ಆರೋಗ್ಯ ಸಮಸ್ಯೆಗಳುಳ್ಳ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮೊದಲು ಕೊರೊನಾ ಲಸಿಕೆ

ನವದೆಹಲಿ, ಆಗಸ್ಟ್‌ 24: ದೇಶದಲ್ಲಿ ಕೊರೊನಾ ಮೂರನೇ ಅಲೆ ಎಚ್ಚರಿಕೆ ನಡುವೆ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಸಂಬಂಧ ಪ್ರಯೋಗಗಳು ನಡೆಯುತ್ತಿವೆ.

ಇದೀಗ ಇತರೆ ಆರೋಗ್ಯ ಸಮಸ್ಯೆಗಳುಳ್ಳ ಹನ್ನೆರಡು ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆಯಲ್ಲಿ ಮೊದಲು ಆದ್ಯತೆ ನೀಡಲಾಗುತ್ತದೆ ಎಂದು ರಾಷ್ಟ್ರೀಯ ರೋಗನಿರೋಧಕ ತಾಂತ್ರಿಕ ಸಲಹಾ ತಂಡದ ಸರ್ಕಾರಿ ಸಲಹಾ ಸಮಿತಿ ತಿಳಿಸಿದೆ.

ಸದ್ಯಕ್ಕೆ 12 ವರ್ಷ ಮೇಲ್ಪಟ್ಟವರಿಗೆ ಝೈಡಸ್ ಕ್ಯಾಡಿಲಾದ ಝೈಕೋವ್ ಡಿ ಲಸಿಕೆಗೆ ಕಳೆದ ವಾರ ಅನುಮೋದನೆ ದೊರೆತಿದೆ. ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದು, ಸೋಂಕಿನ ಅಪಾಯ ಹೆಚ್ಚಿರುವವರಿಗೆ ಕೆಲವು ಪ್ರಮಾಣದ ಲಸಿಕೆಯನ್ನು ಮೀಸಲಿಡಲಾಗುವುದು ಎಂದು ಸಮಿತಿಯ ಅಧ್ಯಕ್ಷ ಎನ್‌.ಕೆ. ಅರೋರಾ ಮಾಹಿತಿ ನೀಡಿದ್ದಾರೆ.

Children Above 12 With Comorbidities Will Be Vaccinated First Says Govt Panel Chief

'ನಾವು ಸೆಪ್ಟೆಂಬರ್‌ನಿಂದ ತಿಂಗಳಿಗೆ ಹತ್ತು ಕೋಟಿ ಕೋವ್ಯಾಕ್ಸಿನ್ ಡೋಸ್‌ಗಳನ್ನು ಪಡೆಯಲು ಯೋಜನೆ ರೂಪಿಸಿದ್ದೇವೆ' ಎಂದು ಅರೋರಾ ತಿಳಿಸಿದರು.

ಭಾರತೀಯ ಔಷಧ ನಿಯಂತ್ರಕ ಸಂಸ್ಥೆ (ಡಿಸಿಜಿಐ) ಕಳೆದ ಶುಕ್ರವಾರ ಝೈಡಸ್ ಕ್ಯಾಡಿಲಾದ ಮೂರು ಡೋಸ್ ಡಿಎನ್‌ಎ ಲಸಿಕೆಯನ್ನು ವಯಸ್ಕರು ಹಾಗೂ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕಗೆ ಅನುಮೋದನೆ ನೀಡಿದ್ದು, ದೇಶದಲ್ಲಿ ಬಳಕೆಗೆ ಅನುಮೋದನೆ ಪಡೆದ ಆರನೇ ಲಸಿಕೆ ಇದಾಗಿದೆ.

ಕಂಪನಿಯು ವಾರ್ಷಿಕವಾಗಿ 100 ದಶಲಕ್ಷದಿಂದ 120 ಮಿಲಿಯನ್ ಡೋಸ್‌ಗಳ ಝೈಕೋವ್-ಡಿ ಲಸಿಕೆ ಉತ್ಪಾದನೆ ಮಾಡಲು ಯೋಜಿಸಿದೆ ಹಾಗೂ ಲಸಿಕೆಯನ್ನು ಸಂಗ್ರಹಿಸಲು ಆರಂಭಿಸಿದೆ.

ಅಹಮದಾಬಾದ್ ಮೂಲದ ಔಷಧ ಉತ್ಪಾದನಾ ಸಂಸ್ಥೆ ಝೈಡಸ್ ಕ್ಯಾಡಿಲಾ ತನ್ನ ಝೈಕೋವ್-ಡಿ ಲಸಿಕೆಯನ್ನು ದೇಶದಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳು ಮತ್ತು ವಯಸ್ಕರಿಗೆ ಈ ಲಸಿಕೆ ನೀಡಲು ಅನುಮತಿ ನೀಡಲಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ಝೈಡಸ್ ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್ ಕಂಪನಿ ಉತ್ಪಾದಿಸುವ ಕೊರೊನಾ ಸೋಂಕಿನ ಝೈಕೋವ್-ಡಿ ಲಸಿಕೆ ಸೋಂಕಿನ ವಿರುದ್ಧ ಶೇ.66.60ರಷ್ಟು ಪರಿಣಾಮಕಾರಿಯಾಗಿದ್ದು, ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ಕೋರಿ ಕಳೆದ ಜುಲೈ 1ರಂದೇ ಅರ್ಜಿಯನ್ನು ಸಲ್ಲಿಸಲಾಗಿತ್ತು. ಜೈವಿಕ ತಂತ್ರಜ್ಞಾನ ವಿಭಾಗ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಂಶೋಧಿಸಿರುವ ಝೈಡಸ್ ಕ್ಯಾಡಿಲಾ ಕಂಪನಿ ಉತ್ಪಾದಿಸುವ ಝೈಕೋವ್-ಡಿ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದ ಎರಡು ತಿಂಗಳಿನಲ್ಲಿ ಲಸಿಕೆ ಬಿಡುಗಡೆಗೊಳಿಸಲಾಗುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ.

Children Above 12 With Comorbidities Will Be Vaccinated First Says Govt Panel Chief

ಜೈವಿಕ ತಂತ್ರಜ್ಞಾನ ಇಲಾಖೆಯ ಪಾಲುದಾರಿಕೆಯಲ್ಲಿ ಲಸಿಕೆ ತಯಾರಾಗುತ್ತಿದೆ. ZyCov-D ಒಂದು "ಪ್ಲಾಸ್ಮಿಡ್ ಡಿಎನ್‌ಎ" ಲಸಿಕೆ ಪ್ಲಾಸ್ಮಿಡ್ ಡಿಎನ್‌ಎ ಅಣುವಿನಿಂದ ಅಭಿವೃದ್ಧಿಗೊಳಿಸಲಾಗಿದೆ.

ಝೈಕೋವ್ ಡಿ ಕೊರೊನಾ ಲಸಿಕೆ ಡೆಲ್ಟಾ ಪ್ರಭೇದದ ವಿರುದ್ಧವೂ ಪರಿಣಾಮಕಾರಿ ಎನ್ನಲಾಗಿದ್ದು, 12ರಿಂದ18 ವರ್ಷದವರ ಮೇಲೆ ಲಸಿಕೆ ಪ್ರಯೋಗ ಯಶಸ್ವಿಯಾಗಿದೆ ಎಂದು ತಯಾರಿಕಾ ಸಂಸ್ಥೆ ಹೇಳಿದೆ. ಝೈಡಸ್‌ ಕ್ಯಾಡಿಲಾ ವರ್ಷಕ್ಕೆ 120 ಮಿಲಿಯನ್ ಡೋಸ್‌ಗಳನ್ನು ತಯಾರಿಸಲು ಹೊಸ ಸೌಲಭ್ಯವನ್ನು ಸ್ಥಾಪಿಸುತ್ತಿದೆ. ಇದರರ್ಥ ಒಂದು ವರ್ಷದಲ್ಲಿ 40 ಮಿಲಿಯನ್‌ ಜನರಿಗೆ ZyCov-D ಜನರಿಗೆ ನೀಡಬಹುದು.

ಭಾರತ ಸರ್ಕಾರವು ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಆರು ಲಸಿಕೆಗಳನ್ನು ಅಧಿಕೃತಗೊಳಿಸಿದೆ. ಕೋವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್, ಮಾಡೆರ್ನಾ ಹಾಗೂ ಜಾನ್ಸನ್ ಆಂಡ್ ಜಾನ್ಸನ್‌ನ ಒಂದೇ ಡೋಸ್ ಲಸಿಕೆ. ಇದೀಗ ಝೈಕೋವ್ ಡಿ ಲಸಿಕೆ ಸೇರ್ಪಡೆಯಾಗಿದೆ.

ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ಅನುಮೋದಿಸುವ ಪ್ರಕ್ರಿಯೆಯು ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ವೇಳೆಗೆ ಆರಂಭವಾಗಲಿದೆ ಎಂದು ಸಿಎನ್‌ಬಿಸಿ ವರದಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+