವಿಮಾನಗಳು ಮತ್ತು ಡ್ರೋನ್ ಶಕ್ತಿಶಾಲಿ ಹಾಗೂ ವಿನಾಶಕಾರಿ ಎಂದು ಗುರುತಿಸಿಕೊಂಡಿವೆ. ಎಸ್‌ಯು-30, ಎರಡು ಜೆ-16 ಹಾಗೂ ಟಿಬಿ-001 ಕಂಡು ತೈವಾನ್ ಬೆಚ್ಚಿಬಿದ್ದಿದೆ. ಕೆಲವೇ ದಿನಗಳ ಹಿಂದೆ ಇದೇ ರೀತಿ ನೂರಾರು ಯುದ್ಧ ವಿಮಾನಗಳನ್ನ ನುಗ್ಗಿಸಿ ತೈವಾನ್ ಎದೆ ನಡುಗುವಂತೆ ಮಾಡಿತ್ತು ಚೀನಾ. ಇದೀಗ ಮತ್ತೊಮ್ಮೆ ಅಂತಹದ್ದೇ ಕ್ರಮ ಕೈಗೊಳ್ಳುವ ಮೂಲಕ, ನನ್ನ ತಂಟೆಗೆ ಬಂದರೆ ಸರಿ ಇರಲ್ಲ ಎಂಬ ಸಂದೇಶವನ್ನ ಅಮೆರಿಕ ಮತ್ತು ತೈವಾನ್‌ಗೆ ರವಾನಿಸಿದಂತೆ ಕಾಣುತ್ತಿದೆ.

ತೈವಾನ್‌ಗೆ ಉಗ್ರರೂಪ ತೋರಿಸಿದ ಚೀನಾ

ಇತ್ತೀಚೆಗೆ ಸೋರಿಯಕೆಯಾಗಿದ್ದ ಅಮೆರಿಕದ ರಹಸ್ಯ ದಾಖಲೆಗಳಲ್ಲಿ ಚೀನಾ ಮತ್ತು ತೈವಾನ್, ಜಪಾನ್ ವಿಚಾರ ಕೂಡ ಪಸ್ತಾಪವಾಗಿತ್ತು. ತನ್ನ ಸಮಾನ ಶತ್ರುಗಳ ವಿರುದ್ಧ ಚೀನಾ 'ಬ್ರಹ್ಮಾಸ್ತ್ರ' ಸಿದ್ಧಗೊಳಿಸಿದೆ ಎಂದು ಅಮೆರಿಕದ ಗುಪ್ತಚರ ವರದಿ ತಿಳಿಸಿತ್ತು. ಆ ಪ್ರಕಾರ ಚೀನಾ ತಯಾರಿಸಿರುವ WZ-8 ಸೂಪರ್ ಸಾನಿಕ್ ಡ್ರೋನ್‌ ಮೂಲಕ ಜಪಾನ್, ಅಮೆರಿಕ & ತೈವಾನ್ ಎದೆ ನಡುಗಿಸಿತ್ತು. ಇಷ್ಟೆಲ್ಲಾ ಘಟನೆಗಳು ನಡೆದು ಕೆಲವೇ ದಿನ ಕಳೆದಿದೆ ಅಷ್ಟೇ, ಅಷ್ಟರಲ್ಲಿ ಚೀನಾ ಮತ್ತೊಮ್ಮೆ ತೈವಾನ್‌ಗೆ ತನ್ನ ಉಗ್ರ ರೂಪ ತೋರಿಸುತ್ತಿದೆ.

China once again sent combat drones and navy vessels towards Taiwan

ಉ.ಕೊರಿಯಾ ಜೊತೆ ಸೇರಿ ದಾಳಿ?

ಚೀನಾ-ತೈವಾನ್ ನಡುವೆ ಆಗಾಗ ಯುದ್ಧದ ವಾತಾವರಣ ನಿರ್ಮಾಣ ಆಗುತ್ತಲೇ ಇರುತ್ತದೆ. ಆದರೆ ಈ ಬಾರಿ ಸ್ಥಿತಿ ಗಂಭೀರವಾಗಿದೆ. ತೈವಾನ್‌ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಅಮೆರಿಕಕ್ಕೆ ಭೇಟಿ ನೀಡಿದ ತಕ್ಷಣ ಶತ್ರು ರಾಷ್ಟ್ರಕ್ಕೆ ಚೀನಾ ಆಘಾತ ನೀಡಿತ್ತು. ಇಷ್ಟೆಲ್ಲದರ ಮಧ್ಯೆ ಅಮೆರಿಕ ದಕ್ಷಿಣ ಚೀನಾ ಸಮುದ್ರದ ಅಕ್ಕಪಕ್ಕದ ರಾಷ್ಟ್ರಗಳ ಜೊತೆ ಜಂಟಿ ಸಮರಭ್ಯಾಸ ಆಯೋಜಿಸುತ್ತಿದೆ. ಇದರ ಪರಿಣಾಮ ಚೀನಾ ತನ್ನಲ್ಲಿರುವ ವಿನಾಶಕಾರಿ ಅಸ್ತ್ರಗಳನ್ನೆಲ್ಲಾ ಸಮರಕ್ಕೆ ಸಜ್ಜುಗೊಳಿಸುತ್ತಿದೆ. ಜೊತೆಗೆ ತೈವಾನ್‌ಗೆ ಆಗಾಗ ಶಾಕ್ ಕೊಡುತ್ತಲೇ ಇದೆ.

3ನೇ ಮಹಾಯುದ್ಧಕ್ಕೆ ಮುನ್ನುಡಿ?

ಅಮೆರಿಕ ತನ್ನ ಸುತ್ತಮುತ್ತಲೂ ಏನೆಲ್ಲಾ ಆಟ ಆಡುತ್ತಿದೆ ಎಂಬುದು ಚೀನಾಗೆ ಸರಿಯಾಗಿ ಗೊತ್ತಾಗಿದೆ. ಹೀಗಾಗಿಯೇ ಅಮೆರಿಕ ತನ್ನ ಸುತ್ತಮುತ್ತಲ ಯಾವುದೇ ದೇಶಕ್ಕೆ ಎಂಟ್ರಿ ಕೊಟ್ಟರೂ ಖಡಕ್ ಎಚ್ಚರಿಕೆ ನೀಡುತ್ತಿದೆ ಚೀನಾ. ಅದರಲ್ಲೂ ದಕ್ಷಿಣ ಚೀನಾ ಸಮುದ್ರದ ಆಸುಪಾಸಿನಲ್ಲಿ ಅಮೆರಿಕ ಕಂಡುಬಂದರೆ ಸರಿಯಾಗಿ ಪ್ರತ್ಯುತ್ತರ ನೀಡುತ್ತಿದೆ ಡ್ರ್ಯಾಗನ್. ಮುನ್ನೆಚ್ಚರಿಕೆ ಕ್ರಮವಾಗಿ ಹೊಸ ಹೊಸ ವಿನಾಶಕಾರಿ ಅಸ್ತ್ರ ಪ್ರಯೋಗದಲ್ಲಿ ಚೀನಾ ಸೇನೆ ಬ್ಯುಸಿಯಾಗುತ್ತಿದೆ. ಈ ಮೂಲಕ 3ನೇ ಮಹಾಯುದ್ಧಕ್ಕೆ ದಕ್ಷಿಣ ಚೀನಾ ಸಮುದ್ರಲ್ಲೇ ಮುನ್ನುಡಿ ಪಕ್ಕಾ ಆದರೂ ಅಚ್ಚರಿ ಪಡಬೇಕಿಲ್ಲ.

China once again sent combat drones and navy vessels towards Taiwan

ಒಟ್ನಲ್ಲಿ ಚೀನಾ ಕೆಂಗಣ್ಣಿನಿಂದ ಬಚಾವ್ ಆಗಿ ಖುಷಿಯಲ್ಲಿದ್ದ ತೈವಾನ್‌ಗೆ ಮತ್ತೆ ಶಾಕ್ ಸಿಕ್ಕಿದೆ. ಮತ್ತೊಮ್ಮೆ ಚೀನಾ ರೊಚ್ಚಿಗೆದ್ದು ದಾಳಿ ನಡೆಸುವ ಮುನ್ಸೂಚನೆ ನೀಡುತ್ತಿದೆ. ಇದೆಲ್ಲಾ ಎಲ್ಲಿಗೆ ಬಂದು ನಿಲ್ಲಲಿದೆ ಎಂಬುದನ್ನ ಕಾದು ನೋಡಬೇಕು. ಆದರೆ ಅಷ್ಟರೊಳಗೆ ತೈವಾನ್ ಮೇಲೆ ಚೀನಾ ದಾಳಿ ನಡೆಸಿದರೂ ಅಚ್ಚರಿ ಪಡಬೇಕಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+