Chhattisgarh Poll: ಮಹಿಳೆಯರಿಗೆ ವರ್ಷಕ್ಕೆ 15,000 ರೂ. ಹಣ: ಕಾಂಗ್ರೆಸ್‌ನ ಹೊಸ ಭರವಸೆ
ಛತ್ತಿಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕೊಡುಗೆಗಳ ಪೈಪೋಟಿ ಜೋರಾಗಿ ನಡೆಯುತ್ತಿದೆ. ವಿವಾಹವಾದ ಮಹಿಳೆಯರಿಗೆ ವರ್ಷಕ್ಕೆ 12,000 ರೂ. ನೀಡುವುದಾಗಿ ಬಿಜೆಪಿ ಭರವಸೆ ನೀಡಿದ್ದ ಬೆನ್ನಲ್ಲೇ ಕಾಂಗ್ರೆಸ್ ಇನ್ನೂ 3000 ರೂಪಾಯಿ ಸೇರಿಸಿ 15000 ರೂಪಾಯಿಗಳನ್ನು ಎಲ್ಲಾ ಮಹಿಳೆಯರಿಗೆ ನೀಡುವುದಾಗಿ ಘೋಷಣೆ ಮಾಡಿದೆ.
ಎರಡನೇ ಹಂತದ ವಿಧಾನಸಭೆ ಚುನಾವಣೆಗೆ ಐದು ದಿನಗಳ ಮುಂಚಿತವಾಗಿ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಅವರು ತಮ್ಮ ಸರ್ಕಾರವು ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲಾ ಮಹಿಳೆಯರಿಗೆ ವಾರ್ಷಿಕವಾಗಿ 15,000 ರೂಪಾಯಿಗಳನ್ನು ನೀಡುವುದಾಗಿ ಭಾನುವಾರ ಘೋಷಿಸಿದರು.

"ಛತ್ತೀಸ್‌ಗಢ ಗೃಹ ಲಕ್ಷ್ಮಿ ಯೋಜನೆ, ಮಹಿಳೆಯರ ಖಾತೆಯಲ್ಲಿ ಪ್ರತಿ ವರ್ಷ 15,000 ರೂ. ನೀಡಲಾಗುತ್ತದೆ, ಇದಕ್ಕಾಗಿ ಫಾರ್ಮ್ ಅನ್ನು ಭರ್ತಿ ಮಾಡಬೇಡಿ. (ಬಿಜೆಪಿಯವರು ವಿವಾಹಿತ ಮಹಿಳೆಯರಿಗೆ 12,000 ರೂ. ನೀಡುವ ಉದ್ದೇಶದಿಂದ ಫಾರಂಗಳನ್ನು ಭರ್ತಿ ಮಾಡಿಸಿಕೊಳ್ಳುತ್ತಿದ್ದಾರೆ) ನನ್ನ ತಾಯಿ ಮತ್ತು ಸಹೋದರಿಯರೇ, ಸಾಲಿನಲ್ಲಿ ನಿಲ್ಲಬೇಡಿ! ಐದು ವರ್ಷಗಳ ಕಾಲ ಛತ್ತೀಸ್‌ಗಢದ ಜನರಿಗೆ ಲಕ್ಷ್ಮಿದೇವಿ ತನ್ನ ಆಶೀರ್ವಾದವನ್ನು ನೀಡಿದ್ದಾಳೆ ಮತ್ತು ನಾವು ಹೊಸ ಛತ್ತೀಸ್‌ಗಢದ ನಮ್ಮ ಮಿಷನ್ ಅನ್ನು ಪ್ರಾರಂಭಿಸಿದ್ದೇವೆ. ನನ್ನ ಛತ್ತೀಸ್‌ಗಢ ಶ್ರೀಮಂತವಾಗಬೇಕು ಮತ್ತು ಬಡತನದ ಶಾಪವನ್ನು ತೊಲಗಿಸಬಹುದು ಎಂಬ ಸಂಕಲ್ಪದೊಂದಿಗೆ ನಮ್ಮ ಸರ್ಕಾರ ಐದು ವರ್ಷಗಳ ಕಾಲ ಕೆಲಸ ಮಾಡಿದೆ." ಎಂದು ಸಿಎಂ ಭೂಪೇಶ್ ಬಾಘೆಲ್ ಘೋಷಿಸಿದರು.
"ದೀಪಾವಳಿಯ ಶುಭ ಸಂದರ್ಭದಲ್ಲಿ, ಛತ್ತೀಸ್‌ಗಢದಲ್ಲಿ ಸರ್ಕಾರ ರಚಿಸಲು ಸಹಾಯ ಮಾಡಲು ನೀವು ಕಾಂಗ್ರೆಸ್‌ಗೆ ಮತ ಹಾಕಿದರೆ, ನಾವು ಛತ್ತೀಸ್‌ಗಢ ಗೃಹ ಲಕ್ಷ್ಮಿ ಯೋಜನೆ ಪ್ರಾರಂಭಿಸುತ್ತೇವೆ, ಅದರ ಅಡಿಯಲ್ಲಿ ನಾವು ಪ್ರತಿ ಮಹಿಳೆಗೆ ವರ್ಷಕ್ಕೆ 15,000 ರೂ ನೀಡುತ್ತೇವೆ ಎಂದು ನಾನು ಘೋಷಿಸುತ್ತೇನೆ. ಸರ್ಕಾರವೇ ನಿಮ್ಮ ಮನೆಗಳ ಸಮೀಕ್ಷೆ ನಡೆಸುತ್ತದೆ. ಎಲ್ಲವೂ ಆನ್‌ಲೈನ್ ಆಗಲಿದ್ದು, ನೇರವಾಗಿ ಖಾತೆಗೆ ಹಣ ಬರಲಿದೆ. ಸರದಿಯಲ್ಲಿ ನಿಲ್ಲುವ ಅಗತ್ಯವಿಲ್ಲ" ಎಂದು ಬಘೇಲ್ ಸುದ್ದಿಗಾರರಿಗೆ ತಿಳಿಸಿದರು.
ಮಹಿಳಾ ಮತದಾರರ ಸೆಳೆಯಲು ಕಸರತ್ತು
ರಾಜ್ಯದಲ್ಲಿ ಪುರುಷರಿಗಿಂತ ಮಹಿಳೆಯರ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಕಳೆದ ಬಾರಿ ಕಾಂಗ್ರೆಸ್ ಮದ್ಯ ನಿಷೇಧದ ಭರವಸೆ ನೀಡಿತ್ತು, ಇದು ಮಹಿಳೆಯರ ಮತಗಳನ್ನು ಪಡೆಯಲು ಸಹಾಯ ಮಾಡಿದೆ ಎಂದು ಹೇಳಲಾಗಿದೆ ಆದರೆ ನಿಷೇಧವನ್ನು ಜಾರಿಗೆ ತರುವಲ್ಲಿ ಅದರ ಸರ್ಕಾರ ವಿಫಲವಾಗಿದೆ.
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ವಿವಾಹಿತ ಮಹಿಳೆಯರಿಗೆ ವರ್ಷಕ್ಕೆ 12000 ರೂ.ಗಳ ನಿರ್ದಿಷ್ಟ ಭರವಸೆ ನೀಡಿದೆ. ಈಗ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿ 18 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದ ಮಹಿಳೆಯರಿಗೆ ವರ್ಷಕ್ಕೆ 15,000 ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದೆ.
ಕಾಂಗ್ರೆಸ್ ಕೃಷಿ ಸಾಲ ಮನ್ನಾ ಘೋಷಣೆ ಮಾಡಿದ್ದು, ಕಳೆದ ಬಾರಿ ರಾಜ್ಯದ ಬೊಕ್ಕಸಕ್ಕೆ ಸುಮಾರು 9,500 ಕೋಟಿ ರೂ. ಹಳೆ ಪಿಂಚಣಿ ಯೋಜನೆ ಜಾರಿ ಮಾಡುವ ಭರವಸೆಯನ್ನು ಆಡಳಿತ ಪಕ್ಷ ಕಾಂಗ್ರೆಸ್ ನೀಡಿದೆ.
ಛತ್ತೀಸ್‌ಗಢದಲ್ಲಿ ಈಗ ನವೆಂಬರ್ 17 ರಂದು ಮತದಾನ ನಡೆಯಲಿದೆ ಮತ್ತು ಎರಡೂ ಹಂತಗಳ ಮತಗಳನ್ನು ಡಿಸೆಂಬರ್ 3 ರಂದು ಎಣಿಕೆ ಮಾಡಲಾಗುತ್ತದೆ. ಮೊದಲ ಹಂತದ ಮತದಾನ ನವೆಂಬರ್ 7 ರಂದು ನಡೆದಿತ್ತು.












Click it and Unblock the Notifications