Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ
ಉತ್ತರ ಪ್ರದೇಶ: ಮದುವೆ ಅಂದಮೇಲೆ ಅಲ್ಲಿ ತಮಾಷೆ, ಸಡಗರ ಇರುವುದು ಸಹಜ. ಆದರೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದ ಒಂದು ಮದುವೆ ಸಮಾರಂಭ ಮಾತ್ರ ಅಕ್ಷರಶಃ ಕುಸ್ತಿ ಅಖಾಡವಾಗಿ ಬದಲಾಗಿದೆ. ಇದಕ್ಕೆ ಕಾರಣವಾದದ್ದು ಮಾತ್ರ ಅತಿ ವಿಚಿತ್ರ, ಅದು ಬಿರಿಯಾನಿಯಲ್ಲಿನ 'ಚಿಕನ್ ಲೆಗ್ ಪೀಸ್' (Chicken Leg Piece)!. ಹೌದು, ಲೆಗ್ಪೀಸ್ಗಾಗಿ ಮದುವೆ ಸಮಾರಂಭ ರಣರಂಗವಾಗಿದೆ.
ಲೆಗ್ ಪೀಸ್ ಇಲ್ಲದ್ದಕ್ಕೆ ಶುರುವಾಯ್ತು ಗಲಾಟೆ
ಬ್ಯಾಂಕ್ವೆಟ್ ಹಾಲ್ನಲ್ಲಿ ಅದ್ಧೂರಿಯಾಗಿ ಮುಸ್ಲಿಂ ಸಮುದಾಯದ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಅತಿಥಿಗಳು ಊಟಕ್ಕೆ ಕುಳಿತಾಗ ಬಿರಿಯಾನಿ ಬಡಿಸಲಾಯಿತು. ಆದರೆ, ಕೆಲವು ಅತಿಥಿಗಳಿಗೆ ಬಡಿಸಿದ ಬಿರಿಯಾನಿಯಲ್ಲಿ ಚಿಕನ್ ಲೆಗ್ ಪೀಸ್ಗಳು ಇರಲಿಲ್ಲ. ಈ ಸಣ್ಣ ವಿಷಯವೇ ದೊಡ್ಡ ವಿವಾದಕ್ಕೆ ಕಾರಣವಾಯಿತು. ಮೊದಲು ಬಡಿಸುವವರೊಂದಿಗೆ ಆರಂಭವಾದ ಮಾತಿನ ಚಕಮಕಿ, ಕ್ಷಣಾರ್ಧದಲ್ಲಿ ವರ ಮತ್ತು ವಧುವಿನ ಕಡೆಯವರ ನಡುವಿನ ದೊಡ್ಡ ಜಗಳಕ್ಕೆ ಕಾರಣವಾಗಿದೆ.

ಪ್ಲೇಟ್ಗಳು ಮತ್ತು ಚೇರ್ಗಳ ಹಾರಾಟ
ಒಂದು ಲೆಗ್ ಪೀಸ್ಗಾಗಿ ಶುರುವಾದ ಈ ಕಿರಿಕ್, ಮಂಟಪದಲ್ಲಿ ದೊಡ್ಡ ಯುದ್ಧವನ್ನೇ ಸೃಷ್ಟಿಸಿತು. ಅತಿಥಿಗಳು ಪರಸ್ಪರ ಪ್ಲೇಟ್ಗಳನ್ನು ಎಸೆಯಲು ಆರಂಭಿಸಿದರು. ಅಷ್ಟೇ ಅಲ್ಲದೆ, ಹಾಲಿನಲ್ಲಿದ್ದ ಪ್ಲಾಸ್ಟಿಕ್ ಕುರ್ಚಿಗಳನ್ನು ಬಳಸಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಬಿರಿಯಾನಿ ತಿನ್ನಬೇಕಿದ್ದ ಜಾಗದಲ್ಲಿ ಕಾಳಗ ಮತ್ತು ಕಿರುಚಾಟಗಳು ಕೇಳಿಬಂದವು.
ವಿಡಿಯೋ ವೈರಲ್: ನೆಟ್ಟಿಗರ ಫನ್ನಿ ಕಾಮೆಂಟ್ಸ್
ಈ ಇಡೀ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಸುಂದರವಾಗಿ ಸಿಂಗರಿಸಲ್ಪಟ್ಟಿದ್ದ ಮಂಟಪವು ಕ್ಷಣಮಾತ್ರದಲ್ಲಿ ಚಲ್ಲಾಪಿಲ್ಲಿಯಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದನ್ನು ಕಂಡ ನೆಟ್ಟಿಗರು, "ಒಂದು ಲೆಗ್ ಪೀಸ್ಗಾಗಿ ಇಷ್ಟೊಂದು ಸಾಹಸವೇ?" ಎಂದು ತಮಾಷೆ ಮಾಡುತ್ತಿದ್ದಾರೆ. ಅಂತಿಮವಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಅತಿಥಿಗಳ ಹೊಟ್ಟೆ ತುಂಬುವ ಮೊದಲೇ ಮಂಟಪದ ಶಾಂತಿ ಮಾತ್ರ ಹಾರಿಹೋಗಿತ್ತು.
Chaos at a Muslim wedding in Amroha, Uttar Pradesh: Guests brawled over chicken leg pieces in biryani, hurling chairs and overturning tables in a scene resembling a free-for-all.
— Mahender Bogi (@xxmahibogixx) March 29, 2026
Video from the banquet hall has gone viral. Police informed. pic.twitter.com/bdBGdtlQF0
ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳಲ್ಲಿ ತಮಗೆ ಬೇಕಾದ್ದು ಸಿಗಲೇಬೇಕು ಎನ್ನುವ ಮನಸ್ಥಿತಿಯು ಅತಿರೇಕಕ್ಕೆ ಹೋಗುತ್ತಿದೆ. ಊಟದ ಮೇಲಿನ ಹಕ್ಕಿಗಾಗಿ ಬೇರೆಯವರ ಜೀವನದ ಅತಿ ದೊಡ್ಡ ದಿನವನ್ನೇ ಹಾಳು ಮಾಡುವುದು ಈ ವಿಕೃತ ಮನಸ್ಥಿತಿಗೆ ಸಾಕ್ಷಿಯಾಗಿದೆ. "ಸಂಭ್ರಮವನ್ನು ಗೌರವದಿಂದ ಆಚರಿಸಿ, ಅಹಂಕಾರದಿಂದಲ್ಲ ಎಂದು ವಿಡಿಯೋ ನೋಡಿ ಹಲವರು ಕಾಮೆಂಟ್ ಮಾಡುತ್ತಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಊಟಕ್ಕಾಗಿ ಈ ಮಟ್ಟಕ್ಕೆ ಇಳಿಯುವ ಜನರ ಸಂಸ್ಕಾರದ ಬಗ್ಗೆ ನೆಟ್ಟಿಗರು ಪ್ರಶ್ನೆ ಎತ್ತಿದ್ದಾರೆ. ಅಂತಿಮವಾಗಿ ಈ ಘಟನೆಯಿಂದ ವರ ಮತ್ತು ವಧುವಿನ ಕುಟುಂಬದವರ ನೆಮ್ಮದಿ ಹಾಳಾಗಿದ್ದು, ಒಂದು ಸುಂದರ ನೆನಪಾಗಬೇಕಿದ್ದ ಮದುವೆ ದಿನವು ಕಹಿಯ ನೆನಪಾಗಿ ಉಳಿಯುವಂತಾಗಿದೆ.
-
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಸಕಲೇಶಪುರದಲ್ಲಿ ಫೋಟೋಗ್ರಾಫರ್ಗಳ ಮೇಲೆ ಹಲ್ಲೆ ಪ್ರಕರಣ: ದುಬಾರಿ ಕ್ಯಾಮೆರಾಗೆ ಹಾನಿ, ಆರೋಪಿಗಳ ಬಂಧನ -
‘ಲವ್ ಮಾಕ್ಟೇಲ್ 3’ ಕಥೆ ವಿವಾದ ಸುಖಾಂತ್ಯ: ಫಿಲ್ಮ್ ಚೇಂಬರ್ ಸಭೆಯಲ್ಲಿ ಡಾರ್ಲಿಂಗ್ ಕೃಷ್ಣ-ಗುರು ದೇಶಪಾಂಡೆ ಸಂಧಾನ ಯಶಸ್ವಿ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ













Click it and Unblock the Notifications