ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ನಿಧನ

ರಾಯ್ ಪುರ್, ಮೇ 29: ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ನಿಧನರಾಗಿದ್ದಾರೆ. ಜೋಗಿ ಅವರ ನಿಧನವಾರ್ತೆಯನ್ನು ಅವರ ಪುತ್ರ ಅಮಿತ್ ಜೋಗಿ ಅವರು ತಿಳಿಸಿದ್ದಾರೆ. ಅಮಿತ್ ಅವರು ಶುಕ್ರವಾರ ಮಧ್ಯಾಹ್ನ ಟ್ವೀಟ್ ಮಾಡಿ ಈ ದುಃಖದ ವಿಷಯವನ್ನು ಹಂಚಿಕೊಂಡಿದ್ದಾರೆ.

Recommended Video

      ನರಕಯಾತನೆ ಅನುಭವಿಸ್ತಾಯಿದಾರೆ ಕ್ವಾರಂಟೈನ್ ನಿವಾಸಿಗಳು | Oneindia Kannada

      ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರು ಮೇ 10ರಂದು ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಾಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೋಮಾಕ್ಕೆ ಜಾರಿದ್ದರು.

      Chhattisgarh : Former Chief Minister Ajit Jogi passes away

      ಶ್ರೀ ನಾರಾಯಣ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನೆರವಿನಿಂದ ಉಸಿರಾಟ ನಡೆಸಿದ್ದರು. ಯಾವುದೇ ಔಷಧೋಪಚಾರಕ್ಕೆ ಅವರ ದೇಹ ಸ್ಪಂದಿಸುತ್ತಿಲ್ಲ ಎಂದು ವೈದಾಧಿಕಾರಿ ಹೇಳಿದ್ದರು. ಇಂದು ದೇಹದ ಪರಿಸ್ಥಿತಿ ಸಂಪೂರ್ಣವಾಗಿ ಸ್ಥಗಿತಗೊಂಡು ಕೊನೆಯುಸಿರೆಳೆದಿದ್ದಾರೆ. 2004ರಲ್ಲಿ ಅಪಘಾತಕ್ಕೊಳಗಾಗಿದ್ದ ಅಜಿತ್ ಅವರು ಗಾಲಿಕುರ್ಚಿಯಲ್ಲಿ ಹೆಚ್ಚು ಕಾಲ ಕಳೆದಿದ್ದರು.

      74ವರ್ಷ ವಯಸ್ಸಿನ ಅಜಿತ್ ಜೋಗಿ ಅವರು ಐಪಿಎಸ್ ಹಾಗೂ ಐಎಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ಭಾಯಿಸಿದ್ದರು. 1986ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ಅಲ್ಲಿಂದ ಮೂವತ್ತು ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿದ್ದರು. ಪಕ್ಷದಲ್ಲಿ ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಆರೋಪಿಸಿ, 2016ರಲ್ಲಿ ಕಾಂಗ್ರೆಸ್ ತೊರೆದು, ಹೊಸ ಪಕ್ಷ ಸ್ಥಾಪನೆ ಮಾಡಿದರು. ಮಾಯಾವತಿ ಅವರ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದರು. ಆದರೆ, ಅಧಿಕಾರ ಕೈ ತಪ್ಪಿತ್ತು. ಕಾಂಗ್ರೆಸ್ಸಿನ ಭೂಪೇಶ್ ಬಘೇಲ್ ಅವರು ಮುಖ್ಯಮಂತ್ರಿಯಾದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+